ವರದಿ: ಸಂಗಮೇಶ ಹಿರೇಮಠ.
ಬೆಳಗಾವಿ
ಮುಗಳಖೋಡ: ಪಟ್ಟಣದ ಶ್ರೀ ಮಠದಲ್ಲಿ ಶ್ರೀ ಯಲ್ಲಾಲಿಂಗೇಶ್ವರರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಮುಗಳಖೋಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ತಮ್ಮ ಮನೆಯಲ್ಲಿ ರೊಟ್ಟಿಯನ್ನು ಮಾಡಿಕೊಂಡು ಶ್ರೀಮಠಕ್ಕೆ ಸಮರ್ಪಿಸುವ ರೊಟ್ಟಿ ಬುತ್ತಿ ಜಾತ್ರೆ ವಿಜೃಂಭಣೆಯಿಂದ ನಡೆಯಿತು.
ಶ್ರೀ ಮಠದ ಪೀಠಾಧಿಪತಿ ಡಾ ಮುರುಘರಾಜೇಂದ್ರ ಮಹಾಸ್ವಾಮಿಗಳು ಬುಧವಾರ ಸಾಯಂಕಾಲ 6 ಗಂಟೆಗೆ ರೊಟ್ಟಿ ಬುತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಕ್ತರನ್ನು ಉದ್ದೇಶಿಸಿ ಮಾತನಾಡಿ ಮುಗಳಖೋಡ ಮುಕ್ತಿಮಂದಿರವು ದಾಸೋಹ ಪರಂಪರೆಯನ್ನು ಹೊಂದಿರುವ ಶ್ರೀಮಠ ಮುಗಳಖೋಡ ಮಠವಾಗಿದೆ.
ಶ್ರೀ ಯಲ್ಲಾಲಿಂಗ ಮಹಾಪ್ರಭುಗಳು ಹಾಗೂ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಹಾಕಿ ಕೊಟ್ಟಂತಹ ದಾಸೋಹ ಪರಂಪರೆ ಭಕ್ತರ ಮನದಲ್ಲಿ ಅಚ್ಚಳಿಯದ ಹಾಗೆ ಉಳಿದಿದೆ. ದಾಸೋಹ ಪರಂಪರೆಯಲ್ಲಿ ಜಾತಿ ಮತ ಪಂಥ ಎಂಬ ಭೇದ ಭಾವ ಮಾಡದೇ ಎಲ್ಲರೂ ಪಾಲ್ಗೊಂಡು ಗುರು ಕೃಪೆಗೆ ಪಾತ್ರರಾಗುತ್ತಾರೆಂದು ಹೇಳಿದರು.
ಶ್ರೀ ಮುರುಘರಾಜೇಂದ್ರ ಶ್ರೀಗಳು ಹಾಗೂ ಚಿನ್ಮಯಗಿರಿ ಶ್ರೀ ವೀರಮಹಾಂತ ಶಿವಾಚಾರ್ಯರು ಭಕ್ತರು ತಂದ ರೊಟ್ಟಿ ಬುಟ್ಟಿಗಳನ್ನು ಹೊತ್ತುಕೊಂಡು ಶ್ರೀಮಠಕ್ಕೆ ಭಕ್ತರನ್ನು ಬರಮಾಡಿಕೊಂಡರು.
ಕಾರ್ಯಕ್ರಮವನ್ನು ಖ್ಯಾತ ವಕೀಲರಾದ ಶ್ರೀ ಸೊಮು ಹೊರಟ್ಟಿ ನಿರೂಪಿಸಿ ವಂದಿಸಿದರು.
ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನವಲಗಟ್ಟಿ, ಯುವ ಮುಖಂಡ ಅನಂತಕುಮಾರ ಬ್ಯಾಕೋಡ, ರಾಯಗೌಡ ಖೇತಗೌಡರ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಮೇಶ ಖೇತಗೌಡರ, ಪುರಸಭೆ ಸದಸ್ಯರಾದ ಮಹಾಂತೇಶ ಯರಡೆತಿ, ಮಂಗಲ ಪಣದಿ, ಅನ್ನಪೂರ್ಣ ಎರಡತಿ, ಅಪಾರಭಕ್ತರು ಪಾಲ್ಗೊಂಡಿದ್ದರು.
ಇಂದು ಪಾದಯಾತ್ರೆ: ಕೋಳಿಗುಡ್ಡದ ಶ್ರೀ ಆನಂದ ಮಹಾರಾಜರ ಶ್ರೀಮಠದಿಂದ ಮುಗಳಖೋಡ ಯಲ್ಲಾಲಿಂಗೇಶ್ವರ ಮಠದವರಿಗೆ ಭಕ್ತರು ಸೇರಿದಂತೆ ನಾಡಿನ ಮಠಾಧೀಶರು ರಾಜಕಾರಣಿಗಳು ಪಾದಯಾತ್ರೆಯಲ್ಲಿ ಬಾಗಿಯಾಗಲಿದ್ದಾರೆ.