ಬಸವ ಪುರಾಣ ನಿಮಿತ್ಯ 15 ಸಾವಿರ ಯುವಕರಿಗೆ ರುದ್ರಾಕ್ಷಿ ದೀಕ್ಷೆ.

Share the Post Now

ಬೆಳಗಾವಿ

ವರದಿ :ಸಂಗಮೇಶ ಹಿರೇಮಠ


ಭಕ್ತರ ದುಶ್ಚಟಗಳನ್ನು ಜೋಳಿಗೆಗೆ ಹಾಕಿಕೊಂಡು ರುದ್ರಾಕ್ಷಿ ದೀಕ್ಷೆ ನೀಡಿದ ಶ್ರೀ ಡಾ. ಮಹಾಂತ ದೇವರು


ಮುಗಳಖೋಡ: ಇವತ್ತಿನ ಆಧುನಿಕ ಯುಗದಲ್ಲಿ ನಮ್ಮ ಭಾರತೀಯ ಯುವಕರು ಹಲವಾರು ದುಷ್ಚಟಗಳಿಗೆ ಬಲಿಯಾಗುತಿದ್ದಾರೆ. ಅಂತಹ ಯುವಕರಿಗೆ ಜಾತಿ-ಧರ್ಮ, ಲಿಂಗ ಬೇಧವಿಲ್ಲದೆ, ರುದ್ರಾಕ್ಷಿಯ ಶಕ್ತಿಯ ಬಗ್ಗೆ ನಂಬಿಕೆ ಇರುವ, ಇಚ್ಛೆ ಪಡುವ ಜನರು ಈ ರುದ್ರಾಕ್ಷಿಮಣಿ ಧರಿಸಿ ತಮ್ಮ ದುಷ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿ ಸುಖಮಯವಾಗಿ ತಮ್ಮ ಜೀವನ ನಡೆಸಿ ಎಂದು ಶೇಗುಣಸಿ ವಿರಕ್ತಮಠದ ಪ.ಪೂ. ಶ್ರೀ ಡಾ.ಮಹಾಂತ ದೇವರು ಹೇಳಿದರು.

ಅವರು ಮುಗಳಖೋಡ ಸಮೀಪದ ಹಂದಿಗುಂದ ಗ್ರಾಮದ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ನಡೆಯುತ್ತಿರುವ ಬಸವ ಮಹಾ ಪುರಾಣದ ನಿಮಿತ್ಯ.
ಡಾ. ಮಹಾಂತ ದೇವರು ಸ್ವಪ್ರೇರಿತವಾಗಿ ಹಂದಿಗುಂದ ಗ್ರಾಮದ ಸುಮಾರು 15000 ಯುವಕರಿಗೆ ರುದ್ರಾಕ್ಷಿ ದೀಕ್ಷೆ ನೀಡಿ ಭಾರತೀಯ ಸಂಸ್ಕೃತಿಯ ಅರಿವು ಮೂಡಿಸಿದರು.

ಸಾಂಪ್ರದಾಯಿಕವಾಗಿ ಸಂನ್ಯಾಸಿಗಳು, ಋಷಿಗಳು ತಮ್ಮ ಮನಸ್ಸನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ರುದ್ರಾಕ್ಷಿಯನ್ನು ಧರಿಸುತ್ತಾರೆ.

ರುದ್ರಾಕ್ಷಿಯನ್ನು ಧರಿಸಿದಾಗ ಏಕಾಗ್ರತೆಗೆ ಸಹಕಾರಿಯಾಗುತ್ತದೆ. ಈ ರುದ್ರಾಕ್ಷಿಯ ಮಹಿಮೆ ದೊಡ್ಡದು ಇದೊಂದು ಧಾರ್ಮಿಕ ಪರಂಪರೆಯತ್ತ ಜನರನ್ನು ಕೊಂಡೊಯ್ಯುವ ಸಾಧನವಾಗಿದೆ, ಕಾರಣ ಎಲ್ಲರೂ ರುದ್ರಾಕ್ಷಿಯನ್ನು ಧರಿಸಬಹುದು ಎಂದು ಹೇಳಿದರು.

ಶ್ರೀಗಳು ಭಕ್ತರ ಮನೆಗೆ ಕಾಲಿಟ್ಟಾಗ ಸುಮಾರು 400 ಕ್ಕೂ ಅಧಿಕ ಜನರು ತಮ್ಮ ತಮ್ಮ ಸಾರಾಯಿಕುಡಿತ, ತಂಬಾಕು ಸೇವನೆಗಳಂಥ ದುಷ್ಚಟಗಳನ್ನು ತಮ್ಮ ಪಾದಕ್ಕೆ ಅರ್ಪಿಸಿ ಇವತ್ತಿನಿಂದ ಎಲ್ಲ ಚಟಗಳನ್ನು ಬಿಡುತ್ತೆವೆಂದು‌ ಶ್ರೀ ಡಾ. ಮಹಾಂತ ಗುರುಗಳ ಪಾದ ಪೂಜೆ ಮಾಡಿ ಗುರು ಕಾಣಿಕೆ ನೀಡಿ ಪ್ರಮಾಣ ಮಾಡಿದರು.



ಗುರುಗಳು ಬರುವ ಮನೆಗಳ ಮುಂದೆ ನೀರು ಹೊಡೆದು ರಂಗೋಲಿ, ಪುಷ್ಪ ಹಾಕಿ ಸಿಂಗರಿಸಿ ಆರತಿ ಮಾಡಿ ಗುರುಗಳನ್ನು ಬರಮಾಡಿಕೊಂಡ್ಡರು.

ಗುರುಗಳ ಈ ರುದ್ರಾಕ್ಷಿ ದೀಕ್ಷೆಯ ಅಭಿಯಾನದ ನಡೆಯನ್ನು ಕಂಡು ಹಂದಿಗುಂದ ಗ್ರಾಮದ ಜನರು ತಾಯಂದಿರು ಸಂತೋಷ ವ್ಯಕ್ತಪಡಿಸಿ ಇಂತಹ ಕಾರ್ಯಕ್ರಮಗಳು ಎಲ್ಲ ಗ್ರಾಮಗಳಲ್ಲಿ ಮೇಲಿಂದ ಮೇಲೆ ನಡೆಯಬೇಕೆಂದು ತಮ್ಮ‌ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀಗಳ ಜೊತೆಗೆ ಬಸು ನಿಪನಾಳ, ಬಸವರಾಜ ಪಾಟೀಲ್, ಸಂಪತ ಮಿರ್ಜಿ, ಮಲ್ಲು ನಾವಿ, ಮಲ್ಲಿಕಾರ್ಜುನ ಖಾನಗೌಡರ, ರವಿ ಘಂಟಿ, ಮಾತೇಶ ಶಂಕ್ರಟ್ಟಿ, ಬಸವರಾಜ ಭದ್ರಶೆಟ್ಟಿ ನಂದು ನಾವಿ, ವಿಶಾಲ ಸುತಾರ ಸೇರಿದಂತೆ ಗ್ರಾಮದ ಹಿರಿಯರು ಶ್ರೀಮಠದ ಕಾರ್ಯಕರ್ತರು, ಯುವಕರು ಹಾಗೂ ಪಟ್ಟಣದ ಭಕ್ತಾದಿಗಳು ಭಾಗಿಯಾಗಿದ್ದರು.

Leave a Comment

Your email address will not be published. Required fields are marked *

error: Content is protected !!