ಬೆಳಗಾವಿ
ಹಾರೂಗೇರಿ : ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಪವಾಡ ಪುರುಷ, ಲೀಲಾವತಾರಿ, ಶಾಪನುಗ್ರಹ ಸಮರ್ಥ್ ಸದ್ಗುರು ಶ್ರೀ ದೇವರಕೊಂಡಜ್ಜನವರ ಶ್ರೀಮಠದಲ್ಲಿ ಶಿವರಾತ್ರಿ ಸಪ್ತಾಹ ಪ್ರಾರಂಭದ ಕಾರ್ಯಕ್ರಮ ಸದ್ಗುರು ಶ್ರೀಗಳವರ ಅಮೃತ ಹಸ್ತದಿಂದ ಈ ದಿನ ಜರುಗಿತು. ಈ ಸಂದರ್ಭದಲ್ಲಿ ಅನೇಕ ಭಕ್ತಾದಿಗಳು ಪೂಜ್ಯ ಶ್ರೀ ಡಾ. ಶಿವಾನಂದ ಭಾರತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ತದನಂತರ ಓಂ ನಮಃ ಶಿವಾಯ ಮಂತ್ರೋಚಾರಣೆ ಜರುಗಿತು. ಏಳು ದಿನಗಳ ಪರ್ಯಂತರವಾಗಿ ಈ ಕಾರ್ಯಕ್ರಮ ಜರುಗುತ್ತದೆ.
ವರದಿ : ಸುನೀಲ್ ಕಬ್ಬೂರ