ಬೆಳಗಾವಿ
ವರದಿ: ಸುನೀಲ್ ಕಬ್ಬೂರ
ರಾಯಬಾಗ: ತಾಲೂಕಿನ ಹಾರೂಗೇರಿ ಪಟ್ಟಣದ ಡಾ.ಜಾಸ್ಮಿನ ಸಲೀಮ್ ಅಲಾಸೆ ಅವರು
ಅನೇಕ ವರ್ಷಗಳಿಂದ ಕಾಂಗ್ರೆಸ ಪಕ್ಷಕ್ಕಾಗಿ ಶ್ರಮಿಸಿದ್ದು, ಚಿಕ್ಕೋಡಿ ಜಿಲ್ಲಾ ಮಹಿಳಾ ಕಾಂಗ್ರೆಸ ಪಕ್ಷಕ್ಕೆ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಕಾರ್ಯ ನಿರ್ವಹಿಸಿದ ಸೇವೆಯನ್ನು ಪರಿಗಣಿಸಿ ತತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯದ ನಾಯಕರು ಹಾಗೂ ಕೆ.ಪಿ.ಸಿ.ಸಿ ಯ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿ ರವರ `ಶಿಪ್ಪಾರಸ್ಸಿನ ಮೇರೆಗೆ ಕುಡಚಿ ಅರ್ಬನ್ ಮಹಿಳಾ ಕಾಂಗ್ರೆಸ ಸಮೀತಿ ಅಧ್ಯಕ್ಷರನ್ನಾಗಿ
ನೇಮಕಾತಿ ಮಾಡಿ ಆದೇಶಿಸಲಾಗಿದೆ.
ರಾಜ್ಯದ ಕೆ.ಪಿ.ಎಮ್.ಸಿ.ಸಿ ಯ ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಡಾ.ಪುಷ್ಪಾ ಅಮರನಾಥರವರ ನೇತೃತ್ವ ಮತ್ತು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮೀತಿಯ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ ಚಿಂಗಳೆಯವರ ಮಾರ್ಗದರ್ಶನದಂತೆ
ಚಿಕ್ಕೋಡಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ
ಶ್ರೀಮತಿ ನಿರ್ಮಲಾ ಮಲಗೌಡ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ರಾಜ್ಯ ಕಿಸಾನ್ ಘಟಕದ ಉಪಾಧ್ಯಕ್ಷರಾದ ದಸ್ತಿಗೀರ ಕಾಗವಾಡೆ ಉಪಸ್ಥಿತರಿದ್ದರು