ಬೆಳಗಾವಿ, ಸಂದೇಶ
ವರದಿ :ಸಿದ್ದರೂಢ ಬಣ್ಣದ
ಇಂದು ಮತಕ್ಷೇತ್ರದ ಅಥಣಿ ತಾಲೂಕಿನ ರೆಡೇರಹಟ್ಟಿ ಗ್ರಾಮದಲ್ಲಿ ಸುಮಾರು 3 ಕೋಟಿ 36 ಲಕ್ಷ ರೂ. ವೆಚ್ಚದ ಕಾಮಗಾರಿಗಳ ಭೂಮಿ ಪೂಜೆಯನ್ನು ಅಥಣಿ ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಹೇಶ್ ಕುಮಠಳ್ಳಿ ಅವರು ನೆರೆವೇರಿಸಿದರು
ಕಾಮಗಾರಿಗಳು ಈ ಕೆಳಗಿಂತಿವೆ :
2 ಕೋಟಿ 1 ಲಕ್ಷ ರೂ. ವೆಚ್ಚದ ಜಲಜೀವನ ಮಿಷನ್ (ಜೆ ಜೆ ಎಂ)ಪ್ರತಿ ಮನೆಗಳಿಗೆ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ.
90 ಲಕ್ಷ ರೂ.ವೆಚ್ಚದ ರೆಡ್ಡರಹಟ್ಟಿ ಗ್ರಾಮದ ಮಡ್ಡಿ ಬಸವೇಶ್ವರ ದೇವಸ್ಥಾನ ರಸ್ತೆ ಕಾಮಗಾರಿ ಭೂಮಿ ಪೂಜೆ.
25 ಲಕ್ಷ ರೂ. ವೆಚ್ಚದ ರೆಡ್ಡರಹಟ್ಟಿ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದ ಸಮುದಾಯ ಭವನ ಕಾಮಗಾರಿ ಭೂಮಿ ಪೂಜೆ.
20 ಲಕ್ಷ ರೂ. ವೆಚ್ಚದ ರೆಡ್ಡರಹಟ್ಟಿ ಗ್ರಾಮದ ಬಾಬು ಜಗಜೀವನ್ ರಾಮ್ ಸಮುದಾಯ ಭವನ ಕಾಮಗಾರಿ ಭೂಮಿ ಪೂಜೆ
5 ಲಕ್ಷ ರೂ. ವೆಚ್ಚದ ರೆಡೇರಹಟ್ಟಿ ಗ್ರಾಮದ ಶ್ರೀ ವಿಠಲ ರುಕ್ಕಿಣಿ ದೇವಸ್ಥಾನದ ಸಮುದಾಯ ಭವನ ಕಾಮಗಾರಿ ಭೂಮಿ ಪೂಜೆ
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರು, ಪಕ್ಷದ ಕಾರ್ಯಕರ್ತರು, ಯುವಕರು, ಮಾಧ್ಯಮ ಮಿತ್ರರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.