ಕರ್ತಾರನ ಕಮ್ಮಟ – ಶ್ರೀ ಸಿದ್ದೇಶ್ವರ ಮಠ: ಶಿವಾನಂದ ಮಹಾಸ್ವಾಮೀಜಿ;
ಬಸವ ಪುರಾಣ, ಮಹಾಮಂಟಪ ಪೂಜೆ, ಗುರುವಂದನಾ ಸಮಾರಂಭ, ಜಾತ್ರಾ ಮಹೋತ್ಸವ, ಕೃಷಿಕ -ಸೈನಿಕ ಸಮಾರಂಭ, ಹಾಗೂ ಶರಣ ಸಾಹಿತ್ಯ ಸಮ್ಮೇಳನ;
ವರದಿ : ಶ್ರೀ ಪ್ರಕಾಶ ಚ ಕಂಬಾರ
ಮುಗಳಖೋಡ: ರಾಯಬಾಗ ತಾಲೂಕಿನ ಸುಕ್ಷೇತ್ರ ಹಂದಿಗುಂದ ಗ್ರಾಮದ ಆರಾಧ್ಯವರಾದ ಶ್ರೀ ಸಿದ್ದೇಶ್ವರ ಮಹಾ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದಿನಾಂಕ 29, 30, 31 ಹಾಗೂ ಫೆಬ್ರುವರಿ 1ಹಾಗೂ 2ರಂದು ಐದು ದಿನಗಳ ಪರ್ಯಂತ ಸಡಗರ ಸಂಭ್ರಮದಿಂದ ಜರಗಲಿದೆ.
ಪೂಜ್ಯರ ಕಾಯಕಲ್ಪದಿಂದಾಗಿ ಸುಸಜ್ಜಿತ ದಾಸೋಹ ಭವನ ಹಾಗೂ ಸಾಂಸ್ಕೃತಿಕ ಭವನಗಳು ತಲೆಯೆತ್ತಿ ನಿಂತಿವೆ. ಈ ಎಲ್ಲಾ ಕಟ್ಟಡಗಳ ಲೋಕಾರ್ಪಣೆಯೂ ಹಾಗೂ ಪೂಜ್ಯ ಶಿವಾನಂದ ಮಹಾಸ್ವಾಮಿಗಳ ಗುರುವಂದನೆ ಸಮಾರಂಭವು ಇದೇ 2023 ಜನವರಿ 29 ರಿಂದ ಫೆಬ್ರುವರಿ 2ರ ವರೆಗೆ ಜರುಗಲಿವೆ.
ಪೂರ್ವಭಾವಿಯಾಗಿ ಬಸವ ಪುರಾಣ ಪ್ರವಚನ ಕಾರ್ಯಕ್ರಮವು ಒಂದು ತಿಂಗಳ ಪರಿಯಂತ ನಡೆಯುತ್ತಿದ್ದು ನೂರೊಂದು ಪೂಜ್ಯರಿಗೆ ಗೌರವ ಸಮರ್ಪಣೆ, ರೈತ ಸಮಾವೇಶ, ವಚನ ಸಮ್ಮೇಳನ, ರುದ್ರಾಕ್ಷ ದೀಕ್ಷಾ ಅಭಿಯಾನ, ಜನಜಾಗೃತಿ ಪತಸಂಚಲನ, ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಜರುಗಲಿವೆ. ನಾಡಿನ ಜಗದ್ಗುರುಗಳು, ಮಹಾಸ್ವಾಮಿಗಳು ರಾಜಕೀಯ ಧುರೀಣರು, ಕವಿ- ಕಲಾವಿದರು, ಅನುಭವಿಗಳು ಶಾಸ್ತ್ರ ಕೋವಿದರು ಮತ್ತು ಗಣ್ಯಮಾನ್ಯರು ಪಾಲ್ಗೊಳ್ಳುವರು.
ರವಿವಾರ ದಿನಾಂಕ 29 ರಂದು ಮುಂಜಾನೆ 10.30 ಕ್ಕೆ ಶ್ರೀ ಹಾನಗಲ್ಲ ಕುಮಾರೇಶ್ವರ ಸಾಂಸ್ಕೃತಿಕ ಭವನದ ಲೋಕಾರ್ಪಣೆ:-
ಡಂಬಳ – ಗದಗ ಎಡಿಯೂರ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಶ್ರೀ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಆನಂದಪುರಂ – ಶಿವಮೊಗ್ಗ ಮುರುಘಾಮಠದ ಜಗದ್ಗುರು ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಕುಡಚಿ ಮತಕ್ಷೇತ್ರದ ಶಾಸಕ ಪಿ.ರಾಜೀವ್ ಸಭೆಯ ಅಧ್ಯಕ್ಷತೆವಹಿಸುವರು.
ಶ್ರೀ ಹಾನಗಲ್ಲ ಕುಮಾರೇಶ್ವರ ಸಾಂಸ್ಕೃತಿಕ ಭವನದ ಸ್ಪೂರ್ತಿಗಳು ಸಂಸದ ಬಿ.ವೈ.ರಾಘವೇಂದ್ರ, ಭಾರತೀಯ ಜನತಾ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷರು ಬಿ.ವೈ.ವಿಜಯೇಂದ್ರ ರವರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಬೆಳಗಾವಿ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಪ್ರಭಾಕರ ಕೋರೆ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮುಜರಾಯಿ ಇಲಾಖೆ ಮತ್ತು ವಕ್ಫ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ, ಆದಿ ಜಾಂಬವ ಅಭಿವೃದ್ಧಿಗೆ ನಿಗಮದ ಅಧ್ಯಕ್ಷರು, ಶಾಸಕ ದುರ್ಯೋಧನ ಐಹೊಳೆ, ಶಾಸಕ ಸಿದ್ದು ಸವದಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮೋಹನ ಲಿಂಬಿಕಾಯಿ, ಹುಬ್ಬಳ್ಳಿ ಮಹಾನಗರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ರವಿವಾರ ದಿನಾಂಕ 29 ರಂದು ಸಂಜೆ 6 ಗಂಟೆಗೆ ಕೃಷಿಕ ಹಾಗೂ ಸೈನಿಕ ಸಮಾವೇಶ:-
ನಿಡಸೋಸಿ ಜಗದ್ಗುರು ಸಿದ್ಧ ಸಂಸ್ಥಾನ ಮಠದ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಪಾವನ ಸಾನಿಧ್ಯವಹಿಸುವರು, ಮುಗಳಖೋಡ – ಜಿಡಗಾ ಬ್ರಹನ್ಮಠದ ಪೀಠಾಧಿಪತಿ ಜಗದ್ಗುರು ಡಾಕ್ಟರ್ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು. ಶಿವಮೊಗ್ಗ ಜಿಲ್ಲೆಯ ಪ್ರಗತಿಪರ ರೈತರು ಕೆ.ಟಿ. ಗಂಗಾಧರ ಅಧ್ಯಕ್ಷತೆವಹಿಸುವರು, ಮಹಾರಾಷ್ಟ್ರ ರಾಜ್ಯದ ಸ್ವಾಭಿಮಾನಿ ಶೇತ್ಕರಿ ಸಂಘದ ಮುಖ್ಯಸ್ಥರು ರಾಜು ಶೆಟ್ಟಿ ಹಾಗೂ ಕಾರ್ಗಿಲ್ ವೀರ ಸನ್ಮಾನ್ಯ ರಂಗಪ್ಪ ಆಲೂರು ಕಾರ್ಯಕ್ರಮ ಉದ್ಘಾಟಿಸುವರು. ಕೃಷಿ ಚಿಂತಕರು ಶ್ರೀಮತಿ ಚುಕ್ಕಿ ನಂಜುಂಡಸ್ವಾಮಿ, ಹಸಿರು ಸೇನೆ ರಾಜ್ಯಧ್ಯಕ್ಷರು ಬಡಗಲಪುರ ನಾಗೇಂದ್ರ, ಮಾಜಿ ಸಚಿವ ಎ.ಬಿ.ಪಾಟೀಲ, ಮಾಜಿ ಸಚಿವರು, ಹಾಲಿ ವಿಧಾನ ಪರಿಷತ್ ಸದಸ್ಯರು ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಖ್ಯಾತ ವೈದ್ಯ ಡಾಕ್ಟರ್ ಎ.ಆರ್.ಬೆಳಗಲಿ, ನಿವೃತ್ತ ಪ್ರಾಚಾರ್ಯರು ಬಿ.ಎ.ಪೂಜಾರಿ, ರಾಜಶೇಖರ ಮೂಗಿ, ಮುರುಗಪ್ಪಣ್ಣ ಜಿಗಜಣಗಿ, ಬಿ.ಆರ್.ಆಜೂರೆ, ಈರನಗೌಡ ಪಾಟೀಲ, ರಾಜಣ್ಣ ಕೊರವಿ, ಮೂಡಲಗಿಯ ಮಾಹಿತಿ ಹಕ್ಕು ಹೋರಾಟಗಾರ ಭೀಮಸಿ ಗಡಾದ, ಸಾವಯವ ಕೃಷಿಕ ಸುಭಾಸ ಶಿರಬೂರ, ಶೇಗುಣಸಿಯ ಪ್ರಗತಿಪರ ರೈತರು ಕಲ್ಮೇಶ ಯಲಡಗಿ, ಮುಧೋಳ ಪಟ್ಟಣದ ನಗರ ಯೋಜನಾ ಸಮಿತಿ ಅಧ್ಯಕ್ಷರು ಪ್ರಕಾಶ ವಸ್ತ್ರದ ಇವರುಗಳಿಗೆ ಶಾಲು ಹೊದಿಸಿ, ಹೋಮಾಲೆ ಹಾಕಿ, ನೆನಪಿನ ಕಾಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಗುವುದು ಎಂದು ಶ್ರೀಮಠದ ಭಕ್ತರು ಪ್ರಕಟಣೆಲ್ಲಿ ತಿಳಿಸಿದ್ದಾರೆ.