ಬೆಳಗಾವಿ
ವರದಿ :ಸಂಗಮೇಶ ಹಿರೇಮಠ
ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಿದ ಶ್ರೀಗಳು ಹಾಗೂ ಭಕ್ತಗಣ, “ಶ್ರೀ ಯಲ್ಲಾಲಿಂಗ ಮಹಾಪ್ರಭುಗಳಿoದ ಭಕ್ತರ ಬದುಕು ಹಸನು” ಶ್ರೀ ಮುರುಘರಾಜೇಂದ್ರ ಸ್ವಾಮೀಜಿ….
ಮುಗಳಖೋಡ: ಶ್ರೀ ಯಲ್ಲಾಲಿಂಗ ಮಹಾಪ್ರಭುಗಳಿoದ ಭಕ್ತರ ಬಾಳು ಹಸನಾಗಿದೆ, ತಮ್ಮ ಇಷ್ಟಾರ್ಥಗಳನ್ನು ಹೋತ್ತು ಬೇಡಿ ಬಂದ ಭಕ್ತರಿಗೆ ಅವರು ಕಾಮಧೇನು ಕಲ್ಪರೂಕ್ಷವಾಗಿ ಭಕ್ತರ ಬಾಳಲ್ಲಿ ಸದಾ ನೆಲೆ ನಿಂತಿದ್ದಾರೆ. ಅಂತಹ ಪರಮ ಗುರುವಿನ ಸ್ಮರಣೆಗಾಗಿ ಭಕ್ತ ಕುಲಕೋಟಿ ಆಗಮಿಸಿದೆ.
ಲಿಂಗೈಕ್ಯ ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಆಶೀರ್ವಾದದ ಬಲದಿಂದ ಭಕ್ತರ ಬಾಳು ಹಸನಾಗಿದೆ ಎಂದು ಡಾ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು .
ಅವರು ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬ್ರಹ್ಮಠದಲ್ಲಿ ಶ್ರೀ ಯಲ್ಲಾಲಿಂಗೇಶ್ವರರ 37ನೇ ಪುಣ್ಯ ಸ್ಮರಣೋತ್ಸವದ ಸಮಾರೋಪ ಸಮಾರಂಭದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಮುಂಜಾನೆ ಕರ್ತೃ ಗದ್ದುಗೆಗೆ ಡಾ ಮುರುಘರಾಜೇಂದ್ರ ಮಹಾಸ್ವಾಮಿಗಳು ವಿಶೇಷ ಪೂಜೆ ಸಲ್ಲಿಸಿ, ಕುಡಚಿ ಮತಕ್ಷೇತ್ರದ ಬಿಜೆಪಿ ಯುವ ಮುಖoಡ ಉಮೇಶ ಕಾರಜೋಳ ಅವರು ಶ್ರೀ ಯಲ್ಲಾಲಿಂಗೇಶ್ವರ ಕರ್ತೃ ಗದ್ದುಗೆಗೆ ಹಾಗೂ ಶಿಖರಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಠಿ ಮಾಡಿಸಿ ತಮ್ಮ ಭಕ್ತಿಯ ಹರಕೆ ತಿರಿಸಿ ವಿಶೇಷ ಪೂಜೆ ಸಲ್ಲಿಸಿದರು.
ಉಮೇಶ ಕಾರಜೋಳ ಹಾಗೂ ಮಾರುತಿ ಗೋಕಾಕ ಪೈಲ್ವಾನರು ಶ್ರೀಮಠದ ಪೀಠಾಧಿಪತಿ ಮುರುಘರಾಜೇಂದ್ರ ಮಹಾಸ್ವಾಮಿಗಳ ಪಾದಪೂಜೆಯನ್ನು ಮಾಡಿ ಸತ್ಕರಿಸಿದರು . ಅಪ್ಪಾಜಿ ಸಂಗೀತ ಕಲಾ ಬಳಗದಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಶ್ರೀ ಮಠಕ್ಕೆ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ,ತೆಲಂಗಾಣ, ಆಂಧ್ರ ಹಾಗೂ ಗೋವಾ ಸೇರಿದಂತೆ ಲಕ್ಷಾoತರ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.