ಬೆಳಗಾವಿ
ವರದಿ: ಸಂಗಮೇಶ ಹಿರೇಮಠ
ಮುಗಳಖೋಡ: ಪ್ರಸ್ತುತ ಯುಗದಲ್ಲಿ ಚುನಾವಣಾ ವ್ಯವಸ್ಥೆ ತೀರಾ ಅಸ್ತವ್ಯಸ್ತವಾಗಿ ಎಲ್ಲಿ ನೋಡಿದಲ್ಲಿ ಜಾತಿ ರಾಜಕಾರಣ, ಮತ ಸಂಗ್ರಹಣೆ, ಹನಕ್ಕೆ ತಮ್ಮ ಮತಗಳನ್ನು ಮಾರುವುದು ಪ್ರಜೆಗಳ ತೀರಾ ಬೇಸರದ ಸಂಗತಿಯಾಗಿದೆ. ಕಾರಣ ಪ್ರಜೆಗಳು ವ್ಯಕ್ತಿಗೆ ಮತ ನೀಡದೆ ಆತನ ವಿಚಾರ ಮತ್ತು ಕಾರ್ಯಗಳಿಗೆ ಮತ ನೀಡಿ ಎಂದು ಪ್ರೊ. ಪ್ರಕಾಶ ಕಂಬಾರ ಹೇಳಿದರು.
ಅವರು ಪಟ್ಟಣದ ಚವಿವ ಸಂಘದ ಡಾ. ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮತದಾನ ದಿನಾಚರಣೆಯ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿ ಪ್ರಜೆಗಳು ಯಾವುದೇ ನೋಟು, ಕುಡಿತಕ್ಕೆ ಆಶೆಯೊಡ್ಡದೆ ಉತ್ತಮ ವ್ಯಕ್ತಿಗೆ ಮತ ಚಲಾಯಿಸುವದು ಅವಶ್ಯಕವಾಗಿದೆ ಎಂದು ಹೇಳಿದರು.
ನಂತರ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ವಿವೇಕಾನಂದ ಹುಂಡರಗಿ ಮಾತನಾಡಿ ಒಳ್ಳೆಯ ನೈತಿಕತೆ ಹೊಂದಿದ ವ್ಯಕ್ತಿಯನ್ನು ಆಯ್ಕೆಮಾಡಿ ಕಳಿಸಿದರೆ ನಮ್ಮ ಭಾರತ ಅಭಿವೃದ್ಧಿ ಹೊಂದುವಲ್ಲಿ ಸಂಶಯವಿಲ್ಲ, ಪ್ರಸ್ತುತ ಕಾಲದಲ್ಲಿ ಪ್ರಜೆಗಳು ನೋಟಿಗೆ ವೋಟು ಹಾಕದೆ ಒಬ್ಬ ಮೌಲ್ಯಯುತ ವ್ಯಕ್ತಿಗೆ ಮತ ಚಲಾಯಿಸಿದರೆ ಪ್ರಜೆಗಳ ಬಾಳು ಬಂಗಾರವಾಗುವದು ಎಂದು ಹೇಳಿದರು.
ಮತದಾರರ ಪ್ರತಿಜ್ಞಾ ವಿಧಿಯನ್ನು ಎನ್.ಎಸ್.ಎಸ್ ಘಟಕದ ಸಂಯೋಜಕ ಸಂಗಮೇಶ ಹಿರೇಮಠ ಬೋಧಿಸಿದರು.
ಈ ಸಂದರ್ಭದಲ್ಲಿ ಪ್ರೊ.ಆರ್.ಎಸ್. ಶೇಗುಣಸಿ, ಡಾ. ಪಿ.ಬಿ.ಕೊರವಿ, ರೆಡ್ ಕ್ರಾಸ್ ಘಟಕದ ಸಂಯೋಜಕ ಪ್ರದೀಪ್ ನಾಯಿಕ, ಪ್ರೊ. ಬಿ.ಎಸ್. ಸವಸುದ್ದಿ, ಕೆ.ಪಿ.ಹಾಲಳ್ಳಿ, ಶ್ರೀಮತಿ ಶಿವಲೀಲಾ ಪಾರ್ವತಿ, ಹುಸೇನ್ ಯಲಿಗಾರ, ಸಂಗಣ್ಣ ತೇಲಿ, ಬಸು ಸಣ್ಣಕ್ಕಿ ಸೇರಿದಂತೆ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.