ಬೆಳಗಾವಿ, ಸಂದೇಶ
ವರದಿ: ಸಂಗಮೇಶ ಹಿರೇಮಠ.
ಮುಗಳಖೋಡ: ಡಿಸೆಂಬರ್ ೨೬ ರಂದು ನಡೆದ ಅಖಿಲ ಕರ್ನಾಟಕ ಮಾಳಿ ಮಾಲಗಾರ ರಾಜ್ಯ ಮಟ್ಟದ ದ್ವಿತೀಯ ಸಮಾವೇಶದ ಕಾರ್ಯಕ್ರಮ ಸರಳ ರೀತಿಯಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿಸಿ ಕೊಟ್ಟು ಯಶಸ್ವಿಯಾಗಲು ಸಹಕರಿಸಿದ ರಾಜ್ಯದ ಎಲ್ಲ ಮಾಳಿ-ಮಾಲಗಾರ ಸಮಾಜದ ಸದಸ್ಯರಿಗೆ ಹಾಗೂ ಕಾರ್ಯಕ್ರಮ ಸರಳ ರೀತಿಯಲ್ಲಿ ನಡೆಯಲು ಕಾರಣಿಕರ್ತರಾದ ಪಟ್ಟಣದ ಮುಖಂಡರು, ಕಾರ್ಯಕರ್ತರಿಗೆ ಅಖಿಲ ಕರ್ನಾಟಕ ಮಾಳಿ ಮಾಲಗಾರ ಸಮಾಜ ನಿಯೋಗದ ಅಧ್ಯಕ್ಷರಾದ ಡಾ ಸಿ ಬಿ ಕುಲಿಗೋಡ ಅವರು ಅಭಿನಂದನೆ ಸಲ್ಲಿಸಿದರು.
ಅವರು ಪಟ್ಟಣದ ಚವಿವ ಸಂಘದ ಆವರಣದಲ್ಲಿ ಹಮ್ಮಿಕೊಂಡ ಮಾಳಿ-ಮಾಲಗಾರ ಸಮಾವೇಶದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿ ಅಷ್ಟೊಂದು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯಲು ಮುಖ್ಯವಾಗಿ ಕಾರಣಿಭೂತರಾದ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಾಲಚಂದ್ರ ಜಾರಕಿಹೋಳಿ, ಲಕ್ಷ್ಮಣ್ ಸವದಿ, ಶ್ರೀಮಂತ ಪಾಟೀಲ, ಸಿದ್ದು ಸವದಿ, ಪಿ ರಾಜೀವ್ ಅವರನ್ನು ಮೊದಲು ಮಾಡಿಕೊಂಡು ಶಾಸಕರು, ಸಚಿವರು ಸೇರಿದಂತೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯಕರಾದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿ, ನಡೆದ ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ತಿಳಿಸಿ ಮುಂದಿನ ಆಗುಹೋಗುಗಳ ಕುರಿತು ಚರ್ಚಿಸಿದರು.
ನಂತರ ಮಾಳಿ-ಮಾಲಗಾರ ಸಮಾಜದ ರಾಜ್ಯಾಧ್ಯಕ್ಷ ಕಾಡು ಮಾಳಿ ಸಭೆಯನ್ನು ಕುರಿತು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಗಿರೀಶ್ ಬೂಟಾಳಿ, ಶಿವಾನಂದ ದಿವಾನಮಳ್ಳ್ ಸೇರಿದಂತೆ ಹಲವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉಪನ್ಯಾಸಕರಾದ ಆರ್.ಟಿ.ಮಾಳಿ ನಿರೂಪಿಸಿ, ಮಹಾಂತೇಶ ಕುಲಿಗೋಡ ಸ್ವಂವಾಗತಿಸಿ ಗೋಪಾಲ ಕುಲಿಗೋಡ ವಂದಿಸಿದರು.
ಈ ಸಂದರ್ಭದಲ್ಲಿ ಸದಾಶಿವ ಹೊಸಮನಿ, ಶಂಕರ ಕಿವಟೆ, ರವಿ ಮಾಳಿ, ಮಲ್ಲಿಕಾರ್ಜುನ ಬಾಳಿಕಾಯಿ, ಶಿವಪ್ಪ ಹಳ್ಳೂರ, ಶಿವಪುತ್ರ ಯಡವಣ್ಣವರ, ಸುಭಾಷ್ ಮಾಳಿ, ಸಂಜು ಅಥಣಿ, ಚೇತನ ಯಡವಣ್ಣವರ, ವಿಠ್ಠಲ ಯಡವಣ್ಣವರ, ಪರಪ್ಪ ಕುಲಿಗೋಡ, ಪರಪ್ಪ ಮುಗಳಖೋಡ, ಪರಪ್ಪ ಖೇತಗೌಡ, ಲಕ್ಷ್ಮಣ ಗೋಕಾಕ, ಬಸಪ್ಪ ಯಡವನ್ನವರ, ಗೋಪಾಲ ಕುಲಿಗೋಡ, ರಪೀಕ್ ಡಾಂಗೆ ಸೇರಿದಂತೆ ಮಾಳಿ-ಮಾಲಗಾರ ಸಮಾಜದ ಎಲ್ಲ ಸದಸ್ಯರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.