ವರದಿ :ಸಚಿನ್ ಕಾಂಬ್ಳೆ
ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಅವರು ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಅವರು ೧.ಕೋಟಿ ರೂಪಾಯಿ ವೆಚ್ಚದ ದರೂರದಿಂದ ಸನಾದಿ 1.5 ಕಿ.ಮೀ. ರಸ್ತೆಯ ಕಾಮಗಾರಿ, ಹಾಗೂ ಅರೂಟಗಿ ತೋಟದಲ್ಲಿ 44 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಮತ್ತು 5 ಲಕ್ಷ ರೂಪಾಯಿ ವೆಚ್ಚದಲ್ಲಿ ದರ್ಗಾ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮುಖಂಡರಾದ ನಿಂಗಪ್ಪ ನಂದೇಶ್ವರ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸುರೇಶ ಮಾಯಣ್ಣವರ,ರಾಜು ಬಸಗೌಡರ,ಮಹದೇವ ಬಸಗೌಡರ,ಹಸನಸಾಬ ಅವಟಿ,ಫರೀದ ಅವಟಿ,ಮಹಮ್ಮದ ಸನದಿ,ಮಹಮ್ಮದ ಹನಗಂಡಿ,ಜಿಲ್ಲಾ ಪಂಚಾಯತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ವೀರಣ್ಣ ವಾಲಿ,ಗ್ರಾಮೀಣ ಕುಡಿಯುವ ನೀರು ಸರಬರಾಜು ಸಹಾಯಕ ಅಭಿಯಂತರರು
ರವಿ ಮೂರಗಾಲಿ,ಗುತ್ತಿಗೆದಾರರಾದ ಶಿವು ಮಾಲಗಾವಿ,ಅರ್ಜುನ ನಾಯಕ,ಸಲಿಂ ಮುಲ್ಲಾ ಸೇರಿದಂತೆ ಅನೇಕರು ಇದ್ದರು.