ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕೋತ್ಸವ

Share the Post Now

ರದಿ :ಸಚಿನ್ ಕಾಂಬ್ಳೆ


ಅಥಣಿಯ :ತಾಲೂಕಿನ ಸಪ್ತಸಾಗರದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ದಿನಾಂಕ: 11-02-2023ರಂದು ಎಸ್.ಎಸ್.ಎಲ್.ಸಿ . ವಿದ್ಯಾರ್ಥಿ/ನಿಯರ 25ನೇ ಬೀಳ್ಕೊಡುವ ಸಮಾರಂಭ ಹಾಗೂ ಸಂಸ್ಥೆಯ 28ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಪರಮ ಪೂಜ್ಯ ಶ್ರೀ ಸದ್ಗುರು ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಹಾಗೂ ಪೂಜ್ಯ ಶ್ರೀ ಮಹೇಶ ದೇವರು, ವಿರಕ್ತಮಠ ಸಂಕ. ವಹಿಸಿಕೊಂಡು ಇಂದಿನ ದಿನಮಾನಗಳಲ್ಲಿ ಮಕ್ಕಳ ಕಲಿಕಾ ವ್ಯವಸ್ಥೆಯು ನೈತಿಕತೆ ಹಾಗೂ ಆತ್ಮಸ್ಥೈರ್ಯದಿಂದ ಕೂಡಿರಬೇಕೆಂದು ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ ಸನ್ಮಾನ್ಯ ಶ್ರೀ. ಡಾ. ಅಪ್ಪಾಸಾಬ ಕಲಗೌಡ. ನಾಡಗೌಡ ಪಾಟೀಲರು, ಗ್ರಾಮೀಣ ಭಾಗದಲ್ಲಿ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯು ಅತ್ಯುತ್ತಮ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡಿದೆ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ/ನಿಯರು ದೇಶ- ವಿದೇಶಗಳಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಸಂಸ್ಥೆಯ ಸಾಧನೆ ದಶದಿಕ್ಕುಗಳಲ್ಲಿ ಹರಡಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ಶಾಸಕರು ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ. ಮಹೇಶ ಈರನಗೌಡ ಕುಮಠಳ್ಳಿಯವರು ಹಾಗೂ ಸನ್ಮಾನ್ಯ ಶ್ರೀ.ಚಿದಾನಂದ ಲಕ್ಷ್ಮಣ ಸವದಿಯವರು ಆಗಮಿಸಿ ಸಂಸ್ಥೆಗೆ ಬೇಕಾಗುವ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಸಿಬ್ಬಂದಿಗೆ ವೇತನಾನುದಾನವನ್ನು ಸರ್ಕಾರದಿಂದ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹಾಗೂ ಸಂಸ್ಥೆಯ ಪದಾಧಿಕಾರಿಗಳಂತೆ ಸಕ್ರೀಯವಾಗಿ ಭಾಗವಹಿಸಿ ಸಂಸ್ಥೆಯ ಅಭಿವೃದ್ಧಿಗೆ ಸದಾಕಾಲ ನಿಮ್ಮೊಂದಿಗೆ ಇರುವುದಾಗಿ ಭರವಸೆ ನೀಡಿದರು.

ಹಾರೂಗೇರಿಯ ನಿವೃತ್ತ ಉಪನ್ಯಾಸಕರಾದ ಸನ್ಮಾನ್ಯ ಶ್ರೀ. ಡಾ. ವ್ಹಿ.ಎಸ್.ಮಾಳಿ ಯವರು ಹಾಗೂ ಯರನಾಳ ಗ್ರಾಮದ ಹಾಗೂ ಶ್ರೀ ವಿದ್ಯಾಲಯ ಗುಂಡವಾಡದ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಆರ್.ಎಂ.ಸನದಿಯವರು ಮಾತನಾಡಿ, ತಂದೆ- ತಾಯಿ, ಗುರು-ಹಿರಿಯರಿಯರೊಂದಿಗೆ ಗೌರವದಿಂದ ಇರಬೇಕೆಂದು ಮಾರ್ಗದರ್ಶನ ಮಾಡಿದರು. ಇಂದಿನ ಪರೀಕ್ಷಾ ಫಲಿತಾಂಶಗಳಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸುತ್ತಿದ್ದು, ಬರುವ ದಿನಗಳಲ್ಲಿ ಪುರುಷರಿಗೆ ಮೀಸಲಾತಿ ಪಡೆದುಕೊಳ್ಳವ ಪರಿಸ್ಥಿತಿ ಬರಬಹುದು. ಅದಕ್ಕಾಗಿ ಗಂಡು ಮಕ್ಕಳು ಸರಿಯಾಗಿ ಅಭ್ಯಾಸ ಮಾಡಲು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ 2021-22 ರ ಎಸ್. ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ 16 ವಿದ್ಯಾರ್ಥಿ/ನಿಯರಿಗೆ ಗ್ರಾಮಸ್ಥರು ನಗದು ಬಹುಮಾನಗಳನ್ನು ನೀಡಿ ಗೌರವದಿಂದ ಸತ್ಕರಿಸಿದರು.

ಮಕ್ಕಳಿಗೆ ಅತ್ಯುತ್ತಮ ಬೋಧನೆ ಮಾಡುತ್ತಿರುವ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ/ಕಿಯರಿಗೆ ಹಾಗೂ ಸಂಸ್ಥೆಗೆ ಸಹಾಯ-ಸಹಕಾರ ನೀಡಿದ ಎಲ್ಲ ಗಣ್ಯರಿಗೆ ಹಾಗೂ ಶ್ರೀಗಳಿಗೆ, ಅತಿಥಿ ಮಹೋದರರಿಗೆ, ಪತ್ರಕರ್ತರಿಗೆ ಸಂಸ್ಥೆಯಿಂದ ಗೌರವದಿಂದ ಸನ್ಮಾನಿಸಲಾಯಿತು.

ಸಪ್ತಸಾಗರ, ತೀರ್ಥ, ಚಿಕ್ಕೂಡ, ಸಿದ್ದಾಪೂರ, ದರೂರ ( ಅರವಟಿಗೆ ), ನದಿ-ಇಂಗಳಗಾಂವ ದ ಎಲ್ಲ ಪಾಲಕ ಬಂಧುಗಳು, ಸಮಸ್ತ ಗ್ರಾಮಸ್ಥರು,ಆವ್ಹಾನಿತರು, ಶಾರದಾ ಹಿರಿಯ ವಿದ್ಯಾರ್ಥಿ/ನಿಯರ ಸಮೂಹ, ಆಡಳಿತ ಮಂಡಳಿಯವರು, ಶಾಲಾ ಸಿಬ್ಬಂದಿ ಹಾಗೂ ಶಾಲಾ ವಿದ್ಯಾರ್ಥಿ/ನಿಯರೆಲ್ಲರೂ ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಡಿ.ಬಿ.ನದಾಫ ರವರು ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಶ್ರೀ ಸುರೇಶ ಸವದಿಯವರ ಮಾರ್ಗದರ್ಶನದಂತೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು. ಶಿಕ್ಷಕಿಯರಾದ ಶ್ರೀಮತಿ. ಫಾತೀಮಾ ಕೋರ್ಬು, ಶಿಕ್ಷಕರಾದ ಶ್ರೀ. ಮಹಮ್ಮದ ನದಾಫ, ಶ್ರೀ.ಸಂತೋಷ ತ ಸಾಂವಗಾಂವ ನಿರೂಪಿಸಿದರು, ಪ್ರಾಥಮಿಕ ವಿಭಾಗದ ಶ್ರೀ ಮುಕುಂದ ತೀರ್ಥ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!