ವರದಿ :ಸಚಿನ್ ಕಾಂಬಳೆ
ಕೌಲಾಗುಡ್ಡ :ಇವತ್ತು ಸಿದ್ಧಶ್ರೀ ಸಂಸ್ಥೆಯ ಶ್ರೀ ಕರಿಯೋಗಸಿದ್ದ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಸಿದ್ಧರತ್ನ ಪ್ರೌಢ ಶಾಲೆ ಕೌಲಗುಡ್ಡ ಇವರುಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಶಾಲಾ ವಾರ್ಷಿಕ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಪ ಪೂ ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಸದೃಡವಾದ ದೇಹದಲ್ಲಿ ಸದೃಡವಾದ ಮನಸ್ಸು ಇರುತ್ತದೆ ಆದ್ದರಿಂದ ನಾವು ವಿವೇಕಾನಂದರಂತೆ ಸದೃಢರಾಗಬೇಕಾದರೆ ಕ್ರೀಡೆ ಬಹಳ ಮುಖ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್ ಪಿ ಮಂಡಳದ ಎಮ್ ಪಿ ಇಡಿ ಪ್ರಾಂಶುಪಾಲರಾದ ಆರ್ ಕೆ ಪಾಟೀಲ, ಡಾ. ಆನಂದ ಗುಂಜಿಗಾವಿ, ಶ್ರೀ ವಿಶ್ವನಾಥ ಹಾರೂಗೇರಿ, ಶ್ರೀ ಎಸ್ ಎ ಕೊನ್ನುರ ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು ಮುಖ್ಯೋಪಾಧ್ಯಾಯರಾದ ಶ್ರೀ ಬಿ ಕೆ ಖೋತ ಪ್ರಾಸ್ತಾವಿಕ ಮಾತನಾಡಿದರು ಶ್ರೀ ಮತಿ ಶಾರದಾ ಅಡಹಳ್ಳಿ ನಿರೂಪಿಸಿದರು ಕು. ಗಂಗಾ ರಡ್ಡಿ ಸ್ವಾಗತಿಸಿದರು ಕು ಕವಿತಾ ಕಾಂಬಳೆ ವಂದಿಸಿದರು ದೈಹಿಕ ಶಿಕ್ಷಕರಾದ ಶ್ರೀ ಎ ಎ ಪೂಜೇರಿ ಪ್ರತಿಜ್ಞಾ ವಿಧಿ ಬೋಧಿಸಿದರು ಶಾಲೆಯ ಎಲ್ಲ ಶಿಕ್ಷಕರು ಶಿಕ್ಷಕಿಯರು ಮಕ್ಕಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ವರ್ಗದವರಾದ ಶ್ರೀ ಶಿವಸಿದ್ಧ ಲಾಳಿ, ಶಾಬು ಗಸ್ತಿ, ಅಶ್ವತ್ಥ ಪೂಜಾರಿ, ವಿನಾಯಕ ಪೂಜಾರಿ, ಮಹಾಂತೇಶ ಕುಂಬಾರ, ನಾಗರಾಜ ಪತ್ತಾರ, ಶಿವಾನಂದ ಹಳಮನಿ, ಪ್ರಭಾವತಿ ಮಾಂಗ, ಸಂಗೀತಾ ತೆಗ್ಗಿನವರ, ಅಕ್ಷತಾ ಚೌಗಲಾ, ಮೀನಾಕ್ಷಿ ಆಕಾಶಿ, ದೀಪಾ ಲೋಕುರೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಕು. ರೋಹಿತ ವಾಘಮೋಡೆ ಹಾಗೂ ಕು ಅಕ್ಷತಾ ನರೋಟೆ