ಮೂಡಲಗಿ ಪಟ್ಟಣದಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಿ KRS ಪಾರ್ಟಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Share the Post Now

ಬೆಳಗಾವಿ

ಮೂಡಲಗಿ ತಹಸೀಲ್ದಾರ್ ಮೂಲಕ ಬೆಳಗಾವಿ ಜಿಲ್ಲಾಧಿಕಾರಿ ಗಳಿಗೆ ಮನವಿ


ಮೂಡಲಗಿ ಪಟ್ಟಣವು ಇದೀಗ ಅಬಕಾರಿ ನೀರಿಕ್ಷರ ಅಕ್ರಮದ ಅಡ್ಡೆಯಾಗಿದೆ ಕಾರಣ ಮೂಡಲಗಿ ಪಟ್ಟಣದಲ್ಲಿ ಅಶಾಂತಿ ಮಾಡಲು ಪಟ್ಟಣದಲ್ಲಿ ಎಲ್ಲಿ ಬೇಕಾದರೆ ಅಲ್ಲಿ ಕುಡುಕರ ಹಾವಳಿ ಹೆಚ್ಚಗಿದೆ. ಮೂಡಲಗಿ ಪಟ್ಟಣದ ದಾಬಾಗಳಲ್ಲಿ ಪ್ರತಿಷ್ಠಿತ ಹೋಟೆಲಗಳಲ್ಲಿ ರಾಜಾರೋಷವಾಗಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಒಬ್ಬಂಟ್ಟಿ ಮಹಿಳೆಯರು ಹೊಟೆಲಗಳಿಗೆ ಹೋಗಿ ಉಟ,ತಿಂಡಿ ಮಾಡುವಂತಿಲ್ಲ ಇದರಿಂದ ನಮ್ಮ ಪಟ್ಟಣವು ಅಶಾಂತಿ ಮತ್ತು ಅಕ್ರಮಕ್ಕೆ ಹೆಸರುವಾಸಿಯಾಗಿದೆ.


ಹಾಗಾಗಿ ಮೂಡಲಗಿಯ ಅಬಕಾರಿ ಇಲಾಖೆಯ ಅಧಿಕಾರಿಗಳು ಅಕ್ರಮ ಮಧ್ಯ ಮಾರಾಟಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಕಂಡು ಕಾಣದಂತೆ ಇದ್ದಾರೆ ಈ ಹಿನ್ನೆಲೆಯಲ್ಲಿ ತಾವು ಕುದ್ದಾಗಿ ನಮ್ಮ ಪಟ್ಟಣಕ್ಕೆ ಬಂದು ವಿಕ್ಷಿಸಬಹುದು, ಅಕ್ರಮ ನಡೆಯುತ್ತಿರುವ ಹಾಗೂ ಯಾವುದೇ ಮದ್ಯ ಮಾರಾಟ ಪರವಾನಿಗೆ ಇಲ್ಲದೆ, ರಾಜಾರೋಷವಾಗಿ ಯಾವುದೆ ಅಧಿಕಾರಿಗಳ ಭಯವಿಲ್ಲದೆ ಮಧ್ಯ ಮಾರಾಟ ಮಾಡುತ್ತಿರುವ ಹಲವಾರು ಪ್ರತಿಷ್ಠಿತ ಹೋಟೆಲಗಳ ಆಮಿಶಕ್ಕೆ ಅಬಕಾರಿ ನೀರಿಕ್ಷಕರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.
ಕಾರಣ ತಾವುಗಳು ಈ ಭ್ರಷ್ಠ ಅಧಿಕಾರಿ ಹಾಗೂ ಹೋಟೆಲಗಳ ಮಾಲಿಕರ ಮೇಲೆ ಕಾನೂನು ಅಡಿಯಲ್ಲಿ ಕ್ರಮ ಜರುಗೀಸಲು ವಿನಂತಿಸಿಕೊಳ್ಳುತ್ತೆವೆ. ಒಂದು ವೇಳೆ ಈ ಅಕ್ರಮ ದಂದೆಯನ್ನು ಪರಿಶೀಲಿಸಿ ಕ್ರಮ ಜರುಗಿಸದೆ ಇದ್ದ ಪಕ್ಷದಲ್ಲಿ ನಮ್ಮ ಪಕ್ಷದಿಂದ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಕೆ.ಆರ್.ಎಸ್. ಪಕ್ಷದ ಮೂಡಲಗಿ ತಾಲೂಕಾ ಅಧಕ್ಷ ಅಬ್ದುಲ್ ಪೈಲವಾನ ಹಾಗೂ ಸದಸ್ಯರು ಆಗ್ರಹಿಸಿದ್ದಾರೆ

Leave a Comment

Your email address will not be published. Required fields are marked *

error: Content is protected !!