ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಕಾಗವಾಡ:ಕಾಗವಾಡದಲ್ಲಿ ನೂತನ ತಾಲೂಕ ರಚನೆಯಾದ ಬಳಿಕ ಉಪನೋಂದನಿ( ಸಬ್ ರಿಜಿಸ್ಟ್ರಾರ್) ಸ್ವತಂತ್ರ ಕಚೇರಿ ಹಾಗೂ ಅಗ್ನಿಶಾಮಕ ದಳ ಮಂಜೂರುಗೊಂಡಿದ್ದರಿಂದ ಮತಕ್ಷೇತ್ರದ ಕಾರ್ಯಕರ್ತರು ಶಾಸಕ ಶ್ರೀಮಂತ ಪಾಟೀಲರಿಗೆ ಅದ್ದೂರಿವಾಗಿ ಸ್ವಾಗತ ನೀಡಿ, ಸತ್ಕರಿಸುವ ಕಾರ್ಯಕ್ರಮ ಕಾಗವಾಡದಲ್ಲಿ ನೆರವೇರಿಸಲಾಯಿತು.
ಮಂಗಳವಾರ ಸಂಜೆ ಕಾಗವಾಡದಲ್ಲಿ ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕ ಶ್ರೀಮಂತ ಪಾಟೀಲರ ಅಭಿಮಾನಿಗಳು ಒಂದುಗೂಡಿ ಕಾಗವಾಡದ ಸಂತುಬಾಯಿ ಮಂದಿರದಿಂದ ಗ್ರಾಮ ಪಂಚಾಯಿತಿ ಸಭಾಭವನದವರೆಗೆ ತೆರೆದ ವಾಹನದಲ್ಲಿ ಶಾಸಕ ಶ್ರೀಮಂತ ಪಾಟೀಲರ ಹಾಗೂ ನಾಂದನಿ ಜೈನ ಮಠದ ಜೀನಸೇನ ಭಟಾರಕ ಸ್ವಾಮಿಜಿ, ಕಾಗವಾಡ ಗುರುದೇವ ಆಶ್ರಮದ ಯತೀಶ್ವರನಂದ ಸ್ವಾಮೀಜಿಗಳೊಂದಿಗೆ ಭವ್ಯ ಮೆರವಣಿಗೆದೊಂದಿಗೆ ಬರಮಾಡಿಕೊಂಡು, ಸುಮಾರು ಜೆಸಿಬಿ ಮುಖಾಂತರ ಪುಷ್ಪವೃಷ್ಟಿ ಮಾಡುವುದೊಂದಿಗೆ ಒಂದು ಗಂಟೆ ಕಾಲ ಹೂಮಾಲೆ ಹಾಕುತ್ತಾ ಅದ್ದೂರಿವಾಗಿ ಸ್ವಾಗತ ನೀಡಿದರು.
ಕಾಗವಾಡದಲ್ಲಿ ಮಂಜೂರುಗೊಂಡ ಉಪನೋಂದಣಿ ಕಚೇರಿ, ಅಗ್ನಿಶಾಮಕ ದಳ, ಮತ್ತು 5 ಕೋಟಿ ರೂ ವೆಚ್ಚದಲ್ಲಿ ನಗರೊತ್ತಾನ ವಿವಿಧ ಕಾಮಗಾರಿಗಳಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಜರಗಿತು.
ಸನ್ಮಾನ ಸ್ವೀಕರಿಸಿ ಶಾಸಕ ಶ್ರೀಮಂತ ಪಾಟೀಲರು ಮಾತನಾಡುವಾಗ ನಾನು ಮತಕ್ಷೇತ್ರದಲ್ಲಿಯ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ್ದೇನೆ. ಇದನ್ನು ಗಮನಿಸಿ ನನಗೆ ಸ್ವಾಗತ ನೀಡಿದ್ದೀರಿ. ನಾನು ನೀಡಿರುವ ಸೇವೆ ದೊಡ್ಡದಲ್ಲ ಆದರೆ ನೀವು ಸನ್ಮಾನಿಸುವದು ಅತೀ ದೊಡ್ಡದಾಗಿದೆ. ಯಾವದೆ ಜಾತಿ, ಧರ್ಮ ನಾನು ಮನಸ್ಸಿನಲ್ಲಿಟ್ಟುಕೊಂಡವನಲ್ಲ. ಆದರೆ ಚುನಾವಣೆ ಬಂದಾಗ ಕೆಲವರಿಗೆ ಜಾತೀಯತೆ ಎದ್ದು ಕಾಣುತ್ತದೆ. ಇದು ನನಗೆ ಬೇಸರ ತಂದಿದೆ ಎಂದು ಹೇಳಿ ಬರುವ ಚುನಾವಣೆ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದರು.
ಕಾಗವಾಡ ಗುರುದೇವ ಆಶ್ರಾಮದ ಯತೀಶ್ವರಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡುವಾಗ, ನಾನು ಕಂಡಿದ್ದು ನಿಜವಾದ ಸಮಾಜ ಸೇವಕ ಶಾಸಕ ಶ್ರೀಮಂತ ಪಾಟೀಲರು, ಇವರು ತಮ್ಮ ಜಿವನದಲ್ಲಿ ಜಾತಿ,ಧರ್ಮ ಭೇದ-ಭಾವ ಮಾಡಿಲ್ಲ. ಕಣೇರಿ ಮಠದ ಸ್ವಾಮಿಜಿಗಳು ಇವರ ಬಗ್ಗೆ ಹೇಳುವಾಗ ಬಹಳಷ್ಟು ಸಜ್ಜನ ವ್ಯಕ್ತಿ ಎಂದಿದ್ದಾರೆ. ಆದರೆ ಬರುವ ಚುನಾವಣೆಯಲ್ಲಿ ಜಾತೀಯತೆ ಎದ್ದು ಕಾಣುಬಹುದು. ಅದಕ್ಕೆ ನೀವು ತಿರಸ್ಕರಿಸಿರಿ ಎಂದರು.
ಕಾಗವಾಡ ಮತಕ್ಷೇತ್ರದ ಶಾಸಕರಾಗಿ ಶ್ರೀಮಂತ ಪಾಟೀಲರನ್ನು ಕಂಡಿದ್ದು ನಾವು ಭಾಗ್ಯವಂತರು. ಬರುವ ಚುನಾವಣೆಯಲ್ಲಿ ಅಧಿಕ ಮತಗಳಿಂದ ಶಾಸಕರಾಗಿ ಆಯ್ಕೆ ಮಾಡೋಣ ಎಂದು ಬಿಜೆಪಿ ಪಕ್ಷದ ಮುಖಂಡರಾದ ನ್ಯಾಯವಾದಿ ಅಭಯಕುಮಾರ ಅಕಿವಾಟ್ಟೆ, ಅಥಣಿ ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷ ಶೀತಲ ಪಾಟೀಲ, ಶಿರಗುಪ್ಪಿ ಶಾಖೆಯ ಕೆಎಲ್‍ಇ ಮಹಾವಿದ್ಯಲಯದ ಅಧ್ಯಕ್ಷ ಶೀವಾನಂದ ಪಾಟೀಲ್, ಅರುಣ ಜೋಶಿ, ಪ್ರಕಾಶ ಧೊಂಡಾರೆ, ಮಾರುತಿ ಉಪ್ಪಾರ ಮಾತನಾಡಿದರು.
ಸ್ವಾಗತ ಸಮಾರಂಭದಲ್ಲಿ ನಿವೃತ ಪ್ರಾಚಾರ್ಯ ಬಿ.ಎ.ಪಾಟೀಲ್ ಸ್ವಾಗತಿಸಿ ಪ್ರಾಸ್ಥಾವಿಸಿದರು.
ಇದೆ ವೇಳೆ ಪ.ಪೂ.ಸ್ವಸ್ತಿಶ್ರೀ ಜೀನಸೇನ ಭಟ್ಟಾರಕ ಸ್ವಾಮೀಜಿ ಮತ್ತು ಡಾ.ಯತೀಶ್ವರನಾನಂದ ಮಹಾಸ್ವಾಮೀಜೀ ಆಶೀರ್ವಚನ ನೀಡಿದರು.
ಈ ವೇಳೆ ದಾದಾ ಪಾಟೀಲ್, ಶೀತಲಗೌಡ ಪಾಟೀಲ್,ಮಹದೇವ ಕೋರೆ,ಅಪ್ಪಾಸಾಬ ಮಳಮಳಸಿ,ನಿಂಗಪ್ಪ ಖೋಕಲೆ,ಸುಭಾಷ್ ಕಠಾರೆ,ಬಾಹುಸಾಬ ಜಾಧವ,ಆರ್ ಎಮ್ ಪಾಟಿಲ್ ,ಅಭಯಕುಮಾರ ಅಕಿವಾಟೆ,ಭರತ ಪಾಟೀಲ್,ಅಶೋಕ ಕಾಂಬ್ಳೆ,ಶಿವಾನಂದ ಪಾಟೀಲ್,ರಾಕೇಶ್ ಪಾಟೀಲ್,ವಿಮಲ ಪಾಟೀಲ್,ಅಪರ್ಣಾ ಪಾಟೀಲ್,ಪ್ರಕಾಶ ದೊಂಢಾರೆ,ಬಾಳು ಕಾಂಬ್ಳೆ,ದೀಪಕ ಕಾಂಬ್ಳೆ,ಅಕ್ಷಯ ಮೇತ್ರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.