ಬೆಳಗಾವಿ
ಹಾರೂಗೇರಿ* : ಸ್ಥಳೀಯ ಶ್ರೀ ಪ್ರತಿಭಾ ಶಿಕ್ಷಣ ಸಂಸ್ಥೆಯ ಹಾಡಕಾರ ತೋಟದ ಶ್ರೀ ಪ್ರತಿಭಾ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ 27 ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಏಳನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಯುವ ಧುರಿಣ ಮಹೇಂದ್ರ ತಮ್ಮಣ್ಣವರ,ಇಂದಿನ ದಿನಮಾನದಲ್ಲಿ ತಿರುಚಿ ಬರೆಯುತ್ತಿರುವ ಇತಿಹಾಸವನ್ನು ಅಲ್ಲಗಳೆದು ನಮ್ಮ ದೇಶದ ಸುಭದ್ರತೆ ಹಾಗೂ ಸಮಾನತೆಯನ್ನು ಕಾಪಾಡುವಲ್ಲಿ ಯುವಜನಾಂಗದ ಪಾತ್ರ ಬಹಳಷ್ಟು ಪ್ರಮುಖವಾಗಿದೆಯಲ್ಲದೆ ದೇಶದ ಆಸ್ತಿ ಯುವಶಕ್ತಿ ದೇಶದ ದೌರ್ಬಲ್ಯ ಮಾರ್ಗದರ್ಶನ ಇಲ್ಲದಿರುವುದು ಹಾಗಾಗಿ ಉತ್ತಮ ಮಾರ್ಗದರ್ಶನ ಹೊಂದಿರುವ ನಿಜವಾದ ಯುವಕರೇ ಉತ್ತಮ ದೇಶದ ನಿರ್ಮಾತೃಗಳು ಎಂದು ಅಭಿಮತ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಹಾಂತೇಶ್ ಮುಗಳಖೋಡ ಮಾತನಾಡಿ, ಉತ್ತಮ, ಸುಸಂಸ್ಕೃತ ಸಮಾಜ ಕಟ್ಟುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವವಾಗಿದೆಯಲ್ಲದೆ ಇಲ್ಲಿನ ಶಿಕ್ಷಣ ಪದ್ದತಿಯನ್ನು ನೋಡಿದಾಗ ಮೊದಲಿದ್ದ ಗುರುಕುಲ ಪದ್ಧತಿಯ ಶಿಕ್ಷಣ ನೆನಪಾಗುತ್ತದೆ ಎಂದರು. ಪ್ರಾಧ್ಯಾಪಕ ಟಿ ಎಸ್ ವಂಟಗೂಡಿ ಮಾತನಾಡಿ, ಹಿರಿಯರೊಬ್ಬರು ದಾರಿ ತಪ್ಪಿದರೆ ಇಡೀ ಕುಟುಂಬ ದಾರಿ ತಪ್ಪುತ್ತದೆ ಹಾಗಾಗಿ ಹಿರಿಯರು ತಮ್ಮತನ ಕಾಯ್ದುಕೊಂಡು ಇಂದಿನ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದೇಯಾದರೆ ಸಾಧಿಸುವ ಛಲ ಮಕ್ಕಳಿಗಿರುತ್ತೆ ಭೂಪಟದಲ್ಲಿ ಅವರ ಹೆಸರಿರುತ್ತೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕರೆಪ್ಪ ಸಿ. ಹಾಡಕಾರ ಮತ್ತು ಹಾಡಕಾರ ಬಂಧುಗಳು, ಜೆ ಬಿ ನಾಯಕ, ಪುರಸಭೆ ಸದಸ್ಯರಾದ ಮಾಳು ಹಾಡಕಾರ,ಬಾಬುರಾವ ನಾಡೋಣಿ, ಪ್ರಮುಖರಾದ ವರ್ಧಮಾನ ಬದ್ನಿಕಾಯಿ,ವರ್ಧಮಾನ ಶಿರಹಟ್ಟಿ, ಎಮ್ ಜಿ ಹಾಡಕಾರ, ಹಣಮಂತ ಹಳಿಂಗಳಿ, ಎಮ್ ಎಚ್ ಹಳಿಂಗಳಿ, ಅನಿಲ್ ಹಾಡಕಾರ ಮುಂತಾದವರು ಉಪಸ್ಥಿತರಿದ್ದರು.ಬಿ ಬಿ ಹುಲಿಕಟ್ಟಿ ನಿರೂಪಿಸಿದರು, ಎಮ್ ಎಚ್ ಹಳಿಂಗಳಿ ಸ್ವಾಗತಿಸಿದರು, ಜೆ ಬಿ ನಾಯಕ ಮಾಲಾರ್ಪಣೆ ನೆರವೇರಿಸಿದರು,ನೀತಾ ಮಾಳಿ ವರದಿ ವಾಚಿಸಿದರು.ಐಶ್ವರ್ಯ ಮಾಳಿ ವಂದಿಸಿದರು.
ವರದಿ : ಸುನೀಲ್ ಕಬ್ಬೂರ್