ಅಕ್ಷರ ಕಲಿಸಿದ ಅಕ್ಷರದವ್ವಗೆ
ವಂದಿಸುವೆ ನಾ ವಂದಿಸುವೆ
ದೇಶದ ಪ್ರಥಮ ಶಿಕ್ಷಕಿಗೆ
ಸಾವಿತ್ರಿಬಾಯಿ ಫುಲೆಯರಿಗೆ
ಮಹಾರಾಷ್ಟ್ರದ ಸತಾರ ಜಿಲ್ಲೆಯ
ನೈಗಾಂನ್ ನಲ್ಲಿ ಜನಿಸಿದಳು
ನೇವಸೆ ಪಾಟೀಲರೆಂಬುವರ
ಹೆಮ್ಮೆಯ ಪುತ್ರಿಯು ಸಾವಿತ್ರಿಯು
ಸಮಾಜ ಸುಧಾರಕ ಜ್ಯೋತಿ ಬಾ ಫುಲೆಯರ ಕೈ ಹಿಡಿದು ಮಡದಿಯಾದಳು.
ಶಿಕ್ಷಣ ಕಲಿತು ಹೆಣ್ಣು ಮಕ್ಕಳಿಗೆ
ಅಕ್ಷರ ಜ್ಞಾನವ ನೀಡಿದಳು
ಸಮಾಜಸೇವೆಯ ಮಾಡುತ ಮಹಿಳೆಯ ಹಕ್ಕುಗಳಿಗೆ ಹೋರಾಡಿದಳು
ಸ್ತ್ರೀ ಶೋಷಣೆ ನಡೆಯುವ ಅಂದಿನ ಸಮಾಜವನು ಎದುರಿಸಿದವಳು
ಸತಿಸಹಗಮನ ಕೇಶಮುಂಡನ ಅನಿಷ್ಟಗಳ ಖಂಡಿಸಿದವಳು
ವಿದ್ಯೆ ಕಲಿಸುವದ ಸಹಿಸದ ಜನ ಮೈ ಮೇಲೆ ಸಗಣಿ ಕೆಸರೆರಚಿದರು
ಅವಮಾನಗಳಿಗೆ ಎದೆಗುಂದದೆ
ಹಗಲಿರುಳು ದುಡಿದ ಛಲಗಾರ್ತಿಯು
ವಿದ್ಯೆ ಕಲಿಸುತ ಅನಾಥ ಮಕ್ಕಳ ಸಲುಹಿದಂತ ಮಹಾತಾಯಿಯು
*ಲೇಖಕರು *✍️ಶ್ರೀಮತಿ ಮಮತಾ ಪೂಜಾರ
ಶಿಕ್ಷಕಿ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿರಗೂರ
ಸಾ:- ಹಾರೂಗೇರಿ
ತಾ:- ರಾಯಬಾಗ
ಜಿ:- ಬೆಳಗಾವಿ