ಇಂಗಳಿ ಪಿಕೆಪಿಎಸ್‌ನ ನೂತನ ಅಧ್ಯಕ್ಷರಾಗಿ ರಾಜಾರಾಮ ಮಾನೆ; ಉಪಾಧ್ಯಕ್ಷರಾಗಿ ಬಸಪ್ಪಾ ಕಾಂಬಳೆ ಅವಿರೋಧವಾಗಿ ಆಯ್ಕೆ..!

Share the Post Now

ಬೆಳಗಾವಿ

ಚಿಕ್ಕೋಡಿ ತಾಲೂಕಿನ ಇಂಗಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ರಾಜಾರಾಮ ಅಪ್ಪಾಸಾಹೇಬ ಮಾನೆ, ಉಪಾಧ್ಯಕ್ಷರಾಗಿ ಬಸಪ್ಪ ಕಾಂಬಳೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಿಕ್ಕೋಡಿ ಎಆರ್ ಆಫೀಸಿನ ಕಲಾವತಿ ಮುಂಗುಳಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ಅಜೀತ ಚಿಗೆರೆ ಪರಿಚಯಿಸಿದರು. ನಂತರ ಬಾಜಿರಾವ್ ಮಾನೆ ಮಾತನಾಡಿ, ಸಂಘದ ಪರಿಚಯ ಮಾಡಿಕೊಟ್ಟರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ರಾಜಾರಾಮ ಮಾನೆ ಸಂಘದ ಎಲ್ಲ ನಿರ್ದೇಶಕರ ಸಹಾಯ-ಸಹಕಾರದಿಂದ ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಸಂಸ್ಥೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪ್ರಯತ್ನಿಸುವುದಾಗಿ ಮತ್ತು ಸಹಕಾರದಿಂದ ವಿವಿಧ ಯೋಜನೆಗಳ ಲಾಭವನ್ನು ಸದಸ್ಯರಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು.

ಈ ವೇಳೆ ನಿರ್ದೇಶಕರಾದ ಭೀಮು ಸಂಗಮೆ, ಮಾರುತಿ ಪವಾರ, ಸುನೀಲ ಪಾಟೋಳೆ, ಹೂವಣ್ಣಾ ಚೌಗುಲೆ, ಸುಭಾಷ ಘೋಸರವಾಡೆ, ಸದಾಶಿವ ಜಾಧವ, ಸಾವಿತ್ರಿ ಘೋಸರವಾಡೆ, ಬೀಬಾತಾಯಿ ಶಿಂಧೆ, ಗಣಪತಿ ಧನವಾಡೆ ಅಣ್ಣಾಸಾಹೇಬ ಡಿಗ್ರೆಜೆ, ಅಪ್ಪಾಸಾಹೇಬ ಜತ್ರಾಟೆ, ಗುಂಡಾ ಅಲಾಸೆ, ಲಹು ಮಾನೆ, ಸುಭಾಷ ಜುಗಳೆ, ಬಾಪುಸಾಹೇಬ ರಾಮದುರ್ಗೆ, ಭೂಪಾಲ ಪಣದೆ, ಬಾಬಾಸಾಹೇಬ ಧಾಬಡೆ, ಸಂಜಯ ಕುಡಚೆ, ಗಣಪತಿ ಧನವಡೆ,ಬಾಜಿರಾವ್ ಮಾನೆ, ವಿಲಾಸ ಪವಾರ, ಮೋಹನ್ ಪಾಟೋಳೆ, ಬಾಬುರಾವ್ ಶಿಂಧೆ, ಶಿವಾಜಿ ಶಿಂಧೆ, ಬಾಬಾಸಾಹೇಬ ಜುಗಳೆ, ಅಮೋಲ್ ಶೆಟ್ಟಿ, ಸುಭಾಷ ಖೋತ, ಗಣಪತಿ ಚೌಗುಲೆ, ಕಿರಣ ಕೊಕಾಟೆ ಸೇರಿದಂತೆ ಸಂಘದ ಎಲ್ಲ ಪದಾಧಿಕಾರಿಗಳು, ಇತರ ಸಂಚಾಲಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಆನಂದ ಬಾಮನೆ ವಂದಿಸಿದರು.

ವರದಿ :ರಾಜು ಕೋಳಿ

Leave a Comment

Your email address will not be published. Required fields are marked *

error: Content is protected !!