ಆರ್.ಸಿ.ಎಸ್ ವಾರ್ಷಿಕೋತ್ಸವ
ಮಕ್ಕಳಲ್ಲಿ ಉತ್ತಮ ಸಂಸ್ಕಾರ ಕಲಿಸಿ : ಶ್ರೀ ಸಂಜಯ ಕುಲಿಗೋಡ

Share the Post Now

ವರದಿ ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ


ಮುಗಳಖೋಡ: ಪಟ್ಟಣದ ಶ್ರೀ ಚ ವಿ ವ ಸಂಘದ ರೈನಬೊ ಸೆಂಟ್ರಲ್ ಸ್ಕೂಲ್ ನ ವಾರ್ಷಿಕೋತ್ಸವವು ಶನಿವಾರ ದಿನಾಂಕ 11.02.2023 ರಂದು ಸಾಯಂಕಾಲ 06 ಗಂಟೆಗೆ ಜರುಗಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಜಿ ಪಂ ಸದಸ್ಯರು ಹಾಗೂ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಡಾ ಸಿ ಬಿ
ಕುಲಿಗೋಡ ಅವರು ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂಜಯ ಕುಲಿಗೋಡರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತಾಯಿ ಮನಸ್ಸು ಮಾಡಿದರೆ ವಿಶ್ವವನ್ನು ಬದಲಿಸುವ ಸಾಮರ್ಥ್ಯ ಇದೆ. ತಂದೆ ತಾಯಂದಿರು ಮಕ್ಕಳಿಗೆ ನಮ್ಮ ಸಂಸ್ಕೃತಿ ಬಿಂಬಿಸುವ ಕಥೆಗಳಾದ ರಾಮಾಯಣ ಹಾಗೂ ಮಹಾಭಾರತವನ್ನು ತಿಳಿಸಿ ಮತ್ತು ನೈತಿಕ ಪಾಠಗಳನ್ನು ಕಲಿಸಿ ವೀರಯೋಧ ಕಥೆಗಳನ್ನು ಹೇಳಿ ಉತ್ತಮ ನಾಗರಿಕರನ್ನಾಗಿ ನಿರ್ಮಾಣ ಮಾಡಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ತೇರದಾಳದ ಸ್ವಾಮಿ ವಿವೇಕಾನಂದ ಸಿ ಬಿ ಎಸ್ ಸಿ ಸ್ಕೂಲ್ ನ ಪ್ರಾಚಾರ್ಯರಾದ ಶ್ರೀ ಜ್ಯಾಯ್ ಸೆಬಾಸ್ಟಿಯನ್ ಅವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಹಚ್ಚು ಹಸಿರು ವಾತಾವರಣದಲ್ಲಿ ಒಂದು ಒಳ್ಳೆಯ ಸುಂದರ ಶಾಲೆ ನಿರ್ಮಾಣವಾಗಿದ್ದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ತಂದೆ ತಾಯಂದಿರು ತಮ್ಮ ಮಕ್ಕಳ ಸಾಧನೆಯನ್ನು ನೋಡಿ ಹರ್ಷವಾಗಿದಿರಿ ಅದರೊಂದಿಗೆ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವ ಶಿಕ್ಷಣ ನೀಡಿ ಎಂದು ಹೇಳಿದರು.
ನಂತರದಲ್ಲಿ ಅತಿಥಿ ಮಹೋದಯರನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂಜಯ ಕುಲಿಗೋಡ ಅವರು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪ್ರಕಾಶ ಆದಪ್ಪಗೋಳ, ಓಂ ಗ್ಯಾಸ್ ಮಾಲಿಕರಾದ ಶ್ರೀ ಜಿ.ಎಸ್.ಪಾಟೀಲ, ರಮೇಶ ಯಡವನ್ನವರ, ಮಹಾವೀರ ಕುರಾಡೆ, ಪಿ.ಎಂ.ಕುಲಿಗೋಡ, ಎಸ್.ಎ.ಯಡವನ್ನವರ, ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರಾದ ಎಸ್.ಬಿ.ಗಬ್ಬೂರ ಹಾಗೂ ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ನಂತರದಲ್ಲಿ ಸಾಯಂಕಾಲ 07.30 ಗಂಟೆಗೆ ಶಾಲಾ ಮಕ್ಕಳಿಂದ ಮನರಂಜನಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Leave a Comment

Your email address will not be published. Required fields are marked *

error: Content is protected !!