ಬೆಳಗಾವಿ
ಹಾರೂಗೇರಿ ಪುರಸಭೆಯ ಮುಖ್ಯಧಿಕಾರಿ ಹಣ್ಣಿಕೇರಿ ಅವರಿಂದ ಧ್ವಜಾರೋಹಣ
ರಾಯಬಾಗ :ತಾಲೂಕಿನ ಹಾರೂಗೇರಿ ಪುರಸಭೆಯ ಕಾರ್ಯಾಲಯದ ಆವರಣದಲ್ಲಿ ಹಾರೂಗೇರಿ ಪಟ್ಟಣದಲ್ಲಿ 74ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಂವಿಧಾನ ಶಿಲ್ಪಿ. ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು
ನಂತರ ಹಾರೂಗೇರಿ ಪಟ್ಟಣದ ಹಲವಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಶಿಕ್ಷಕರು ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಬ್ರಿಟಿಷರ ವಿರುದ್ಧ ಸಮರ ಸಾರಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರಾಣಿ ಚೆನ್ನಮ್ಮ ನಾಟಕವನ್ನು ಪುರಸಭೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸಭೆ ಮುಖ್ಯಧಿಕಾರಿ ಹಾಗೂ ಸದಸ್ಯರ ಸಮ್ಮುಖದಲ್ಲಿ ಬಹುಮಾನ ವಿತರಿಸಲಾಯಿತು
ಹಾರೂಗೇರಿ ಪೊಲೀಸ್ ಠಾಣೆ ವತಿಯಿಂದ ಪಿಎಸ್ಐ ರೇಣುಕಾ ಜಕನೂರ್ ಅವರು ದ್ವಜಾರೋಹಣ ಮಾಡಿದರು
ಹಾರೂಗೇರಿ ಪಟ್ಟಣದಲ್ಲಿ ವಿವಿದೆಡೆ ದ್ವಜಾರೋಹಣ :ವಿವಿಧ ಶಿಕ್ಷಣ ಸಂಸ್ಥೆ. ಬ್ಯಾಂಕ್, ಹೆಸ್ಕಾಂ. ಹಾರೂಗೇರಿ ಸರ್ಕಾರಿ ಆಸ್ಪತ್ರೆ, ಗ್ರಾಮ ಲೆಕ್ಕಾಧಿಕಾರಿ ಕಚೇರಿ, ಪಶು ಆಸ್ಪತ್ರೆ,ಇನ್ನು ವಿವಿಧಕಡೆ 74ನೇ ಗಣರಾಜ್ಯೋತ್ಸವ ಆಚರಿಸಲಾಯಿತು
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಬಸವರಾಜ್ ಅರಕೇರಿ ಕಾಂತು ಬಾಡಿಗಿ ವಸಂತ್ ಲಾಳಿ.ಮಲ್ಲಪ್ಪ ಐನಪುರ್. ವಿನಾಯಕ್ ಮೂಡಸಿ ಆನಂದ್ ಪಾಟೀಲ್ ಸಂತೋಷ್ ಸಿಂಗಾಡಿ ಮಾಳು ಹಾಡಕರ ಊರಿನ ಗಣರಾಜ್ಯ ದುಂಡಪ್ಪ ಹಾಡಕರ ರಾಮಣ್ಣ ಕುರಿ, ಸಿದ್ದಪ್ಪ ಹಾಡಕಾರ ಎಸ್ ಎಲ್ ಕಟ್ಟಿ ಪುರಸಭೆ,ಪೊಲೀಸ್ ಇಲಾಖೆ ಸಿಬ್ಬಂದಿಗಳು ಸಾರ್ವಜನಿಕರು ಈ ಕಾರ್ಯಕ್ರಮ ಉಪಸ್ಥಿತರಿದ್ದರು