ಜೆಡಿಎಸ್ ಪಕ್ಷದ ಹಿರಿಯ ನಾಯಕರು/ ಉದ್ಯಮಿ ಶ್ರೀ ಪ್ರವೀಣ ಕೇಶವಲಾಲ್ ಶಹಾ ರವರ 67ನೇ ಹುಟ್ಟುಹಬ್ಬ ಆಚರಣೆ;

Share the Post Now

ಬೆಳಗಾವಿ


ಮುಗಳಖೋಡ ಪಟ್ಟಣದ ಮಾರ್ಕೆಟ್ ರೋಡ್ ನಲ್ಲಿ ಹುಟ್ಟು ಹಬ್ಬದ ಭವ್ಯ ಕಾರ್ಯಕ್ರಮ;



ಮುಗಳಖೋಡ: ಪಟ್ಟಣದ ಪ್ರತಿಷ್ಠಿತ ಮನೆತನದಲ್ಲಿ ಬಹುದೊಡ್ಡ ಶಹಾ ಕುಟುಂಬವು ಒಂದು.

ತಂದೆ ಕೇಶವಲಾಲ್ ಶಹಾ -ತಾಯಿ ಕುಸುಮಾ ಶಹಾ ದಂಪತಿಗಳ ಉದರದಲ್ಲಿ 14 ಜನವರಿ 1956 ರಲ್ಲಿ ಜನಿಸಿದ ಶ್ರೀ ಪ್ರವೀಣ ಕೇಶವಲಾಲ್ ಶಹಾ ಅವರು ಪಟ್ಟಣದಲ್ಲಿ ಉದ್ಯಮಿಗಳಾಗಿ ಬೆಳೆದವರು. ನಂತರದಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ ಶ್ರೀ ಪ್ರವೀಣ ಶಹಾ (ಸಾಹುಕಾರ) ಅವರು ಅನೇಕ ರಾಷ್ಟ್ರೀಯ ಪಕ್ಷಗಳಲ್ಲಿ ಗುರುತಿಸಿಕೊಂಡರು. ಹಿರಿಯರಾದರೂ ಕಿರಿಯರಾಗಿ ಪಕ್ಷದಲ್ಲಿ ಕ್ರಿಯಾಶೀಲರಾದರು. ಇವರ ಪ್ರಾಮಾಣಿಕ ಹಾಗೂ ಕಾರ್ಯಕ್ರಮತೆಯನ್ನು ಪರಿಗಣಿಸಿ ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡ ರಾಜ್ಯ ನಾಯಕರು ಚಿಕ್ಕೋಡಿ ಜಿಲ್ಲೆಯ ಜೆಡಿಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಂತೆ ಜವಾಬ್ದಾರಿ ಹೊರಿಸಿದರು. ಶ್ರೀ ಪ್ರವೀಣ ಶಹಾ (ಸಾಹುಕಾರ) ಅವರು ಎಲ್ಲರೊಂದಿಗೆ ಪ್ರೀತಿಯಿಂದ ಅಚ್ಚುಮೆಚ್ಚಿನ ಕಾರ್ಯಕರ್ತರಾಗಿ ಎಲ್ಲರ ಪ್ರೀತಿಗೆ ಪಾತ್ರರಾದವರು.



ಇದೇ ಶನಿವಾರ ದಿನಾಂಕ: 14/01/2023 ರಂದು ಸಂಜೆ 5 ಗಂಟೆಗೆ ಮುಗಳಖೋಡ ಪಟ್ಟಣದ ಮಾರ್ಕೆಟ್ ರೋಡಲ್ಲಿ ಶಹಾ ಕಾಂಪ್ಲೆಕ್ಸ್ ಎದುರುಗಡೆ ಹಾಕಲಾದ ಭವ್ಯವೇದಿಕೆಯಲ್ಲಿ ಶ್ರೀ ಪ್ರವೀಣ ಕೇಶವಲಾಲ್ ಶಹಾ (ಸಾಹುಕಾರ) ಅವರ 67ನೇ ಹುಟ್ಟುಹಬ್ಬವು ಸಡಗರ ಸಂಭ್ರಮದಿಂದ ಜರುಗಲಿದೆ.

ಶ್ರೀ ಪ್ರವೀಣ ಶಹಾ (ಸಾಹುಕಾರ) ಅವರ 67ನೇ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರು, ರಾಯಬಾಗ ತಾಲೂಕು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರು ಶ್ರೀ ಪ್ರತಾಪರಾವ್ ಪಾಟೀಲ, ಜೆಡಿಎಸ್ ಪಕ್ಷದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರು, ಮಾಜಿ ಶಾಸಕರು ಕಲ್ಲಪ್ಪ ಮಗೆನ್ನವರ ರವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಜೆಡಿಎಸ್ ಪಕ್ಷದ ರಾಜ್ಯ ಎಸ್,ಸಿ ಪ್ರಧಾನ ಕಾರ್ಯದರ್ಶಿ, ರಾಜೇಂದ್ರ ಐಹೊಳೆ, ಜೆಡಿಎಸ್ ಪಕ್ಷದ ರಾಜ್ಯ ಅಲ್ಪಸಂಖ್ಯಾತ ಕಮಿಟಿ ಸದಸ್ಯ ಅಲ್ಲಮ್ ಷ ನದಾಫ್, ಚಿಕ್ಕೋಡಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್ ಮುಲ್ಲಾ, ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಹೊಸಪೇಟಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶಾರದಾ ತುಳಸಿಗೇರಿ, ಜೆಡಿಎಸ್ ಪಕ್ಷದ ಕುಡಚಿ ಬ್ಲಾಕ್ ಅಧ್ಯಕ್ಷ ಬಸವರಾಜ ಮುಗಳಿಹಾಳ, ಕುರ್ಚಿ ಮತ್ತು ಕ್ಷೇತ್ರದ ಜೆಡಿಎಸ್ ಪಕ್ಷದ ಹಿರಿಯ ನಾಯಕರು ರಾಮಪ್ಪ ಮಿರ್ಜಿ, ಚಿಕ್ಕೋಡಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿವೇಕಾನಂದ ಘಂಟಿ, ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮಾರುತಿ ಮಾಂಗ, ಜಿಲ್ಲಾ ಕ್ರಿಶ್ಚಿಯನ್ ಕಮಿಟಿ ಅಧ್ಯಕ್ಷ ಪಾಸ್ಟರ್ ಕೆಂಪಣ್ಣ ಅಂದಾನಿ, ಕುಡಚಿ ಬ್ಲಾಕ್ ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಕುಡಚಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಶಿವಪ್ಪ ಮಾದರ, ಜೆಡಿಎಸ್ ಪಕ್ಷದ ಕುಡಚಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರೂಪಾ ಗೋಕಾಕ, ಕುಡಚಿ ಮತಕ್ಷೇತ್ರದ ಹಿಂದುಳಿದ ವರ್ಗಗಳ ಅಧ್ಯಕ್ಷ ಶ್ರೀಶೈಲ ಕುಂಬಾರ ಹಾಗೂ ಇನ್ನೂ ಅನೇಕ ಜೆಡಿಎಸ್ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು, ಮುಗಳಖೋಡ ಪಟ್ಟಣದ ಗುರು-ಹಿರಿಯರು ಹುಟ್ಟುಹಬ್ಬಕ್ಕೆ ಆಗಮಿಸುವರೆಂದು ಕುಡಚಿ ಮತಕ್ಷೇತ್ರದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವರದಿ :ಸಂಗಮೇಶ ಹಿರೇಮಠ

Leave a Comment

Your email address will not be published. Required fields are marked *

error: Content is protected !!