ಬೆಳಗಾವಿ
ವರದಿ :ಸಚಿನ ಕಾಂಬ್ಳೆ
ಕಾಗವಾಡ:ತಮ್ಮನ್ನು ತಾವು ಈ ದೇಶದ ಚೌಕಿದಾರ್ ಅಂತ ಕರೆಯುವ ಮಾನ್ಯ ಪ್ರಧಾನ ಮಂತ್ರಿಗಳು ಅವರ ಗೆಳೆಯ ಅದಾನಿ ಗ್ರೂಪ್ ಮೇಲೆ ಬಂದಿರುವ ಹಣಕಾಸು ಹಗರಣ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ? ದೇಶದ ಜನ ನಂಬಿ lic ಅಲ್ಲಿ ಹಾಗೂ ದೇಶದ ಬ್ಯಾಂಕ್ ಅಲ್ಲಿ ಹೂಡಿರುವ ಹಣ ಮುಳುಗಿ ಹೋಗ್ತಿದ್ರು ಯಾಕೆ ತನಿಖೆ ಮಾಡ್ತಿಲ್ಲ? ಈಗಾಗಲೇ ವಿಜಯ್ ಮಲ್ಯ ದೇಶ ಬಿಟ್ಟು ಹೋಗಿದ್ದಾರೆ.. ಅದಾನಿ ಅವರು ಹೋಗ್ಲಿ ಅಂತ ಸುಮ್ನೆ ಇದ್ದಾರೆ ಅಂತ ಅನ್ನಿಸ್ತಿದೆ.. ಅದಾನಿ ಅವರೆ ಮುಳುಗಿ ಹೋಗುತ್ತಿದ್ದಾರೆ ಅವರಿಗೆ ದೇಶದ ವಿಮಾನ ನಿಲ್ದಾಣ ಬಂದರುಗಳನ್ನು ಖಾಸಗೀಕರಣ ನೆಪದಲ್ಲಿ ನೀಡಿದ್ದಾರೆ .
ಅವರು ಹೇಗೆ ಅಭಿವೃದ್ದಿ ಮಾಡ್ತಾರೆ ಅಂತ ದೇಶದ ಜನಕ್ಕೇ ಉತ್ತರಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಕೆಪಿಸಿಸಿ ಕಾರ್ಯಧ್ಯಕ್ಷರಾದ ಸತೀಶ್ ಜಾರಕಿಹೊಳಿ ಹಾಗೂ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರು ಲಕ್ಷಣರಾವ್ ಚಿಂಗಳೆ ನೇತೃತ್ವದಲ್ಲಿ ಚಿಕ್ಕೋಡಿ ಜಿಲ್ಲೆಯಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ಯುವ ಕಾಂಗ್ರೆಸ್ ವಕ್ತಾರರು,ಜವಾಹಾರ್ ಬಾಲ ಮಂಚ್ ಚಿಕ್ಕೋಡಿ ಜಿಲ್ಲಾ ಮುಖ್ಯ ಸಂಚಾಲಕರಾದ ರಾಹುಲ್ ಮಾಚಕನೂರ ಹೇಳಿದ್ದಾರೆ.