ಬೆಳಗಾವಿ
ಮುಗಳಖೋಡ: ಸಮೀಪದ ಹಂದಿಗುಂದ ಗ್ರಾಮದ ನೂತನ ಶ್ರೀ ಸಿದ್ದೇಶ್ವರ ಮಠದ ಲೋಕಾರ್ಪಣೆ ಹಾಗೂ ಗುರುವಂದನಾ ಸಮಾರಂಭದ ನಿಮಿತ್ಯ ನಡೆದ ಒಂದು ತಿಂಗಳ ನಿರಂತರ ಬಸವ ಪುರಾಣ ಪ್ರವಚನದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲ ಕಾರ್ಯಕರ್ತರಿಗೆ ಶ್ರೀ ಸಿದ್ದೇಶ್ವರ ಮಠದ ಸಭಾಂಗಣದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶೇಗುಣಸಿಯ ಶ್ರೀ ಡಾ. ಮಹಾಂತ ಶಿವಯೋಗಿಗಳು ಮಾತನಾಡಿ ಹಂದಿಗುಂದ ಗ್ರಾಮದ ಗುರು ಹಿರಿಯರು, ಭಾಗದ ಶಾಸಕರು, ಸಚಿವರು, ರಾಜಕೀಯ ಧುರೀಣರು, ತಂದೆ ತಾಯಂದಿರು, ಮಹಿಳಾ ಕಾರ್ಯಕರ್ತರು, ಮಕ್ಕಳು, ಮಹಿಳೆಯರು, ಆಡಳಿತ ಮಂಡಳಿಯವರು ಸೇರಿ ಒಟ್ಟಾರೆಯಾಗಿ ಈ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಯಶಸ್ವಿಗೊಳಿಸಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣಿಕರ್ತರಾದ ಎಲ್ಲ ಕಾರ್ಯಕರ್ತರಿಗೂ ಹಾಗೂ ಭಕ್ತಾದಿಗಳಿಗೂ ಅಭಿನಂದನೆ ಸಲ್ಲಿಸಿದರು.
ಈ ಅಭಿನಂದನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿಮ್ಮಡದ ಶ್ರೀ ಪ್ರಭು ಮಹಾ ಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಹಂದಿಗುಂದದ ಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ರಾಮನಗೌಡ ಪಾಟೀಲ್, ಪ್ರಶಾಂತ್ ಹಿರೇಮಠ್, ಎಸ್ ಎಸ್ ತೇರದಾಳ್ ಸೇರಿದಂತೆ ಶ್ರೀಮಠದ ಆಡಳಿತ ಮಂಡಳಿಯ ಸದಸ್ಯರು ಗ್ರಾಮದ ಗುರುಹಿರಿಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.