ಯಲ್ಪಾರಟ್ಟಿ ಅರಣ್ಯಸಿದ್ದೇಶ್ವರ ದೇವಸ್ಥಾನದಲ್ಲಿ ಕಾನೂನು ಅರಿವು ಕಾರ್ಯಕ್ರಮ ಜರುಗಿತು.

Share the Post Now

ಬೆಳಗಾವಿ


ರಾಯಬಾಗ :ತಾಲೂಕಿನ ಕುಡಚಿ ಮತಕ್ಷೇತ್ರದ ಹಾರೂಗೇರಿ ಪೊಲೀಸ್ ಠಾಣೆಯ ನೂತನ ಪಿಎಸ್ಐ ರೇಣುಕಾ ಜಕನೂರ್ ಅವರು ಯಲ್ಪಾರಟ್ಟಿ ಗ್ರಾಮಕ್ಕೆ ಆಗಮಿಸಿ ಕಾನೂನು ಅರಿವು ಎಂಬ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದರು

ಶ್ರೀ ಅರುಣ ಸಿದ್ದೇಶ್ವರ ದೇವಸ್ಥಾನದಲ್ಲಿ ಮೊಟ್ಟ ಮೊದಲು ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುವ ಒಂದು ನಿಟ್ಟಿನಲ್ಲಿ ಬೈಕ್ ಸವಾರರು ಕಡ್ಡಾಯವಾಗಿ ISI ಮಾರ್ಕ್ ಹೊಂದಿರುವ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ದರಿಸಬೇಕು ಜೊತೆಗೆ ಗಾಡಿಗಳ ಇನ್ಸೂರೆನ್ಸ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ವಾಹನಕ್ಕೆ ಸಂಬಂಧಿಸಿದಂತಹ ಎಲ್ಲ ದಾಖಲಾತಿಗಳನ್ನು ತಮ್ಮ ವಾಹನದಲ್ಲಿ ಇಟ್ಟುಕೊಡಿರಬೇಕು.

ನಾಲ್ಕು ಚಕ್ರ ವಾಹನ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು ಟ್ರ್ಯಾಕ್ಟರ್ ಚಾಲಕರು ತಮ್ಮ ವಾಹನದ ಹಿಂಬದಿಯಲ್ಲಿ ಕಡ್ಡಾಯವಾಗಿ ರಿಪ್ಲೆಕಟರ್ ಅಳವಡಿಸಬೇಕು ಸಾರ್ವಜನಿಕರು ತಮ್ಮ ಮನೆಯಲ್ಲಿದ್ದ ಬೆಲೆಬಾಳು ವಸ್ತುಗಳನ್ನು ಇದ್ದರೆ ಬ್ಯಾಂಕಿನ ಸೇಫರ ಲಾಕರನಲ್ಲಿ ಇಟ್ಟುಕೊಳಬೇಕು ದೇವಸ್ಥಾನದ ವಿವಿಧ ಆಯಕಟ್ಟಿನಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಗ್ರಾಮದಲ್ಲಿ ಕಾನೂನಾತ್ಮಕ ಸಮಸ್ಯ ಕಂಡುಬಂದಲ್ಲಿ 112 ನಂಬರಿಗೆ ಕರೆ ಮಾಡಿ ಮಾಹಿತಿಯನ್ನು ತಿಳಿಸಬೇಕು ಎಂದು ಸಾರ್ವಜನಿಕರಿಗೆ ಹೇಳಿದರು

ಈ ಸಂದರ್ಭದಲ್ಲಿ ಶ್ರೀ ಅರಣ್ಯ ಸಿದ್ಧೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಅಮಿತ್ ಕವಟಗೊಪ ಸದಸ್ಯರಾದ ಶಂಕರ್ ಸೌದಿ ಮಹಾದೇವ ತೆರದಾಳ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರಾದ ಚಿದಾನಂದ ಕೋಳಿ ಸಿದ್ದಪ್ಪ ಕರೋಲಿ ಸಿದ್ದಪ್ಪ ಕೋತ. ರವಿ ಕವಟಕೊಪ್ಪ. ಶಿವು ಜಂಬಗಿ. ಮಲಕಾರಿ ದಳವಾಯಿ. ಚಾಮರಾಜ ಒಡೆಯರ. ಶ್ರೀಶೈಲ್ ಗುಡೋಡಗಿ ಹಾಗೂ ಊರಿನ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರೊಫೆಸರ್ ಆರ್ ಎಸ್ ಗುಡೂಡಗಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ವರದಿ :ಸಂಜೀವ್ ಬ್ಯಾಕುಡೆ

Leave a Comment

Your email address will not be published. Required fields are marked *

error: Content is protected !!