ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ

Share the Post Now

ಬೆಳಗಾವಿ, ಸಂದೇಶ

ವರದಿ :ಸಚಿನ್ ಕಾಂಬ್ಳೆ


ಕಾಗವಾಡ: ಶಾಸಕ ಶ್ರೀಮಂತ ಪಾಟೀಲ ಜನ್ಮ ದಿನದ ನಿಮಿತ್ತ ಕೆಂಪವಾಡ ಅಥಣಿ ಶುಗರ್ಸ್ ಆವರಣದಲ್ಲಿ ಜ. 31 ಮತ್ತು ಫೆ. 1ರಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಉಚಿತ ಆರೋಗ್ಯ ತಪಾಸಣೆ, ಶಸ್ತ್ರಚಿಕಿತ್ಸಾಶಿಬಿರ ಹಾಗೂ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಶ್ರೀಮಂತ ಪಾಟೀಲ ಫೌಂಡೇಶನ್ ಹಾಗೂ ಮಿರಜದ ಸೇವಾಸದನ ಲೈಪ್ ಲೈನ್ ಸೆಷಾಲಿಟಿ ಆಸ್ಪತ್ರೆ ಮತ್ತು ಸಾಂಗಲಿಯ ಡಾ। ಮೆಹತಾ ಆಸ್ಪತ್ರೆ. ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.

ಶಿಬಿರದಲ್ಲಿ ಉಚಿತ ನೇತ್ರ ತಪಾಸಣೆ, ಬೈಪಾಸ್ ಸರ್ಜರಿ, ಹೃದಯ ಸಂಬಂಧಿತ ಕಾಯಿಲೆ ತಪಾಸಣೆ, ಕಿಡ್ನಿ ಸ್ಟೋನ್, ಕೀಲುನೋವು, ಕಿಡ್ನಿ ಕ್ಯಾನ್ಸರ್ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಮೆದುಳು, ಹೊಟ್ಟೆ, ಕಿವಿ, ಮೂಗು, ಗಂಟಲು ಕಾಯಿಲೆಗಳ ಸಂಬಂಧಿತ ಮತ್ತು ಸಿಟಿ ಸ್ಕಾನ್ ರಿಯಾಯಿತಿ ದರದಲ್ಲಿ ಮಾಡಲಾಗುವುದು.

ಸಾಮಾನ್ಯ ಕಾಯಿಲೆಗಳ ಎಚ್.ಬಿ.,ಎಂಜೋಗ್ರಾಫಿ, ಸೋನಗ್ರಾಫಿ, ಎಕ್ಸರೆ, ಬಿಪಿ, ಇಸಿಒ, ಇಸಿಜಿ, ಕ್ಯಾಲ್ಸಿಯಂ ಶೂಗರ್ ಪ್ರೊಟ್ಸೆಡ್, ಕ್ಯಾನ್ಸರ್, ನೆಗಡಿ ಕೆಮ್ಮು ಜ್ವರ ಎಸಿಡಿಟಿ ಪಾರ್ಶ್ವವಾಯು ಕಾಯಿಲೆಗಳನ್ನು ಉಚಿತ ತಪಾಸಣ ಮಾಡಲಾಗುವುದು, ಪ್ರತ್ಯೇಕ ತಪಾಸಣಾ ಕೇಂದ್ರದಲ್ಲಿ ಮಹೀಲೆಯರ ತಪಾಸಣೆಯನ್ನು ಮಹಿಳಾ ತಜ್ಞ ವೈದ್ಯರಿಂದ ಮಾಡಲಾಗುವುದು

ರಕ್ತದಾನ ಶಿಬಿರ ಕೂಡಾ ಏರ್ಪಡಿಸಲಾಗುತ್ತಿದೆ ಶಿಬಿರದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಆಧಾರ್ ಕಾರ್ಡ್, ರೇಶನ್ ಕಾರ್ಡ್ ತರಬೇಕು.

ಹೆಚ್ಚಿನ ಮಾಹಿತಿಗಾಗಿ ದೂ: 08338-350100, ತಮ್ಮಣ್ಣ ಚೌಗಲೆ : 9886945037, ಕೃಷ್ಣಾ ಪಾಟೀಲ್ : 7624992447, ಸುರೇಶ ಸೂರ್ಯವಂತಿ: 9729516435 ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

error: Content is protected !!