ಉತ್ತರ ಕರ್ನಾಟಕದ ಶಕ್ತಿದೇವತೆ ಮಾಯಕ್ಕಾದೇವಿಯ ಜಾತ್ರೆ ಪೂರ್ವಭಾವಿ ಸಭೆ ಜರುಗಿತು.

Share the Post Now

ಬೆಳಗಾವಿ,


ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಗಡಿಭಾಗದ ಶಕ್ತಿ ದೇವತೆಯಾದ ಚಿಂಚಲಿ ಮಾಯಕ್ಕನ ಜಾತ್ರೆಯು ಇದೆ ಫೆ.೫ ರಿಂದ ನಡೆಯುಲಿದ್ದು, ಜಾತ್ರೆಯ ನಿಮಿತ್ಯ ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ತಹಶೀಲ್ದಾರ ರಿಯಾಜುದ್ದೀನ ಬಾಗವಾನ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು

ಕಳೆದ ವರ್ಷದಿಂದ ಜಾನುವಾರುಗಳಿಗೆ ಲಂಪಿ( ಗಂಟು) ರೋಗ ಹೆಚ್ಚುತ್ತಿರುವ ಹಿನ್ನೆಲೆ ಜಾತ್ರೆಯಲ್ಲಿ ಪ್ರತಿವರ್ಷ ಕೂಡುವ ಎತ್ತುಗಳ ಜಾತ್ರೆ ನಿಷೇಧಿಸಲಾಗಿದೆ.

ಕೆಮಿಕಲಯುಕ್ತ ಭಂಡಾರ ಮತ್ತು ಪೇಡೆಗಳನ್ನು ಮಾರಾಟ ಮಾಡದಂತೆ ವ್ಯಾಪಾರಸ್ಥರಿಗೆ ಸಭೆ ಮೂಲಕ ಖಡಕ್ ಎಚ್ಚರಿಕೆ ನೀಡಿದರು. ಒಂದು ವೇಳೆ ಕೆಮಿಕಲಯುಕ್ತ ಭಂಡಾರ, ಪೆಡೆ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕಠೀಣ ಕ್ರಮ ಜರುಗಿಸಲಾಗುವು, ಜಾತ್ರೆಗೆ ಬರುವ ಭಕ್ತಾದಿಗಳಿಗೆ, ಶುದ್ಧ ಕುಡಿಯುವ ನೀರು, ವಿದ್ಯುತ್ ದೀಪದ ವ್ಯವಸ್ಥೆ, ಸ್ವಚ್ಛತೆ, ನಾಲ್ಕು ದಿಕ್ಕುಗಳಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆ, ಆರೋಗ್ಯ ದೃಷ್ಟಿಯಿಂದ ವೈದ್ಯಕೀಯ ವ್ಯವಸ್ಥೆ, ಚರಂಡಿ ರಸ್ತೆಬದಿ ಡಿಸಿಎಲ ಪೌಡರ್ ಸಿಂಪಡನೆ ಮಾಡುವುದು, ಮುಳಗಡೆಯಲ್ಲಿ ಪರಿಹಾರ ಪಡೆದ ರೈತರ ಜಮೀನುಗಳಲ್ಲಿಯ ಬೆಳೆಗಳನ್ನು ತೆರವುಗೊಳಿಸಿ ವಾಹನ ನಿಲುಗಡೆ ಅವಕಾಶ ಮಾಡಿಕೊಡುವುದಾಗಿ ಚಿಂಚಲಿ ಮುಖ್ಯಾಧಿಕಾರಿ ಸುಳ್ಳಣ್ಣವರ ಹಾಗೂ ತಹಶಿಲ್ದಾರರ ಬಾಗವಾನ ತಿಳಿಸಿದರು.



ಪೊಲೀಸ್ ಸಿಬ್ಬಂದಿಯವರಿಗೆ ಶಾಲೆಯಲ್ಲಿ ತಂಗುವ ವ್ಯವಸ್ಥೆ, ಅಕ್ರಮ ಮದ್ಯ ಮಾರಾಟ, ಜೂಜಾಟ ನಿಷೇಧ ಮಾಡುವುದು, ಜಾತ್ರೆಯಲ್ಲಿ ಸಮಸ್ಯೆ ಉಲ್ಬಣಗೊಳ್ಳಬಾರದ ದೃಷ್ಟಿಯಿಂದ ಇಲಾಖಾ ಅಧಿಕಾರಿಗಳು, ಪ್ರಮುಖರ ವಾಟ್ಸಪ್ ಗ್ರುಪ್ ಮಾಡುವುದು, ಕಳ್ಳತನ, ಸರಗಳ್ಳತನ ತಡೆಯಲು ಸಿಸಿ ಕ್ಯಾಮರಾ ಅಳವಡಿಕೆ, ಮಹಿಳೆಯರ ಸಂರಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ, ಮುಫ್ತಿ ಸಿಬ್ಬಂದಿ ಒದಗಿಸುವುದು, ಕಾರ್ಖಾನೆಗೆ ಕಬ್ಬು ಸಾಗಿಸುವ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗುವುದಾಗಿ ಹಾರೂಗೇರಿ ಪೊಲೀಸ್ ಠಾಣೆಯ ಸಿಪಿಐ ರವೀಂದ್ರ ಬಡಫಕೀರಪ್ಪಗೋಳ ತಿಳಿಸಿದರು.



ಸಾರಿಗೆ ಇಲಾಖೆ ಅಧಿಕಾರಿ ಹಂಚಿನಾಳಕರ ಮಾತನಾಡಿ ಜಾತ್ರಾ ನಿಮಿತ್ಯವಾಗಿ ಪ್ರಯಾಣಿಕರಿಗೆ 200ಕ್ಕಿಂತ ಹೆಚ್ಚಿನ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು

ನಿರಾವರಿ ಹಾಗೂ ಹೆಸ್ಕಾಂ ಅಧಿಕಾರಿಗಳು ಕಾಲುವೆಗಳಿಗೆ ನೀರು ಹರಿಸುವುದು, ಜಾತ್ರೆ ಮುಂಚಿತವಾಗಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಜಿತೇಂದ್ರ ಜಾಧವ್ ಸರ್ಕಾರ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಕದ್ದು, ಸಿಪಿಐ ರವೀಂದ್ರ ಬಡಫಕೀರಪ್ಪಗೋಳ, ಕುಡಚಿ PSI ಮಾಳಪ್ಪ ಪೂಜೇರಿ, ನಿವೃತ್ತ ಡಿವೈಎಸ್ಪಿ ಪಡೋಲ್ಕರ, ವಿವಿಧ ಇಲಾಖೆಗಳ ಅಭಿಯಂತರಾದ ಆರ್.ಬಿ. ಮನುವಡ್ಡರ, ಹಾಲಪ್ಪ ಪೂಜಾರಿ, ಹಂಚಿನಮಣಿ, ತಾಲೂಕಾ ಆರೋಗ್ಯ ಅಧಿಕಾರಿ ಡಾ. ಎಸ್‌ ಎಂ ಪಾಟೀಲ, ಕೆಪಿಟಿಸಿಎಲ್ , ಅಬಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು


ಫೆಬ್ರವರಿ ೫ ರಿಂದ 14 ರವರೆಗೆ ಗಡಿಭಾಗದ ಶಕ್ತಿದೇವತೆಯಾದ ಕರ್ನಾಟಕ ಮಹಾರಾಷ್ಟ್ರ ಭಕ್ತಾಧಿಗಳ ಆರಾದ್ಯದೇವಿಯಾದ ಮಾಯಕ್ಕಾದೇವಿ ಜಾತ್ರೆ ನಡೆಯಲಿದ್ದು, ಫೆ.೯ ರಂದು ಮಹಾನೈವದ್ಯ ಮತ್ತು ಪಲ್ಲಕ್ಕಿ ಉತ್ಸವ ಜರುಗಲಿದ್ದು, ಇನ್ನೂ ವಿವಿಧ ಧಾರ್ಮಿಕ ಕಾರ್ಯಕ್ರಮವೂ ಜರುಗಲಿವೆ. ಎಲ್ಲ ಭಕ್ತಾಧಿಗಳು ಆಗಮಿಸಿ ದೇವಿಯ ದರ್ಶನ ಪಡೆದುಕೊಂಡು ಪುನೀತರಾಗಬೇಕು ಎಂದು ಕಮಿಟಿಯು ಪ್ರಕಟನೆಯಲ್ಲಿ ತಿಳಿಸಿದೆ.

ವರದಿ: ಸಂಜೀವ ಬ್ಯಾಕುಡೆ,

Leave a Comment

Your email address will not be published. Required fields are marked *

error: Content is protected !!