28 ರಂದು ಬೆಳಗಾವಿಗೆ ಅಮೀತ ಷಾ ಆಗಮನ : ಲಕ್ಷ್ಮಣ ಸವದಿ.

Share the Post Now

ಬೆಳಗಾವಿ

ವರದಿ :ಸಚಿನ್ ಕಾಂಬ್ಳೆ


ಅಥಣಿ:ಬರುವ 28 ರಂದು ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮೀತ ಷಾ ಆಗಮಿಸಲಿದ್ದಾರೆ‌ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ಪಟ್ಟಣದ ವಾರ್ಡ್ ನಂಬರ್ 02 ರಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡ ವಿಜಯ ಸಂಕಲ್ಪ ಅಭಿಯಾನದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಭಾಗವಹಿಸಿ ಪುರಸಭೆ ಸದಸ್ಯ ಕಲ್ಲೇಶ ಮಡ್ಡಿ ಅವರ ನಿವಾಸಕ್ಕೆ ಬಿಜೆಪಿಯೇ ಭರವಸೆ ಎಂಬ ನಾಮ ಫಲಕ ಅಳವಡಿಸಿ ವಿಜಯ ಸಂಕಲ್ಪ ಯಾತ್ರೆಯ ಮೂಲಕ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ಸಾಧನೆಗಳನ್ನು ಸಾರ್ವಜನಿಕರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ನಾವು ಸಂಕಲ್ಪ ಮಾಡಬೇಕು ಮತ್ತು ನಮ್ಮ‌ ಸರಕಾರದ ಸಾಧನೆಗಳನ್ನು ತಿಳಿಸಿದಾಗ ಮಾತ್ರ ಜನರ ಆಶೀರ್ವಾದ ಪಡೆಯಲು ಸಾಧ್ಯ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಮಹಿಳಾ ಮೋರ್ಚಾದ ಶಿಲ್ಪಾ ತೊದಲಬಾಗಿ, ವಿಜಯಲಕ್ಷ್ಮೀ ಹುಕುಮನಾಳ, ಮೃಣಾಲಿನಿ ದೇಶಪಾಂಡೆ, ಸವಿತಾ ಕಾಂಬಳೆ, ರೂಪಾ ಕಾಂಬಳೆ, ಸುರೇಖಾ ರುದ್ರಗೌಡರ, ಜಯಶ್ರೀ ಕದಂ, ಆನಂದ ದೇಶಪಾಂಡೆ, ಪುರಸಭೆ ಸದಸ್ಯ ಕಲ್ಲೇಶ ಮಡ್ಡಿ, ದಿಲೀಪ ಲೋಣಾರೆ, ದತ್ತಾ ವಾಸ್ಟರ, ತಿಪ್ಪಣ್ಣ ಭಜಂತ್ರಿ, ಮಲ್ಲು ಹುದ್ದಾರ ರಾಜು ಗುಡೋಡಗಿ, ಅಜಿತ ಪವಾರ, ಸಿದ್ದಲಿಂಗ ಮಡ್ಡಿ, ಸುಧೀರ ಮಡ್ಡಿ, ಸಿದ್ದಾರ್ಥ ಮಡ್ಡಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!