ವಿಜಯಪುರ
ವಿಜಯಪುರದ ನಡೆದಾಡುವ ದೇವರು ಕರುನಾಡಿನ ವೈರಾಗ್ಯ ಮೂರ್ತಿ ಸಿದ್ದೇಶ್ವರ ಶ್ರೀಗಳು ಇನ್ನಿಲ್ಲ! ತಮ್ಮ 82 ವಯಸ್ಸಿನಲ್ಲಿ ಕೋಟ್ಯಂತರ ಭಕ್ತರನ್ನು ಅಗಲಿದ್ದಾರೆ
ಸಕಲ ಸರಕಾರಿ ಗೌರವಗಳೊಂದಿಗೆ ವಿಜಯಪುರ ದ ಜ್ಞಾನ ಯೋಗಾಶ್ರಮದಲ್ಲಿ ಶ್ರೀ ಗಳ ಅಂತ್ಯ ಕ್ರಿಯೆ ನಡೆಯುವುದು
ನಾಳೆ 6ಗಂಟೆಯಿಂದ ಸಂಜೆ 5 ಗಂಟೆವರೆಗೆ ಅಂತಿಮ ದರ್ಶನ ಪಡೆಯಲು ಅವಕಾಶ ವಿದೆ
ವಿಜಯಪುರ ದ ಸೈನಿಕ ಶಾಲೆಯಲ್ಲಿ ಎಲ್ಲರಿಗೂ ದರ್ಶನ ತೆಗೆದುಕೊಳ್ಳಲು ಅವಕಾಶ
ಸೈನಿಕ ಶಾಲೆಯಿಂದ ಶ್ರೀಗಳ ಅಂತಿಮ ಯಾತ್ರೆ ಗೋದಾವರಿ, ಗಾಂಧಿವೃತ್ತ, ಮೂಲಕ ಸಾಗುವುದು ಅಂತಿಮ ಯಾತ್ರೆ
ಈಗಾಗಲೇ ಲಕ್ಷಾಂತರ ಭಕ್ತರ ಆಶ್ರಮ ದ ಕಡೆ ಆಗಮಿಸುತ್ತಿದ್ದಾರೆ
ದೂರಿನಿಂದ ಬರುವಂತಹ ಭಕ್ತಾದಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ
ಮದ್ಯಾಹ್ನ ಮುಖ್ಯಮಂತ್ರಿ ಗಳು ಬಸವರಾಜ್ ಬೊಮ್ಮಾಯಿ ಹಾಗೂ ಎಲ್ಲಾ ಮಂತ್ರಿ ಮಂಡಲ ಸದಸ್ಯರು ಆಗಮಿಸುವರೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಹಿತಿಯನ್ನು ನೀಡಿದ್ದಾರೆ