ಆತ್ಮೀಯರೆ ಜೈ ಭೀಮ
ಜಗತ್ತಿನ ಶ್ರೇಷ್ಠ ತತ್ವಜ್ಞಾನಿಗಳಲ್ಲಿ ಅತಿ ಮಹೋನ್ನತ ಪದವಿ (ಬಿರುದು) ಪಡೆದಿರುವವರಲ್ಲಿ ಅಗ್ರ ಗಣ್ಯರೆಂದರೆ ಅದು ಬಾಬಾಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಅವರು. ಅದು ಯಾವ ಪದವಿ! ಅಂದರೆ ವಿಶ್ವಜ್ಞಾನಿ ಎಂದು ಕರೆಯುವುದು ಮತ್ತು ಅವರು ಜನಸಿದ ದಿನವನ್ನು World Knowledge of Day(ವಿಶ್ವ ಜ್ಞಾನದ ದಿನ) . ಯಾಕೆ ಅಂಬೇಡ್ಕರ್ ಅವರು ಜನಿಸಿದ ದಿನವನ್ನು ಜ್ಞಾನದ ದಿನ ಎಂದು ಇಡಿ ಜಗತ್ತು ಆಚರಿಸುವುದು? ಕಾರಣ, ಜಗತ್ತಿನಲ್ಲೇ ಮೊದಲ ಬಾರಿಗೆ ಕಾನೂನಾತ್ಮಕ ಸಮಾನತೆ ಪ್ರತಿಪಾದಿಸಿದವರೆಂದರೇ ಅದು ಬಾಬಾಸಾಹೇಬರು. ಅಂದರೆ ಹೆಣ್ಣು-ಗಂಡು ಇಬ್ಬರಿಗೂ ಕಾನೂನು ರೀತಿಯ ಸಮಾನತೆಯ ಬಗ್ಗೆ ಇಡಿ ಜಗತ್ತಿಗೆ ತಿಳಿಸಿದವರು ಡಾ.ಅಂಬೇಡ್ಕರ್ ಅವರು. ಅದೇನಪ್ಪಾ ಅಂದರೆ 1932 ರ ಮುಂಚೆ ಇಡಿ ಜಗತ್ತಿನಲ್ಲಿ ಕೇವಲ ಗಂಡಸರಿಗೆ ಮಾತ್ರ ಎಲ್ಲ ರೀತಿಯ ಅಧಿಕಾರದ ಹಕ್ಕು ಇತ್ತು. ಅದೇನೆಂದರೆ, ಶಿಕ್ಷಣ, ನೌಕರಿ ಮತ್ತು ಆಸ್ತಿಯಲ್ಲಿ ಗಂಡಸರಿಗಷ್ಟೇ ಅವಕಾಶಗಳಿದ್ದವು. ದಿನಾಂಕ 12 ನವೆಂಬರ್ 1930 ರಿಂದ ದಿನಾಂಕ 19 ಜನವರಿ 1931 ರ ವರೆಗೆ ನಡೆದ ಮೊದಲ ದುಂಡು ಮೇಜಿನ ಪರಿಷತ್ತಿನಲ್ಲಿ ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರು ಮಂಡಿಸಿದ ವಾದವನ್ನು ಕೇಳಿ ಅಲ್ಲಿನ ಬ್ರಿಟಿಷ್ ಅಧಿಕಾರಿಗಳೆ ದಿಗ್ಭ್ರಾಂತಗೊಂಡರು. ಅದೇನೆಂದರೆ, ಹೆಣ್ಣು-ಗಂಡು ಭೇದವಿಲ್ಲದೆ ಎಲ್ಲರಿಗೂ ಸಮಾನ ರೀತಿಯ ಶಿಕ್ಷಣ, ನೌಕರಿ ಮತ್ತು 21 ವಯಸ್ಸು ತುಂಬಿದ ಎಲ್ಲರಿಗೂ ಮತದಾನದ ಹಕ್ಕನ್ನು ಕೇಳಿದರು. ಇದರಲ್ಲೇನು ಅಂತಹ ವಿಶೇಷ ಎಂದು ನಮಲ್ಲಿ ಒಂದು ಪ್ರಶ್ನೆ ಮೂಡಬಹುದು.
ಆ ಕಾಲದಲ್ಲಿ ಭಾರತವಷ್ಟೇ ಅಲ್ಲದೆ ಇಡಿ ಜಗತ್ತನ್ನೇ ಆಳುತಿದ್ದ ಬ್ರಿಟಿಷ್ ಸರ್ಕಾರದಲ್ಲೂ ಸಹ ಮಹಿಳಿಯರಿಗೆ ಹಾಗೂ ಕರಿಯರಿಗೆ ಮತದಾನದ ಹಕ್ಕಿರಲಿಲ್ಲ. ಬಾಬಾಸಾಹೇಬರು ಮಂಡಿಸಿದ ವಾದವನ್ನು ಕೇಳಿದ ಮೇಲೆ ಸ್ವತಃ ಬ್ರಿಟಿಷ್ ಸರ್ಕಾವು ಅಲ್ಲಿನ ಅಂದರೆ ಇಂಗ್ಲೆಂಡ್ ನಲ್ಲಿರುವ ಪ್ರತಿಯೊಬ್ಬ ಮಹಿಳೆಯರಿಗೂ ಮತ್ತು ಕರಿಯರಿಗೂ ಸಮಾನವಾದ ಮತದಾನದ ಹಕ್ಕನ್ನು ನೀಡಿದರು.
ಇಡಿ ಜಗತ್ತಿನಲ್ಲಿಯೇ D.sc (Doctor of Science ಡಾಕ್ಟರ್ ಆಫ್ ಸೈನ್ಸ್) ಎಂಬ ಪದವಿಯನ್ನು ಮುಗಿಸಿದ ಮೊದಲ ವ್ಯಕ್ತಿ ಎಂದರೆ ಅದು ಮಹಾಜ್ಞಾನಿ ಪರಮಪೂಜ್ಯ ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರು. ಅದೇ ರೀತಿ ಎಲ್ಲ ವಿಷಯಗಳ ಪರಿಪೂರ್ಣ ಅಧ್ಯಯನ ಮಾಡಿದ ಮೊದಲಿಗ ಕೂಡ ಡಾ.ಅಂಬೇಡ್ಕರ್ ಅವರೆ. ಎಲ್ಲರೂ ಕಲಿತಿರುವಂತೆ ಅಂಬೇಡ್ಕರ್ ಅವರು ಸಹ ಕಲಿತಿರಬಹುದು ಇದರಲ್ಲೇನಿ ಮಹಾ! ಎನಿಸಬಹುದು. ಎಲ್ಲರೂ ಓದಿರುವುದು ಮತ್ತು ಅಂಬೇಡ್ಕರ್ ಅವರು ಓದಿರುವುದು ಇವೇರಡನ್ನು ತುಲನೆ ಮಾಡಿ ನೋಡಿದರೆ ಬಹಳ ಅಜ-ಗಜಾಂತರ ವ್ಯತ್ಯಾಸವಿದೆ. ಭಾರತೀಯರಲ್ಲಿ ಮೂರು ಜನ ಬ್ಯಾರಿಸ್ಟರ್ ಪದವಿ ಪಡೆದವರಲ್ಲಿ ಮಹಾತ್ಮ ಗಾಂಧಿ, ಮೊಹಮ್ಮದ್ ಅಲಿ ಜಿನ್ನಾ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು. ಆ ಕಾಲದ ಅತಿ ಉನ್ನತ ಪದವಿ ಇದಾಗಿತ್ತು. ಈ ಮೂವರೂ ಸಮಾನ ಪದವಿ ಪಡೆದಿದ್ದರೂ ಕೇವಲ ಅಂಬೇಡ್ಕರ್ ಅವರಿಗೆ ಮಾತ್ರ ವಿದೇಶಿಗರು ಯಾಕೆ ಮಾನ್ಯತೆ ನೀಡಿದ್ದು! ಮತ್ತು ವಿಶ್ವಜ್ಞಾನಿ ಎಂದು ಕರೆದದ್ದು?
ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಹೆಚ್ಚಿನ ವ್ಯಾಸಾಂಗ ಮಾಡಿದವರಲ್ಲಿ ಅತಿ ಬಡತನದಲ್ಲಿ ಓದಿದ ಮೊದಲ ವ್ಯಕ್ತಿ ಎಂದರೆ ಅದು, ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರು. ಇನ್ನೂಳಿದ ಎಲ್ಲರಿಗೂ ಎಲ್ಲ ರೀತಿಯ ಸೌಕರ್ಯಗಳು ಇದ್ದವು ಆದರೆ, ಅಂಬೇಡ್ಕರ್ ಅವರಿಗೆ ಯಾವುದೇ ರೀತಿಯ ಸೌಕರ್ಯಗಳು ಇರಲಿಲ್ಲ. ಗುಡಿಸಲು ಮನೆಯ ದೀಪದಲ್ಲಿ, ಶಾಲಾ ಕೊಠಡಿ ಬಾಗಿಲಲ್ಲಿ ಕುಳಿತು ಓದಿ ಉನ್ನತ ವ್ಯಾಸಂಗ ಮಾಡುವುದು ಅಷ್ಟೇನೂ ಸುಲಭದ
ಮಾತಾಗಿರಲಿಲ್ಲ.
ಬರೋಡ ಸಂಸ್ಥಾನದ ಮಹಾರಾಜ ಸೈಯಾಜಿರಾಬ್ ಗಾಯಕವಾಡ ಇವರಿಂದ ಪ್ರತಿ ತಿಂಗಳು ಕೇವಲ 1163 ರೂಪಾಯಿಗಳ ಶಿಷ್ಯವೇತನ ಪಡೆದು, ಹೆಂಡತಿ, ಮಕ್ಕಳು ಮತ್ತು ಸಂಸಾರವನ್ನು ಬಿಟ್ಟು ವಿದೇಶಕ್ಕೆ ಹೋಗಿ ಓದುವುದು ಅಷ್ಟೇನು ಸುಲಭದಾಗಿರಲಿಲ್ಲ.
ಆ ಕಾಲದಲ್ಲಿ ಭಾರತ ದೇಶವು ನಾನಾ ರೀತಿಯ ಭಾಷೆ, ನಾನಾ ರೀತಿಯ ಧರ್ಮ, ನಾನಾ ರೀತಿಯ ಪಂಥಗಳು, ನಾನಾ ರೀತಿಯ ಆಚರಣೆಗಳು ಮತ್ತು ಅತಿ ಕಠೋರ ರೀತಿಯ ಜಾತಿಯತೆ ಮತ್ತು ವರ್ಣಾಶ್ರಮದ ದೇಶವಾಗಿತ್ತು. ಇಂತಹ ದುಸ್ತಿರ ಕಾಲದಲ್ಲಿ ಭಾರತೀಯರು ಬ್ರಿಟಿಷ್ಯರೊಂದಿಗೆ ಹೋರಾಡಿದರೇ ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರು ಬ್ರಿಟಿಷ್ಯರು ಮತ್ತು ಭಾರತಿಯ ಮೇಲ್ಜಾತಿಯ ಜನರೊಂದಿಗೆ ಹೋರಾಡಿ ಇಡಿ ವಿಶ್ವವೇ ಮೆಚ್ಚುವಂಥ 395 ಕಲಂ ಗಳನ್ನೊಳಗೊಂಡ ಸಮ ಸಂವಿಧಾನ ಬರೆಯುವುದರೊಂದಿಗೆ 2000 ವರ್ಷಗಳ ಗುಲಾಮಗಿರಿಯಲ್ಲಿ ಬಾಳುತ್ತಿದ್ದ ದಲಿತ, ಹಿಂದುಳಿದವರ್ಗ ಮತ್ತು ಮಹಿಳೆಯರಿಗೆ ಸಮಾನವಾದ ಹಕ್ಕನ್ನು ನೀಡಿ ಅವರ ಬದುಕಿಗೆ ಹೊಸ ಭವಿಷ್ಯದ ಇತಿಹಾಸ ಬರೆದು ಅಂಬೇಡ್ಕರ್ ಅವರು ಮಹಾತತ್ವಜ್ಞಾನಿಯಾದರು. ಈ ಕಾರಣಕ್ಕಾಗಿಯೇ ಇಡಿ ಜಗತ್ತು ಬಾಬಾಸಾಹೇಬರ ಮಹಾನ ಪಾಂಡಿತ್ಯವನ್ನು ಮೆಚ್ಚಿ ಅವರಿಗೆ ವಿಶ್ವಜ್ಞಾನಿ ಎಂದು ಗೌರವದ ಬಿರುದನ್ನು ನೀಡಿ, ಅವರ ಜನುಮ ದಿನವನ್ನು ವಿಶ್ವ ಜ್ಞಾನದ ದಿನ(World Knowledge of Day) ವೆಂದು ಘೋಷಿಸಿತು. ಆದ್ದುದ್ದರಿಂದ ಬಾಬಾಸಾಹೇಬ ಡಾ. ಭೀಮರಾವ ರಾಮಜಿ ಅಂಬೇಡ್ಕರ್ ಅವರು ಇಡಿ ಜಗತ್ತೆ ಮೆಚ್ಚುವ ವಿಶ್ವ ಮಾನವರಾದದ್ದು. ಇಂತಹ ಮಹಾನ ತತ್ವಜ್ಞಾನಿ ಹುಟ್ಟಿದ್ದು ನಮ್ಮ ಭಾರತದಲ್ಲಿ ಎಂಬ ಹೆಮ್ಮೆಯಿಂದ ಈ ಲೇಖನವನ್ನು ಪೂರ್ಣಗೊಳಿಸುತಿದ್ದೆನೆ.
ಜೈ ಫುಲೆ, ಜೈ ಶಾಹು, ಜೈ ಭೀಮ, ಜೈ ಪ್ರಬುದ್ಧ ಭಾರತ
ಲೇಖನ : ಚಿಕ್ಕಪ್ಪಾ ಸನದಿ