ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಕಾಗವಾಡ :ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ *ಜಕ್ಕಾರಟ್ಟಿ* ಗ್ರಾಮದ ಶಾಂತಿನಗರ ತೋಟದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು *ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ* ಅವರು ಪೂಜೆ ಸಲ್ಲಿಸಿ, ಉದ್ಘಾಟನೆ ನೇರವೇರಿಸಿದರು.
ಈ ಸಮಯದಲ್ಲಿ ಸ್ಥಳೀಯರು ಮಾತನಾಡಿ ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಮತಕ್ಷೇತ್ರದಲ್ಲಿ ನೀರಾವರಿ, ರಸ್ತೆ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಈಗಾಗಲೇ ಪ್ರತಿಯೊಂದು ಗ್ರಾಮದಲ್ಲಿ ಶಾಲಾ ಕೊಣೆಗಳನ್ನು ನಿರ್ಮಿಸಿದ್ದಾರೆ, ಅದೇ ರೀತಿ ಇತ್ತೀಚೆಗೆ ಸುಮಾರು 60 ಹೊಸ ಅಂಗನವಾಡಿ ಕೇಂದ್ರಗಳನ್ನು ಮಂಜೂರು ಗೊಳಿಸಿ ಇತಿಹಾಸ ನಿರ್ಮಿಸಿದ್ದಾರೆ. ಅದೇ ಪ್ರಕಾರ ನಮ್ಮ ಜಕಾರಟ್ಟಿ ಗ್ರಾಮದ ಶಾಂತಿನಗರದಲ್ಲಿ ಅಂಗನವಾಡಿ ಕೇಂದ್ರವನ್ನು ಮಂಜೂರು ಗೊಳಿಸಿದ್ದು, ಆದ್ದರಿಂದ ನಮ್ಮ ಜನಪ್ರಿಯ ಶಾಸಕರಿಗೆ ಸಮಸ್ತ ನಮ್ಮ ಗ್ರಾಮಸ್ಥರು ವತಿಯಿಂದ ಅಭಿನಂದನೆ ಕೋರುತ್ತೇವೆ ಎಂದರು.
ಈ ಸಮಯದಲ್ಲಿ ಸ್ಥಳೀಯ ಮುಖಂಡರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಎಲ್ಲ ಸದಸ್ಯರು, ಅಂಗನವಾಡಿಯ ಸಿಬ್ಬಂದಿಯವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.