ಬೆಳಗಾವಿ
ಹಾರೂಗೇರಿ : ಸ್ಥಳೀಯ ಚಂದ್ರಮಶ್ರೀ ಟ್ರಸ್ಟ್ ವಿಶ್ವಸ್ಥ ಸಂಸ್ಥೆಯ ಜ್ಞಾನಗಂಗೋತ್ರಿ ಪ್ರಾಥಮಿಕ, ಪದ್ಮಾವತಿ ಪ್ರೌಢ ಶಾಲೆಗಳ ಸಹಯೋಗದಲ್ಲಿ 28ನೇ ಸ್ನೇಹ ಸಮ್ಮೇಳನ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ, ಚಿತ್ರಕಲೆ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮುದ್ದು ಮಕ್ಕಳಿಂದ ಮನರಂಜನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದ ವೈ. ಜಿ. ಬಿ/ಪಾಟೀಲರು
ಮಾತನಾಡಿ,
ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿರಬೇಕು. ಅಧ್ಯಾಯನ ಮಾಡುವ ಸಂದರ್ಭದಲ್ಲಿ ಅಧ್ಯಯನವನ್ನೇ ಮಾಡಬೇಕು. ವಿನಾಕಾರಣ ಹರಟೆ, ಸಮಯ ವ್ಯರ್ಥ, ಮೊಬೈಲ್ ಗೀಳಿನೊಂದಿಗೆ ಬದುಕನ್ನು ಗೋಳಾಗಿಸಿಕೊಳ್ಳಬಾರದಲ್ಲದೆ, ಗುರುಗಳಿಂದ ಕಲಿತ ಪುಸ್ತಕದ ಅಕ್ಷರಗಳೆಂಬ ಅನ್ನವನ್ನು ಮಸ್ತಕವೆಂವ ಹೊಟ್ಟೆಗೆ ಉಣಬಡಿಸಿ ಸ್ವಾಸ್ತ್ಯ ಸಮಾಜವನ್ನು ನಿರ್ಮಿಸಬೇಕು ಎಂದರು.ಈ ಸಂದರ್ಭದಲ್ಲಿ ಸತ್ಕಾರ ಮೂರ್ತಿಗಳಾಗಿ ಆಗಮಿಸಿದ್ದ ಆಶೋಕ ಅಸ್ಕಿ,ಪ್ರದ್ಯುಮ್ನಕುಮಾರ ಬದ್ನಿಕಾಯಿ, ವಿವೇಕ ನಾರಗೊಂಡ ಮತ್ತು ಡಾ. ಭರತೇಶ ಚೌಗಲಾ ಆಗಮಿಸಿ ಸತ್ಕಾರ ಸ್ವೀಕರಿಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಎಸ್ ಎ ದಟವಾಡ ವಹಿಸಿದ್ದರು.ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರಮಥ ದಟವಾಡ, ಮುಖ್ಯ್ಯೊಪಾಧ್ಯಯ ಆರ್. ಎಸ್.ಜಾಧವ, ಗಣ್ಯರಾದ ಬಾಬುರಾವ ಹಳ್ಳೂರ, ಆಯ್.ಎ.ಜಮಾದಾರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಸುನೀಲ್ ಕಬ್ಬೂರ