ಬೆಳಗಾವಿ
ಹುಕ್ಕೇರಿ: ತಾಲೂಕಿನ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಹುಕ್ಕೇರಿ ತಾಲೂಕಾ ಅಧ್ಯಕ್ಷರನ್ನಾಗಿ ರವಿ ಬಿ ಕಾಂಬಳೆ ಇವರನ್ನು ಆಯ್ಕೆಮಾಡಿದ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಂಗ್ಲೆ ಇವರು ಇಂದು ಬೆಳಗಾವಿ ಸರ್ಕೇಟ್ ಹೌಸಿನಲ್ಲಿ ಆದೇಶ ಪ್ರತಿ ನೀಡುವುದರ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಪತ್ರಕರ್ತರು ಹಗಲಿರಳು ತಮ್ಮ ಜೀವನದ ಹಂಗವನ್ನು ತೊರೆದು ಸುದ್ದಿಗಳನ್ನು ಮಾಡುವರು ಇವರಿಗೆ ಸರಿಯಾದ ಬೆಂಬಲವಿಲ್ಲದಂತಾಗಿದೆ ಸರ್ಕಾರದಿಂದ ಸಿಗುವಂತ ಎಲ್ಲ ಸವಲತ್ತುಗಳು ನಮ್ಮ ಕಾರ್ಯನಿರತ ಪತ್ರಕರ್ತರ ಧ್ವನಿಯ ಎಲ್ಲಾ ಪದಾಧಿಕಾರಿಗಳಿಗೆ ಸಿಗಬೇಕು ಮತ್ತು ತಾವುಗಳು ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ ಕಾಮಣ್ಣವರ.ಶಿವಾಜಿ ಬಾಳೇಶಗೋಳ .ಗುರು ಮಡಿವಾಳ.ಸಂತೋಷ ಪಾಟೀಲ.ರಾಘವೆಂದ್ರ ಕರ್ಯಗೋಳ.ಸುನೀಲ ಲಾಳಗೆ.ಲಗಮಪ್ಪಾ ಕಾಳೇ.ಭರತೇಶ ಅಗಸರ.ಆದಿನಾಥ ರೋಖಡೆ. ಮುಂತಾದ ಪದಾಧಿಕಾರಿಗಳು ಹಾಜರಿದ್ದರು.
Editor :Kareppa s Kamble, Mahanayaka Sandesha