ಬೆಳಗಾವಿ
ಹುಕ್ಕೇರಿ: ವಿಶ್ವಕರ್ಮ ಸಮುದಾಯದ ಐತಿಹಾಸಿಕ ಪುರುಷ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನವನ್ನು ಆಚರಿಸಲಾಯಿತು.
ಹುಕ್ಕೇರಿ ತಾಲೂಕ ವಿಶ್ವಕರ್ಮ ಸಮಾಜ ಹಾಗೂ ತಾಲೂಕ ಆಡಳಿತ ಸಯುಕ್ತ ಆಶ್ರಯದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು.
ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾಚಾರನೆ ನೆರವೇರಿಸಿದ ಶ್ರೀಗಳು ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ಹುಕ್ಕೇರಿ ಪಟ್ಟಣದ ಅಡವಿ ಸಿದ್ದೇಶ್ವರ ಮಠದಿಂದ ಆರಂಭವಾದ ಮೆರವಣಿಗೆಯಲ್ಲಿ ವಾದ್ಯ ಮೇಳಗಳೊಂದಿಗೆ ಕೋರ್ಟ್ ಸರ್ಕಲ್ ಮಾರ್ಗವಾಗಿ ತಹಸಿಲ್ದಾರ ಕಚೇರಿಯ ವರೆಗೆ ಭವ್ಯ ಮೆರವಣಿಗೆ ನಡೆಯಿತು. ಕುಂಭ ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರಗು ತಂದರು
ಈ ಸಂದರ್ಭದಲ್ಲಿ ಹುಕ್ಕೇರಿ ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ ಕ್ಯಾರ ಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ ಹಾಗೂ ಕೆ ಏ ಬಡಿಗೇರ ಮಾತನಾಡಿ
ನಾಡಿನ ಐತಿಹಾಸಿಕ ವಾಸ್ತುಶಿಲ್ಪ ಪರಂಪರೆಗೆ ಶಿಲ್ಪಗಳ ಕೊಡುಗೆ ಅಪಾರವಾದದ್ದು ಅಂತಹ ಅಪರೂಪದ ಕೊಡುಗೆಯನ್ನು ನಾಡಿಗೆ ನೀಡಿ ತನ್ನ ಕಲಾ ಕೌಶಲ್ಯ ಕೊಡುಗೆಯನ್ನು ನೀಡಿ ಅಜರಾ ಮರವಾದವನು ಅಮರಶಿಲ್ಪಿ ಜಕಣಾಚಾರಿ ಸೌಂದರ್ಯ ಮತ್ತು ಕಲಾ ಆರಾಧಕನಾಗಿದ್ದನು
ಕರ್ನಾಟಕ ಇತಿಹಾಸವನ್ನು ಕಲೆ ಮತ್ತು ವಾಸ್ತುಶಿಲ್ಪದಿಂದ ಶ್ರೀಮಂತ ಗೊಳಿಸಿದ ಇಂತಹ ಮಹಾನ ಶಿಲ್ಪಿಯನ್ನು ಸ್ಮರಿಸುವ ಮೂಲಕ ಇತಿಹಾಸದ ಎಲ್ಲಾ ಶಿಲ್ಪ ಕಾರರಿಗೂ ಗೌರವಿಸುತ್ತಿದೆ ಅಪರೂಪದ ಕಲಾ ಕೃತಿಗಳನ್ನು ನಿರ್ಮಿಸಿ ಸಲು ತನ್ನ ಜೀವನವನ್ನೇ ಮುಡುಪಾಗಿಟ್ಟು ಶಿಲೆಯನ್ನು ಕಲೆಯಾಗಿ ಅರಳಿಸಿದ ಪುರಾಣ ಮಹಾಕಾವ್ಯಗಳು ಕಲ್ಲಿನಲ್ಲಿ ಜೀವಂತವಾದವು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ವಿರಕ್ತಮಠದ ಶ್ರೀ ಶಿವಬಸವ ಸ್ವಾಮಿಜಿ ಕ್ಯಾರಗುಡ್ದದ ಅಭಿನವ ಮಂಜುನಾಥ ಸ್ವಾಮೀಜಿ ಪುರಸಭೆ ಅಧ್ಯಕ್ಷ ಏ ಕೆ ಪಾಟೀಲ. ಉಪಾಧ್ಯಕ್ಷ ಆನಂದ ಗಂಧ. ಗಜಾನನ ಬಡಿಗೇರ. ಮಹದೇವ ಬಡಿಗೇರ. ಕೆ ಎ ಬಡಿಗೇರ. ಆರ್ ಎಸ್ ಬಡಿಗೇರ. ರವೀಂದ್ರ ಬಡಿಗೇರ. ಹಾಗೂ ಹುಕ್ಕೇರಿ ತಾಲೂಕಿನ ಎಲ್ಲ ವಿಶ್ವಕರ್ಮ ಸಮಾಜ ಬಾಂಧವರು ಮುಖಂಡರು ಹಾಗೂ ಎಲ್ಲಾ ಭಕ್ತಾದಿಗಳು ಈ ಉತ್ಸವದಲ್ಲಿ ಭಾಗವಹಿಸಿದ್ದರು.
ವರದಿ ರವಿ ಬಿ ಕಾಂಬಳೆ ಹುಕ್ಕೇರಿ