ಬೆಳಗಾವಿ
ವರದಿ : ಸುನೀಲ್ ಕಬ್ಬೂರ
ಬೆಳಗಾವಿ :ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಸದ್ಗುರು ಶ್ರೀ ಚನ್ನವೃಷಬೇಂದ್ರ ದೇವರಕೊಂಡಜ್ಜನವರ ಲೀಲಾಮಠ ಹಾರೂಗೇರಿಯ ಶ್ರೀಮಠದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶಿವನಾಮ ಭಜನೆ “ಓಂ ನಮಃ ಶಿವಾಯ” ಮಹಾಮಂತ್ರ 7 ದಿನಗಳ ಕಾಲ ಶ್ರೀಮಠದಲ್ಲಿ ನಡೆಯಲಿದೆ
ಈ ಕಾರ್ಯಕ್ರಮ ದಿ-14-2-2023 ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ಶಿವಾನಂದ ಭಾರತಿ ಅಪ್ಪಾಜಿ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳುವ ಮೂಲಕ ಪ್ರಾರಂಭವಾಗುತ್ತದೆ ಆದಕಾರಣ ಶ್ರೀಮಠದ ಎಲ್ಲ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳವರ ದಶ೯ನ ಆಶೀರ್ವಾದ ಪಡೆದುಕೊಳ್ಳುವಂತೆ ಶ್ರೀ ಲೀಲಾಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ