ಬೆಳಗಾವಿ
ವರದಿ -ರವಿ ಬಿ ಕಾಂಬಳೆ
ಕುಡಚಿ ಶಾಸಕ ಪಿ ರಾಜೀವ್ ನಿನಗೆ ಈ ಭಾಗದ ಧೀಮಂತ ನಾಯಕ ವಿ ಎಲ್ ಪಾಟೀಲ್ ಅವರ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಗುಡುಗಿದರು.
ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುರಬರಗೋಡಿಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪಂಚರತ್ನ ರಥಯಾತ್ರೆ ಹಾಗೂ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಇವತ್ತು ಬೆಂಗಳೂರಿನ ಸುಪ್ರೀಂ ಕೋರ್ಟ್ ನಲ್ಲಿ ಕೂಗುತ್ತಿರುವುದು ಬಿಜೆಪಿ ನಾಯಕರ ಹೆಸರುಗಳು ಕೇಳಿ ಬರುತ್ತಿವೆ. ಅದಕ್ಕೆ ಕಾರಣ ಬಿಜೆಪಿ ನಾಯಕರುಗಳು ಮಾಡಿರುವ ಭ್ರಷ್ಟಾಚಾರದ ಪ್ರತಿರೂಪ ಎಂದು ತೀವ್ರತರಾಟಿಗೆ ತೆಗೆದುಕೊಂಡರು.
ಬಡಿಕೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು, ಈ ನಾಡಿನ ಸಮಸ್ತ ರೈತ ವರ್ಗ ಹಾಗೂ ಎಲ್ಲ ಹಿಂದುಳಿದ ಜನರ ಶ್ರೇಯೋಭಿವೃದ್ಧಿಗಾಗಿ ಪಂಚರತ್ನ ಯಾತ್ರೆ ಎನ್ನುವ ವಿಶಿಷ್ಟ ಭರವಸೆಯನ್ನು ಜೆಡಿಎಸ್ ಪಕ್ಷ ಜನತೆಯ ಮುಂದಿಡುತ್ತಿದೆ. ಪ್ರಚಲಿತ ದಿನಮಾನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯ ಹಾವಳಿಯನ್ನು ತಗ್ಗಿಸಲು, ಎಲ್ಲ ಜನ ಸಾಮಾನ್ಯರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಭರವಸೆಯಾಗಿದೆ. ದೀರ್ಘಾವಧಿಯ ಕಾಯಿಲೆಗಳಿಂದ ಬಡ ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಸಾಲದ ಹೊರೆಯನ್ನು ಹೊರುತ್ತಿದ್ದಾರೆ. ಈ ನಾಡಿನ ಅನ್ನದಾತನಾದ ರೈತನ ಸಾಲ ಮನ್ನಾ ಮಾಡುವುದು ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯ ಮುಖ್ಯ ಭರವಸೆಗಳಾಗಿವೆ ಎಂದರು.
ಕಾರ್ಯಕ್ರಮವನ್ನು ಸಸಿಗೆ ನೀರಿರುವ ಮೂಲಕ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪ್ ರಾವ್ ಪಾಟೀಲ, ಮಾಜಿ ಶಾಸಕ ಕಲ್ಲಪ್ಪ ಮಗನ್ನವರ, ಯುವ ರಾಜಕೀಯ ಧುರೀಣ ಶಿವರಾಜ ಪಾಟೀಲ್, ಮಾಜಿ ಶಾಸಕ ಶಹಜಾನ್ ಡೊಂಗರಗಾವ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ
ಬೆಳಗಾವಿ ಜಿಲ್ಲಾಧ್ಯಕ್ಷ ಶಂಕರ್ ಮೂಡಲಗಿ, ನಾಗಪ್ಪ ಕಂಠಿಕಾರ, ಎಂಎಲ್ಸಿ ರಮೇಶ, ಪ್ರಕಾಶ್ ಮುನ್ನಳ್ಳಿ, ದಾದಾ ಪಿರ್ ಶೇಕ್, ಬಸವರಾಜ ಮುಗಳಿಹಾಳ, ಅಂಬು ಮಾಮ, ರಮೇಶ್ ಗೌಡ, ಫಾಸ್ಟರ್ ಕೆಂಪಣ್ಣ ಅಂದಾನಿ ಉಪಸ್ಥಿತರಿದ್ದರು.