ಬೆಳಗಾವಿ
ವರದಿ :ಸಚಿನ ಕಾಂಬಳೆ
ಅಥಣಿ:ಅಥಣಿ ನೀರಿಕ್ಷಣಾ ಮಂದಿರದಲ್ಲಿ ತೆಲಸಂಗ ಬ್ಲಾಕ್ ಎಸ್ ಸಿ ವಿಂಗ್ ಅಧ್ಯಕ್ಷರನ್ನಾಗಿ ವಿಜಯಕುಮಾರ ಭೀಮು ಬಡಚಿ ಹಾಗೂ ಅಥಣಿ ಬ್ಲಾಕ್ ಅಧ್ಯಕ್ಷರನ್ನಾಗಿ ಶಿವಾನಂದ ಸೌದಾಗರ ಇವರನ್ನು ಕರ್ನಾಟಕ ಪ್ರದೇಶ ಕಾಂಗ್ರೇಸ್ (ಐ) ಸಮಿತಿಯ ಕಾರ್ಯಧ್ಯಕ್ಷರಾದ ಸತೀಶ ಅಣ್ಣಾ ಜಾರಕಿಹೊಳಿಯವರ ನೇತೃತ್ವದಲ್ಲಿ ಹಾಗೂ ಚಿಕ್ಕೋಡಿ ಜಿಲ್ಲಾ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣರಾವ ಚಿಂಗಳೆಯವರ ಮಾರ್ಗದರ್ಶನದಲ್ಲಿ ನೇಮಕ ಮಾಡಲಾಯಿತು.
ಈ ನೇಮಕಾತಿಯನ್ನು 2019 ವಿಧಾನಸಭೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿಯವರು ಹಾಗೂ ಕಾಂಗ್ರೇಸ್ ಪಕ್ಷದ ಎಸ್ ಸಿ ವಿಂಗ್ ಜಿಲ್ಲಾಧ್ಯಕ್ಷರಾದ ನಾಮದೇವ ಕಾಂಬಳೆ,ಅಥಣಿ ಬ್ಲಾಕ್ ಅಧ್ಯಕ್ಷರಾದ ಸಿದ್ಧಾರ್ಥ ಶಿಂಗೆ ಹಾಗೂ ತೆಲಸಂಗ ಬ್ಲಾಕ್ ಅಧ್ಯಕ್ಷರಾದ ಶ್ರೀಕಾಂತ ಪೂಜಾರಿ ರವರ ನೇತೃತ್ವದದಲ್ಲಿ ಹಾಗೂ ಜಿಲ್ಲಾ ಕಾಂಗ್ರೇಸ್ ಎಸ್ ಸಿ ಪ್ರಧಾನ ಕಾರ್ಯದರ್ಶಿ ರಾವಾಸಬ ಐಹೊಳೆ ಪಕ್ಷದ ಹಿರಿಯ ಮುಖಂಡರಾದ ಸಂಜೀವ ಕಾಂಬಳೆ ವಿಲೀನರಾಜ ಎಳಮಲ್ಲೆ,ಚಿದಾನಂದ ತಳಕೇರಿ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲ ಪ್ರಭಾವಿ ನಾಯಕರು ಹಾಗೂ ಕಾಂಗ್ರೇಸ್ ಪಕ್ಷದ ಎಲ್ಲ ನಿಷ್ಠಾವಂತ ಮುಖಂಡರುಗಳ ಉಪಸ್ಥಿತಿಯಲ್ಲಿ ನೇಮಕಾತಿ ಆದೇಶ ಪತ್ರ ನೀಡಿ ಗೌರವಿಸಲಾಯಿತು.