ಬೆಳಗಾವಿ, ಕಾಗವಾಡ
ವರದಿ :ಸಚಿನ ಕಾಂಬಳೆ
ಕಾಗವಾಡ : ಐನಾಪೂರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಗರೋತ್ಥಾನ ಯೋಜನೆಯ ಅನುದಾನದಲ್ಲಿ ಒಟ್ಟು 500 ಲಕ್ಷಗಳ ಅನುದಾನದಲ್ಲಿ ಮೊದಲ ಹಂತದ 240.50 ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ್ ಭೂಮಿ ಪೂಜೆ ನೆರವೇರಿಸಿದರು.
ನಂತರ ನಾಯಿಕ ಸಮುದಾಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿ,ಕಾಗವಾಡ ಮತಕ್ಷೇತ್ರದಲ್ಲಿ ಅತೂ ದೊಡ್ಡ ಪಟ್ಟಣ ಪಂಚಾಯತ್ ಐನಾಪೂರ ಪಟ್ಟಣವಾಗಿದ್ದು ಇದರ ಸಮಗ್ರ ಅಭಿವೃದ್ಧಿಗೆ ನಾನು ಸದಾಬದ್ದವಾಗಿದ್ದೇನೆ ಎಂದರು.ಐನಾಪೂರ ಜನತೆ ಕಳೆದ ಎರಡು ಚುನಾವಣೆಯಲ್ಲಿ ನನ್ನನ್ನು ಅಭೂತಪೂರ್ವ ಬೆಂಬಲ ನೀಡಿ ಗೆಲ್ಲಿಸಿದ್ದೀರಿ ನಿಮ್ಮ ಅಭಿಮಾನಕ್ಕೆ ನಾನು ಯಾವತ್ತೂ ಚಿರಋಣಿಯಾಗಿದ್ದೇನೆ.ಮುಂದೆಯೂ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಹೇಳಿದರು
ರಾಜು ಪೋತದಾರ,ದಾದಾ ಪಾಟೀಲ್, ಗೋಪಾಲ ಕಟ್ಟಿ,ನಾರಾಯಣ ಕಟ್ಟಿ,ಅರಯಣ ಗಾಣಿಗೇರ,ಸುರೇಶ ಗಾಣಿಗೇರ,ಗುರುರಾಜ ಮಡಿವಾಳರ,ಅಣ್ಣಾಸಾಬ ಡೂಗನವರ,ಸಂಜು ಭಿರಡಿ,ಮೋಹನ ಕಾರ್ಚಿ,ನಿಂಗಪ್ಪಾ ಚೌಗಲಾ,ಮುಖ್ಯಾಧಿಕಾರಿ ಎ.ಆರ್.ಕುಲಕರ್ಣಿ, ಬಸವರಾಜ ಕಾರ್ಚಿ,ನವಲಪ್ಪ ಹಾಲಾರೊಟ್ಟಿ,ಅಭಯ ಪಾಟೀಲ್,ಎಸ್ ಟಿ ಪಾಟೀಲ್ ಯೋಗೇಶ ಪೊತದಾರ,ಪ್ರವೀಣ ಕೋಕಟನೂರ ಸಿದ್ರಾಯ ಗಾಡಿವಡ್ಡರ, ಸೇರಿದಂತೆ ಅನೇಕರು ಇದ್ದರು.