ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಅಡುಗೆ ಸಿಬ್ಬಂದಿಗಳ ತರಬೇತಿ ಕಾರ್ಯಾಗಾರ

Share the Post Now

ವರದಿ :ಸುನಿಲ್ ಕಬ್ಬುರ್


ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಸ್ಥಳೀಯ ಜನತಾ ಶಿಕ್ಷಣ ಸಂಸ್ಥೆಯ ಪ್ರಗತಿ ಶಾಲಾ ಸಭಾಂಗಣದಲ್ಲಿ ಇಂದು ಅಡುಗೆ ಸಿಬ್ಬಂದಿಗಳ ತರಬೇತಿ ಕಾರ್ಯಾಗಾರದ ಉದ್ಘಾಟನೆ ಸಮಾರಂಭ ಜರುಗಿತು

ಪ್ರಾಸ್ತಾವಿಕವಾಗಿ ಮಾತನಾಡಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸುಭಾಷ ವಲ್ಯಾಪುರ, 1992 ರಲ್ಲಿ ಕ್ಷೀರ ಯೋಜನೆಯು ಬದಲಾಗಿ ಮಕ್ಕಳಿಗೆ ದಿನಕ್ಕೆ ಒಂದು ರೂ. ಕೊಡುವ ಯೋಜನೆ ಬದಲಾಗಿ, ಅಕ್ಕಿ, ಗೋದಿ ವಿತರಣೆ ಯೋಜನೆ ನಂತರ 1 ರಿಂದ 7 ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಊಟದ ಅಕ್ಷರ ದಾಸೋಹ ಎಂಬ ಯೋಜನೆ ಅನುಷ್ಠಾನಗೊಂಡಿತು. ನಂತರ 1 ರಿಂದ 10 ನೇ ತರಗತಿಯ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳ ಮೂಲಕ ಹಂಚುವ ಯೋಜನೆ ಇಲ್ಲಿಯವರೆಗೆ ಕಡಿಮೆ ಸಂಬಳದಲ್ಲಿ ದುಡಿಯುವ ಈ ಸಿಬ್ಬಂದಿಯ ಕಾರ್ಯ ಅತ್ಯಂತ ಯಶಸ್ವಿಯಾಗಿದೆ.ಇದರೊಂದಿಗೆ ಅಡುಗೆ ಸಿಬ್ಬಂದಿಯವರ ಸಮಯ ಸದುಪಯೋಗವಾಬೇಕು.ಎಲ್ಲರೂ ಕೂಡ ಸಮಯಕ್ಕೆ ಬೆಲೆ ಕೊಡಿ. ನಿಮ್ಮ ಈ ಕಾಯಕ ತುಂಬಾ ಒಳ್ಳೆಯ ಕಾಯಕವಾಗಿದೆ. ಮಾತೃಹೃದಯದ, ಪ್ರಾಮಾಣಿಕ ಕಾರ್ಯದಿಂದ ನಿಮಗೆ ಒಳಿತಾಗಲಿ ಎಂದು ಮಾರ್ಮಿಕವಾಗಿ ತಿಳಿಹೇಳಿದರು.ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ತಾಲೂಕಿನ ಒಟ್ಟು 25 ಜನ ತಾಯಂದಿರಲ್ಲಿ 15 ಜನರಿಗೆ ಇಲ್ಲಿ ಸತ್ಕಾರ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಶ್ರೀಕಾಂತ ರಾಯಮಾನೆ,ಆಹಾರ ನಿರೀಕ್ಷಕ ಸತೀಶ ಜಾಧವ,ಪ್ರಧಾನ ಗುರು ಟಿ ಬಿ ಸಾಜನೆ,ಶ್ರೀಮತಿ ಭಾರತಿ ಜೋಗನ್ನವರ, ಬಸವರಾಜ ಕಟ್ಟಿ, ರಮೇಶ ಬಿಸಗೊಂಡ, ಬಿಸ್ವಾಗಾರ, ಸಿ ಎಚ್ ಕೋಳಿ, ಚನ್ನವ್ವ ಗಡಕರ,ಆರ್ ಎಸ್ ದೇಸಾಯಿ ಹಾಗೂ ಅಂಗನವಾಡಿ ಕಾರ್ಯಕರ್ತರು ಮುಂತಾದವರಿದ್ದರು.

Leave a Comment

Your email address will not be published. Required fields are marked *

error: Content is protected !!