ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಜಂಬಗಿ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀಮಂತ (ತಾತ್ಯಾ) ಪಾಟೀಲ ಅವರು ಉದ್ಘಾಟನೆ ನೆರವೇರಿಸಿ, ಸರಸ್ವತಿ ಮಾತೆಗೆ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಶಾಸಕರು ಕಾಗವಾಡ ಮತಕ್ಷೇತ್ರದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ 80 ಅಂಗನವಾಡಿಗಳನ್ನು ಮಂಜೂರು ಗೊಳಿಸುವುದರ ಮೂಲಕ ಕ್ಷೇತ್ರದಲ್ಲಿ ಶಿಕ್ಷಣದ ಮೊದಲ ಅಡಿಪಾಯವಾದ ಅಂಗನವಾಡಿಗೆ ಹೆಚ್ಚಿನ ಮಹತ್ವ ನೀಡಿದರಿಂದ ಸ್ಥಳೀಯ ಮುಖಂಡರು ಹಾಗೂ ಅಂಗನವಾಡಿಯ ಸಿಬ್ಬಂದಿಯವರು ಶಾಸಕರನ್ನು ಪ್ರೀತಿಯಿಂದ ಸತ್ಕರಿಸಿ ಗೌರವಿಸಿದರು.
ಇದೇ ಸಮಯದಲ್ಲಿ ಅಂಗನವಾಡಿ ಹಾಗೂ ಶಾಲಾ ಕೊಣೆಗಳನ್ನು ನಿರ್ಮಿಸಲು ಭೂದಾನ ಮಾಡಿದ ದಾನಿಗಳನ್ನು ಶಾಸಕರು ಸತ್ಕರಿಸಿ ಅಭಿನಂದಿಸಿದರು.
ಈ ಸಮಯದಲ್ಲಿ ಸ್ಥಳೀಯ ಮುಖಂಡರು, ಸಿಡಿಪಿಒ ಸಂಜಯಕುಮಾರ ಸದಲಗೆ,, ಶಿಕ್ಷಣ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು, ಕಾರ್ಯಕರ್ತರು ಹಾಗೂ ಅಂಗನವಾಡಿಯ ಸಿಬ್ಬಂದಿಯವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.