ಇ,
ಆಯುಕ್ತರು
ಚುನಾವಣಾ ಆಯೋಗ
ಬೆಂಗಳೂರು,ಕರ್ನಾಟಕ
ಮಾನ್ಯರೆ,
ವಿಷಯ: ಚುನಾವಣಾ ನೀತಿಸಂಹಿತೆಯನ್ನು ಸಂವಿಧಾನ ಕರ್ತೃ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಏಪ್ರಿಲ್ 14 ರ ನಂತರ ಘೋಷಿಸಲು ಮತ್ತು ಅಂಬೇಡ್ಕರ್ ಜಯಂತಿ ಆಚರಣೆಗೆ ಯಾವುದೇ ನಿರ್ಬಂಧ ಹೇರದಂತೆ ಕೋರಿ
ಗೌರವಾನ್ವಿತರೇ, 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿ ಘೋಷಣಾ ದಿನಾಂಕದ ಬಗ್ಗೆ ನೆನ್ನೆ ಕೆಲವು ಟಿವಿ ಮಾಧ್ಯಮ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿದ್ದು ನೀತಿ ಸಂಹಿತೆ ಜಾರಿಯು ಏಪ್ರಿಲ್ 10 ರಿಂದ ಆರಂಭವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ ಎಂಬಂತೆ ಬಿಂಬಿತವಾಗುತ್ತಿರುವುದು ಅನೇಕ ಅನುಮಾನ ಅಸಮಾಧಾನ ಆತಂಕ ಗೊಂದಲಗಳಿಗೆ ಕಾರಣವಾಗಿದೆ. ದಯಮಾಡಿ ಇದು ನಿಜವೇ ಆಗಿದ್ದಲ್ಲಿ ಏಪ್ರಿಲ್ 14 ಭಾರತ ಸಂವಿಧಾನ ಶಿಲ್ಪಿಯ ಜಯಂತಿಯನ್ನು ಸರ್ವಜನರು ಜಗತ್ತಿನಾದ್ಯಂತ ದೇಶದಾದ್ಯಂತ ರಾಜ್ಯಾದ್ಯಂತ ಸಂಭ್ರಮದಿಂದ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸುವುದರಿಂದ ನೀತಿಸಂಹಿತೆ ಜಾರಿಯಿಂದ ಚುನಾವಣಾ ನೀತಿ ಸಂಹಿತೆಯನ್ನು ಏಪ್ರಿಲ್ 20 ರ ನಂತರ ಘೋಷಿಸಬೇಕೆಂದು ಮತ್ತು ಚುನಾವಣಾ ನೀತಿ ಸಂಹಿತೆಯಿಂದ ಅಂಬೇಡ್ಕರ್ ಜಯಂತಿ ಆಚರಣೆಗೆ ಯಾವುದೇ ನಿರ್ಬಂಧ ಅನ್ವಯವಾಗದು ಎಂದು ಘೋಷಿಸಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರರಿಗೆ ಗೌರವ ಸಲ್ಲಿಸಬೇಕು ಹಾಗು ಅವರ ಜಯಂತಿಯನ್ನು ಆಚರಣೆ ಮಾಡುವ ಜನರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ
ನಮ್ಮ ಮನವಿಯನ್ನು ಪರಿಗಣಿಸಿ ಆದೇಶ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ
ಕರ್ನಾಟಕ ಎಲ್ಲ ದಲಿತಪರ ಸಂಘಟನೆ, ರಾಜ್ಯದ ಹೋರಾಟ ಸಮಿತಿ, ಕರ್ನಾಟಕ ಚಿಂತನೆಪರ ಸಂಘಟನೆಗಳು
ತಮ್ಮ ಸಂಘಟನೆಯ ಲೆಟರ್ ಹೆಡ್ ಗಳ ಮೇಲೆ ಮುದ್ರಿಸಿ ಸಹಿ ಮಾಡಿ ಚುನಾವಣಾ ಆಯೋಗ ಕಛೇರಿಗೆ ಕಳುಹಿಸಬೇಕೆಂದು ಕೇಳಿಕೊಂಡಿದ್ದಾರೆ
ಜೈಭೀಮ್