ಅನೇಕ ಪುಣ್ಯ ಪುರುಷರಲ್ಲಿ ಒಬ್ಬರು ಸ್ವಾಮಿ ವಿವೇಕಾನಂದರು: ಡಾ. ವಿ.ಕೆ.ನಡೋಣಿ.

Share the Post Now

ಬೆಳಗಾವಿ

ವರದಿ :ಸಂಗಮೇಶ ಹಿರೇಮಠ


ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ‘ಯುವ’ ದಿನಾಚರಣೆ.

ಮುಗಳಖೋಡ: ಬುದ್ದ, ಬಸವ, ಅಂಬೇಡ್ಕರ್ ಗಳಂತೆ ದೇಶ ಪ್ರೇಮದಲ್ಲಿ ವಿಶೇಷವಾಗಿ ಯುವಕರಲ್ಲಿ ದೇಶಾಭಿಮಾನದ ಪ್ರೀತಿ ತುಂಬಿದ ಮಹಾನ ಸಂತ ಸ್ವಾಮಿ ವಿವೇಕಾನಂದರು ಎಂದು ಡಾ. ವಿ.ಕೆ.ನಡೋಣಿ ಹೇಳಿದರು.

ಅವರು ಪಟ್ಟಣದ ಚವಿವ ಸಂಘದ ಡಾ. ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅಥಿತಿಸ್ಥಾನವಹಿಸಿ ಮಾತನಾಡಿ ವಿವೇಕರು ತ್ಯಾಗ, ಶ್ರಮದ ಮೂಲಕ ದೇಶ ಪ್ರೇಮದಿಂದ ಯುವಕರನ್ನು ಬಡಿದೆಬ್ಬಿಸಿ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ ಕೀರ್ತಿ ವಿವೇಕಾನಂದರದು ಅಂತಹ ಮಹಾನ ಸಂತನ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದು ಯುವ ಜನಕ್ಕೆ ತಿಳಿಸಿಕೊಟ್ಟರು.

ಇನ್ನೋರ್ವ ಅಥಿತಿಗಳಾಗಿ ಆಗಮಿಸಿದ ವಾಣಿಜ್ಯ ವಿಭಾಗದ ಮುಖ್ಯಸ್ಥ ಹಾಗೂ ರೆಡ್ ಕ್ರಾಸ್ ಘಟಕದ ಅಧ್ಯಕ್ಷರಾದ ಪ್ರೊ. ಪ್ರದೀಪ್ ನಾಯಿಕ ಅವರು ಮಾತನಾಡಿ ವಿವೇಕಾನಂದರು ದೈಹಿಕವಾಗಿ ಮಾತ್ರ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರು ಮಾಡಿರುವ ಕಾರ್ಯ ಅವರ ಶ್ರೇಷ್ಠ ನಡತೆ, ಸಂಸ್ಕೃತಿಯನ್ನು ಈ ದೇಶದಲ್ಲಿ ಇನ್ನೂ ಹಾಗೇಯೆ ಇದೆ ಕಾರಣ ಅವರು ನಮ್ಮ ಜೊತೆಯಲ್ಲಿ ಯಾವಾಗಲೂ ಇದ್ದಾರೆಂದು ತಿಳಿಯುತ್ತದೆ. ನರೇಂದ್ರರ ಜೀವನ, ಅವರ ಮಾರ್ಗದರ್ಶನದ ಬಗ್ಗೆ ತಿಳಿಸುತ್ತಾ ನಾವು ಕೇವಲ ಒಂದು ದಿನಕ್ಕೆ ಮಾತ್ರ ಈ ಕಾರ್ಯಕ್ರಮ ಸೀಮಿತಗೊಳಿಸದೆ ಪ್ರತಿದಿನ ಅವರ ಹಾಕಿಕೊಟ್ಟಿರುವು ದಾರಿಯಲ್ಲಿ ಸಾಗಬೇಕೆಂದು ಹೇಳಿದರು.

ಅಧ್ಯಕ್ಷ ಸ್ಥಾನ ವಹಿಸಿದ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರೊ. ಆರ್. ಎಸ್. ಶೇಗುಣಸಿ ಮಾತನಾಡಿ ಸ್ವಾಮಿ ವಿವೇಕಾನಂದರು ಸಾಗಿಬಂದ ಜೀವನವನ್ನು ತಿಳಿಸಿಕೊಟ್ಟು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರನ್ನು ಕುರಿತು ಮಾತನಾಡಿದರು, ಕೆಲವರು ಹಾಡಿ ಹೊಗಳಿದರು.

ಕಾರ್ಯಕ್ರಮವನ್ನು ಶೃಷ್ಠಿ ಹೊನ್ನಳ್ಳಿ ನಿರೂಪಿಸಿ, ಸ್ವಾತಿ ಯಡವಣ್ಣವರ ಹಾಗೂ ಕೀರ್ತಿ ಗಸ್ತಿ ಸ್ವಾಗತಿಸಿ ಸುಧಾಕರ ಪೂಜಾರಿ ವಂದಿಸಿದರು.

ಈ ಸಂದರ್ಭದಲ್ಲಿ ಡಾ.ಪಿ.ಬಿ.ಕೊರವಿ, ಜಿ.ಎಸ್.ಜಂಬಗಿ, ಎನ್.ಎಸ್.ಎಸ್.ಘಟಕದ ಸಂಯೋಜಕ ಸಂಗಮೇಶ ಹಿರೇಮಠ, ಬಿ.ಎಸ.ಸವಸುದ್ದಿ, ಕೆ.ಪಿ‌.ಹಾಲಳ್ಳಿ, ಶ್ರೀಮತಿ ಶಿವಲೀಲಾ ಪಾರ್ವತಿ, ಆರ್.ಎಂ.ಖೇತಗೌಡರ, ಹುಸೇನ ಯಲಿಗಾರ, ಸಂಗಣ್ಣ ತೇಲಿ, ಬಸು ಸಣ್ಣಕ್ಕಿನ್ನವರ ಹಾಗೂ ಪದವಿ ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!