ರಾಯಲಿಂಗೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ

Share the Post Now

ಬೆಳಗಾವಿ

ವರದಿ :ಶಶಿ ಪುಂಡಿಪಲ್ಲೇ

ಅಥಣಿ ತಾಲ್ಲೂಕಿನ ಕಕಮರಿ ಗುರುಕುಲ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ಸದ್ಗುರು ರಾಯಲಿಂಗೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ವಿಜೃಂಭಣೆಯಿಂದ ಜರುಗಿತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ಅಭಿನವ ಗುರುಲಿಂಗಜಂಗಮ ಮಹಾಸ್ವಾಮಿಜಿ, ಶ್ರೀ ರಾಯಲಿಂಗೇಶ್ವರ ಸಂಸ್ಥಾನ ಮಠ ಕಕಮರಿ ಇವರು ಮಾತನಾಡಿ “ವಿದ್ಯೆ ಕಲಿತ ವ್ಯಕ್ತಿ ಭ್ರಷ್ಟಾನಾಗಬಹುದು ಆದರೆ ಸಂಸ್ಕಾರ ಕಲಿತ ವ್ಯಕ್ತಿ ಭ್ರಷ್ಟನಾಗಲಾರ” ಅಂತಹ ಸಂಸ್ಕಾರಯುತ ಶಿಕ್ಷಣ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ ಸ್ಥಾನ ಪಡೆಯುವ ಮೂಲಕ ಜನ್ಮ ನೀಡಿದ ತಂದೆ ತಾಯಿಗಳಿಗೆ, ವಿಧ್ಯೆ ನೀಡಿದ ಗುರುಗಳಿಗೆ ಹಾಗೂ ಸಂಸ್ಥೆಗೆ ಒಳ್ಳೆಯ ಹೆಸರು ತರವಂತವರಾಗಲಿ ಎಂದು ಆಶೀರ್ವಧಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರಕಾರಿ ಪದವಿಪೂರ್ವ ಕಾಲೇಜು ತುಂಗಳದ ಶಿಕ್ಷಣಶಾಸ್ತ್ರ ಉಪನ್ಯಾಸಕರಾದ ಶ್ರೀ ಎಚ್ ಎ ಮಗದುಮ್ ಮಾತನಾಡಿ ಸಾಧನೆ ಮಾಡಲು ಅಂಗಾಗ ವೈಫಲ್ಯಗಳು ಹಾಗೂ ನಮ್ಮ ಆಲಸ್ಯಗಳಿಂದ ಬೇಲಿಯಾಗಬಾರದು. ನಿಜವಾದ ಸಾಧನೆ ಎಂದರೆ ನಾವು ಮಾಡಿದ ಕಾಯಕ ಆತ್ಮ ತೃಪ್ತಿ ನೀಡಿದರೆ ಅದುವೇ ಸಾಧನೆ ಎಂದು ಪ್ರೇರಣಾದಾಯಕ ಮಾತುಗಳನ್ನಾಡಿದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಪದವಿಪೂರ್ವ ಕಾಲೇಜು ಜಿಲ್ಲಾ ಮಟ್ಟದಲ್ಲಿ ಸಾಧನೆಗೈಯಲು ಕಾರಣರಾದ ಎಲ್ಲಾ ಉಪನ್ಯಾಸಕರಿಗೆ ಸಂಸ್ಥೆಯ ಶ್ರೀಗಳು ಸನ್ಮಾನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀ ಜಿ ಆರ್ ಬಸರಗಿ, ಅತಿಥಿಗಳಾಗಿ ಆಗಮಿಸಿದ್ದ ಕಕಮರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ಹಣಮಂತ ಕಾಂಬಳೆ, ಪದವಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಶಿವಗುರು ಬಸರಗಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಗಮೇಶ ಬಸರಗಿ ಹಾಗೂ ಕಾಲೇಜಿನ ಉಪನ್ಯಾಸಕ ವೃಂದದವರು ಹಾಜರಿದ್ಧರು. ಕಾರ್ಯಕಮವನ್ನು ಕುಮಾರಿ ಸಾವಿತ್ರಿ ಮೈಗೂರ, ಭಾಗ್ಯಶ್ರೀ ತೇಲಿ ನಿರೂಪಿಸಿ, ಕುಮಾರಿ ಪ್ರೀಯಾಂಕ ಬಾಳಿಕಾಯಿ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!