ವರದಿ ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ
ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡಪಟ್ಟಣದ ಶ್ರೀ ಚ ವಿ ವ ಸಂಘದ ರೈನಬೊ ಸೆಂಟ್ರಲ್ ಸ್ಕೂಲ್ ನ ವಾರ್ಷಿಕೋತ್ಸವವು ಶನಿವಾರ ದಿನಾಂಕ 11.02.2023 ರಂದು ಸಾಯಂಕಾಲ 5 ಗಂಟೆಗೆ ಜರುಗಲಿದ್ದು, ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಡಾ ಸಿ ಬಿ ಕುಲಿಗೋಡ ಅವರು ವಹಿಸಲಿದ್ದು, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂಜಯ ಕುಲಿಗೋಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತೇರದಾಳದ ಸ್ವಾಮಿ ವಿವೇಕಾನಂದ ಸಿ ಬಿ ಎಸ್ ಸಿ ಸ್ಕೂಲ್ ನ ಪ್ರಾಚಾರ್ಯರಾದ ಶ್ರೀ ಜ್ಯಾಯ್ ಸೆಬಾಸ್ಟಿಯನ್ ಹಾಗೂ ಓಂ ಗ್ಯಾಸ್ ಮಾಲಿಕರಾದ ಶ್ರೀ ಜಿ.ಎಸ್.ಪಾಟೀಲ ಅವರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯರಾದ ಎಸ್.ಬಿ.ಗಬ್ಬೂರ ಹಾಗೂ ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿರುವರು. ನಂತರ ಸಾಯಂಕಾಲ 07.00 ಗಂಟೆಗೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.





