ಬೆಳಗಾವಿ
ಪರಮಾನಂದವಾಡಿ: ಪರಮ ಆನಂದವೇ ಪರಮಾನಂದವಾಡಿ ಗ್ರಾಮದ ಪವಿತ್ರ ನೆಲದಲ್ಲಿ ಕನ್ನಡದ ಎಲ್ಲ ಮನಸ್ಸುಗಳು ಒಂದಾಗಿ ಕನ್ನಡ ನುಡಿ ಹಬ್ಬದ ತೇರು ಎಳೆಯಲು ಗ್ರಾಮದ ಹಿರಿಯರ ಹಾಗೂ ಪೂಜ್ಯರ ಮಾರ್ಗದರ್ಶನದಲ್ಲಿ ಸಿದ್ದರಾಗಿದ್ದೆವೆ.ಅಂದು ಬೆಳಗ್ಗೆ 08 ಗಂಟೆಗೆ ಧ್ವಜಾರೋಹಣ, 09 ಗಂಟೆಗೆ ಭುವನೇಶ್ವರಿ ತಾಯಿಯ ಭಾವಚಿತ್ರದ ಪೂಜೆ ಹಾಗೂ ಸಮ್ಮೇಳನ ಅಧ್ಯಕ್ಷರನ್ನು ಮೆರವಣಿಗೆ ಮುಖಾಂತರ ಕರೆ ತರುವುದು 10:30 ಕ್ಕೆ ಕಾರ್ಯಕ್ರಮದ ಪ್ರಾರಂಭೋತ್ಸವ, ಮಧ್ಯಾಹ್ನ 1:30 ಕ್ಕೆ ಕನ್ನಡ ಜಗತ್ತು ವಿಷಯದ ಕುರಿತು ಉಪನ್ಯಾಸ, 3 ಗಂಟೆಗೆ ಕವಿಸಮಯ ನಂತರ ಸಾಧಕರಿಗೆ ಸನ್ಮಾನ ಮತ್ತು 4:30 ಕ್ಕೆ ಸಮಾರೋಪ ಸಮಾರಂಭ ಹಾಗೂ ಸಂಜೆ 6:30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಕಸಪ ಅಧ್ಯಕ್ಷ ರವೀಂದ್ರ ಪಾಟೀಲ ಹೇಳಿದರು.
ಅವರು ಗ್ರಾಮದ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಸಭಾಭವನದಲ್ಲಿ ಇದೆ ಜನೆವರಿ 21ರಂದು ನಡೆಯುವ 6 ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಹಾರಾಷ್ಟ್ರ ರಾಜ್ಯದ ಗಡಿಭಾಗವಾಗಿರುವುದರಿಂದ ಮರಾಠಿ ಭಾಷೆಯ ಪ್ರಾಬಲ್ಯ ಕಾಣುತ್ತಿದ್ದೇವೆ ಕನ್ನಡ ಮತ್ತು ಕನ್ನಡತನವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ ಆದ್ದರಿಂದ ಕನ್ನಡದ ಜಾತ್ರೆಯು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಬೇಕೆಂದು ಪರಮ ಪೂಜ್ಯ ಡಾ.ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಸಮ್ಮೇಳನದ ಉದ್ದೇಶಿಸಿ ಆಶೀರ್ವಚನ ನೀಡಿದರು.
ಕನ್ನಡ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿ ನಡೆಯಲು ಸ್ವಾಗತ, ವೇದಿಕೆ ಹಾಗೂ ಮೆರವಣಿಗೆ ಹೀಗೆ ಹಲವಾರು ಸಮಿತಿಗಳ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದ್ದು ಮೆರವಣಿಗೆಗೆ ಸಾಗುವ ರಸ್ತೆಯುವುದಕ್ಕೂ ರಂಗೋಲಿಯ ಚಿತ್ತಾರ, ಪ್ರತಿ ಮನೆ ಮುಂದೆ ಹಾಗೂ ಮೆರವಣಿಗೆ ಸಾಗುವ ರಸ್ತೆ ಉದ್ದಕ್ಕೂ ಕನ್ನಡದ ಧ್ವಜಗಳ ಹಾರಾಟ ಮತ್ತು ಕನ್ನಡಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿರುವ ಮಹಾಪುರುಷರ ಸ್ತಬ್ಧ ಚಿತ್ರಗಳು, ಗೋಡೆ ಬರಹಗಳು, ಶಾಲಾ ಮಕ್ಕಳಿಂದ ಕನ್ನಡಪರ ಹೋರಾಟಗಾರರ ವೇಷ ಭೂಷಭೂಷಣಗಳಲ್ಲಿ ಅತಿ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ. ಈ ಎಲ್ಲ ಜವಾಬ್ದಾರಿಯನ್ನು ತಾಲೂಕಿನ ಎಲ್ಲ ಶಾಲೆಯ ಶಿಕ್ಷಕರಿಗೆ ವಹಿಸಲಾಗಿದೆ. ಆಗಮಿಸಿದ ಕನ್ನಡ ಅಭಿಮಾನಿಗಳಿಗೆ ರುಚಿಯಾದ ಊಟ ಹಾಗೂ ಅಚ್ಚುಕಟ್ಟಾದ ಪಾರ್ಕಿಂಗ ವ್ಯವಸ್ಥೆ ಮಾಡಲಾಗಿದೆ ಎಂದು ಮುಖಂಡ ಬಸವರಾಜ ಸನದಿ ಹೇಳಿದರು.
ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಯಲ್ಲಿ ಸಾಹಿತಿ ವಿ.ಎಸ. ಮಾಳಿ, ಡಾ.ಎಲ.ಎಸ.ಚೌರಿ, ರಾವಸಾಬ ಗಂಡೋಶಿ, ಶಂಕರ ಹೊನವಾಡೆ, ಬಾಳು ಚೌಗುಲಾ, ಟಿ.ಎಸ.ವಂಟಗೋಡಿ, ತಿಮ್ಮಪ್ಪ ದಾಸಪ್ಪನವರ, ರಮೇಶ ಪಾಟೀಲ, ರತ್ನಾ ಬಾಳಪ್ಪನವರ, ನಿರೂಪಣೆ ಮತ್ತು ವಂದನಾರ್ಪಣೆಯನ್ನು ಶಂಕರ ಕ್ಯಾಸ್ತಿ ನಿರ್ವಹಿಸಿದರು.
ವರದಿ :ಶ್ರೀನಾಥ ಶಿರಗೂರ