ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಕೊಳಗೇರಿ ನಿಗಮ ಅಧ್ಯಕ್ಷರು ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಅವರು ಸಪ್ತಸಾಗರದ ವಿದ್ಯಾನಗರದಲ್ಲಿ 130 ಲಕ್ಷ ರೂಪಾಯಿ ವೆಚ್ಚದ ಜಲಜೀವನ ಮಿಷನ್ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ಹಾಗೂ 14 ಲಕ್ಷ ರೂಪಾಯಿ ವೆಚ್ಚದ ವಿದ್ಯಾನಗರ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ,14 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾಕೊಠಡಿ ನಿರ್ಮಾಣದ ಕಾಮಗಾರಿ,ಸಪ್ತಸಾಗರ ಹಾಳದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ 14 ಲಕ್ಷ ರೂಪಾಯಿ ವೆಚ್ಚದ ಒಂದು ಶಾಲಾ ಕೊಠಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ,ಮುಖ್ತೋಪಾಧ್ಯಾಯರಾದ ಸಿ.ಕೆ.ಲಮಾಣಿ,ಸರೋಜನಿ ಹಿರೇಮ ಠಮುಖಂಡರಾದ ನಿಂಗಪ್ಪ ನಂದೇಶ್ವರ, ಅಶೋಕ ಐಗಳಿ,ಅಣ್ಣಪ್ಪ ಯಂಗ್ರಿ,ಮಲ್ಲಪ್ಪ ದರೂರ, ಪರಶುರಾಮ ಕೋಳೆಕರ,ಪರಮಾನಂದ ತೇಲಿ,ರಾಮು ಕುಂಬಾರ,ಚಂದು ಸಂಕ್ರಟ್ಟಿ,ಜಿನ್ನಪ್ಪ ಹಳ್ಳೂರ,ನಿಂಗಪ್ಪ ಹೊಸುರ,ನಿಂಗಪ್ಪಾ ಸಸಾಲಟ್ಟಿ,ಇಸ್ಮಾಯಿಲ್ ಕರಿಶಾಬು,ರಾವಸಾಬ ಐಗಳಿ,ಅಶೋಕ ಬಡಿಗೇರ,ಯಲ್ಲಪ್ಪ ಕಾಂಬ್ಳೆ, ರಮೇಶ ಕಾಂಬ್ಳೆ, ಚನ್ನಪ್ಪ ಕುಂಬಾರ,ರಫೀಕ ಅವಟಿ,ಶಂಕರ ಕೋಳೆಕರ,ರಮೇಶ ತರಾಳ,ಯಮನಪ್ಪ ಬಮ್ಮಣ್ಣವರ,ಸದಾಶಿವ ಘೋರ್ಪಡೆ,ಅಭಿಯಂತರರಾದ ಗೌಡಪ್ಪ ಘೂಳಪ್ಪನವರ,ಅಬ್ದುಲ್ ಮುಲ್ಲಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.