ಕುಡಚಿ ಮತಕ್ಷೇತ್ರದ ಬಿಜೆಪಿ ಪಕ್ಷದಿಂದ ಬಸವರಾಜ ಅರಕೇರಿ ಅಖಾಡಕ್ಕೆ

Share the Post Now

ಬೆಳಗಾವಿ

ವರದಿ : ಸುನೀಲ್ ಕಬ್ಬೂರ


ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಎಸ್ಸಿ ಮೀಸಲು ವಿಧಾನಸಭೆ ಮತಕ್ಷೇತ್ರದಿಂದ ೨೦೨೩ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸುವುದಾಗಿ ಪತ್ರಕರ್ತ, ಉದ್ಯಮಿ ಬಸವರಾಜ ಅರಕೇರಿ ತಿಳಿಸಿದರು.
ಹಾರೂಗೇರಿ ಪಟ್ಟಣದ ಶ್ರೀರಾಮ ನಗರದಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕುಡಚಿ ವಿಧಾನಸಭಾ ಮತಕ್ಷೇತ್ರದ ಪತ್ರಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕುಡಚಿ ಮತಕ್ಷೇತ್ರದ ಬಿಜೆಪಿ ಪಕ್ಷದಲ್ಲಿ, ಆರ್.ಎಸ್.ಎಸ್., ಪಕ್ಷ ಸಂಘಟನೆ ಮತ್ತು ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಕಳೆದ ೨೦ ವರ್ಷಗಳಿಂದ ಪ್ರಾಮಾಣಿಕವಾಗಿ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಬರುತ್ತಿದ್ದು, ಕುಡಚಿ ವಿಧಾನಸಭೆ ಮತಕ್ಷೇತ್ರದ ಓರ್ವ ಸಾಮಾನ್ಯ ಕ್ರೀಯಾಶೀಲ ಕಾರ್ಯಕರ್ತನಿಗೆ ಪಕ್ಷ ಟಿಕೇಟ್ ನೀಡಬೇಕು.
ನನ್ನ ಗ್ಯಾಸ್ ಏಜೆನ್ಸಿಯಲ್ಲಿ ೨೫ ಸಾವಿರಕ್ಕೂ ಅಧಿಕ ಗ್ಯಾಸ್ ಸಂಪರ್ಕ ಹೊಂದಿದ ಗ್ರಾಹಕರಿದ್ದು, ನಿತ್ಯ ಗ್ಯಾಸ್ ಗ್ರಾಹಕರೊಂದಿಗೆ ಉತ್ತಮ ಸಂಪರ್ಕದಲ್ಲಿರುವುದರಿ0ದ ಗೆಲುವು ಖಚಿತವಾಗಲಿದೆ. ಅಲ್ಲದೇ ಕಳೆದ ೨೩ವರ್ಷಗಳಿಂದ ಪತ್ರಕರ್ತರಾಗಿ, ಉದ್ಯಮಿಯಾಗಿ, ಸಮಾಜಸೇವೆ ಹಾಗೂ ನಾನಾ ಸಂಘಟನೆಗಳಲ್ಲಿ ಸಕ್ರೀಯವಾಗಿದ್ದುಕೊಂಡು ಎಲ್ಲ ಸಮುದಾಯದವರೊಂದಿಗೆ ಒಳ್ಳೆಯ ಸ್ನೇಹ, ಸಂಬAಧ, ಬಾಂಧವ್ಯ ಉತ್ತಮವಾಗಿದೆ. ಹೀಗಾಗಿ ಸ್ವಂತ ವರ್ಚಸ್ಸಿನಿಂದಲೂ ಗೆಲುವು ಸಾಧಿಸುವ ಸಾಮರ್ಥ್ಯವಿದೆ ಎಂದು ಬಸವರಾಜ ಅರಕೇರಿ ಹೇಳಿದರು.
ಸಂಘದ ಕಾರ್ಯದರ್ಶಿ ಸದಾಶಿವ ಬಡಿಗೇರ ಮಾತನಾಡಿ ಪತ್ರಕರ್ತರಾಗಿ, ಉದ್ಯಮಿಯಾಗಿ ಕುಡಚಿ ವಿಧಾನಸಭೆ ಮತಕ್ಷೇತ್ರದಲ್ಲಿ ಲಕ್ಷಾ0ತರ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಬಸವರಾಜ ಅರಕೇರಿ ಅವರು ಜನಪರ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸಮಾಜದಲ್ಲಿ ನೊಂದವರಿಗೆ ನ್ಯಾಯ ಒದಗಿಸಿದ್ದಾರೆ. ಕುಡಚಿ ವಿಧಾನಸಭೆ ಮತಕ್ಷೇತ್ರದ ಪ್ರತಿಯೊಂದು ಗ್ರಾಮ, ಪಟ್ಟಣದ ಒಟ್ಟಾರೆ ಮತಕ್ಷೇತ್ರದ ಜನರೊಂದಿಗೆ ಪಕ್ಷಾತೀತವಾಗಿ ಉತ್ತಮ ಸಂಬ0ಧದ ಜತೆಗೆ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರೊಂದಿಗೆ ನಿತ್ಯ ಒಡನಾಟದಲ್ಲಿದ್ದಾರೆ. ಬಸವರಾಜ ಅರಕೇರಿ ಅವರಿಗೆ ೨೦೨೩ರ ಚುನಾವಣೆಯಲ್ಲಿ ಕುಡಚಿ ಮತಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಟಿಕೇಟ್ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸಂಘದ ಗೌರವಾಧ್ಯಕ್ಷ ಶಿವಯ್ಯ ಮಠಪತಿ ಅವರು ಮಾತನಾಡುತ್ತ ಬಸವರಾಜ ಅರಕೇರಿ ಅವರಿಗೆ ಕುಡಚಿ ಮತಕ್ಷೇತ್ರದಲ್ಲಿ ಪಕ್ಷಾತೀತವಾಗಿ ಮತದಾರರ ಬೆಂಬಲವಿದೆ. ಅವರಿಗೆ ಲಕ್ಷಾö್ಯಂತರ ಜನರ ಪರಿಚಯವಿದೆ. ಸರಳ, ಸಜ್ಜನ, ಸುಸಂಸ್ಕೃತ ವಿದ್ಯಾವಂತರಾಗಿದ್ದಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಜಾತ್ಯಾತೀತ ಮತ್ತು ಪಕ್ಷಾತೀತ ಬೆಂಬಲ ವ್ಯಕ್ತವಾಗುವುದರೊಂದಿಗೆ ಹೆಚ್ಚಿನ ಮತಗಳ ಅಂತರದಿ0ದ ಗೆಲ್ಲಲಿದ್ದಾರೆ. ಸ್ಥಳೀಯರಾಗಿದ್ದರಿಂದ ಕ್ಷೇತ್ರದ ಅಭಿವೃದ್ಧಿ ಕೆಲಸಗಳೊಂದಿಗೆ ಕ್ಷೇತ್ರದ ಜನರು ನಿತ್ಯ ಇವರ ಸಂಪರ್ಕದಲ್ಲಿರಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕುಡಚಿ ಮತಕ್ಷೇತ್ರ ಸಂಘದ ಖಜಾಂಚಿ ಹನಮಂತ ಕುರಿ, ಶಿವಾಜಿ ಮೇತ್ರಿ, ಹನಮಂತ ಸಣ್ಣಕ್ಕಿನವರ, ಸುನೀಲ ಕಬ್ಬೂರ, ಮಾರುತಿ ಹಳ್ಳೂರೆ, ಸಿ.ಎಸ್.ಹಿರೇಮಠ, ಕಾಂಚನಾ ಬಡಿಗೇರ, ಮಹಾದೇವ ಕಾಂಬಳೆ, ವಿಠ್ಠಲ ಬಡಿಗೇರ, ಶ್ರೀನಾಥ ಶಿರಗೂರ, ಶ್ರೀನಿವಾಸ ಕುಲಕರ್ಣಿ ಮೊದಲಾದ ಹಿರಿಯ ಪತ್ರಕರ್ತರು ಬಸವರಾಜ ಅರಕೇರಿ ಅವರನ್ನು ಚುನಾವಣೆಗೆ ನಿಲ್ಲಿಸಲು ತೀರ್ಮಾಣಿಸಲಾಗಿದ್ದು, ಬಿಜೆಪಿ ಪಕ್ಷ ಟಿಕೇಟ್ ನೀಡಬೇಕು. ಆಗ ಎಲ್ಲರೂ ಒಗ್ಗಟ್ಟಾಗಿ ಹೆಚ್ಚಿನ ಮತಗಳ ಅಂತರದ ಗೆಲುವಿಗೆ ಶ್ರಮಿಸಲಾಗುವುದು ಎಂದು ತಮ್ಮತಮ್ಮ ಅಭಿಪ್ರಾಯಗಳನ್ನು ಹಂಚಿಕೊ0ಡರು.
ಗಣ್ಯರಾದ ಬಸವರಾಜ ಆಸಂಗಿ, ಶ್ರೀಮಂತ ದಳವಾಯಿ, ಚಿದಾನಂದ ಉಮರಾಣಿ,ಸಂಜೀವ ಬ್ಯಾಕೂಡೆ, ಶಶಿ ಕೊಕಟನೂರ, ಆಕಾಶ ತೇರದಾಳ, ಶ್ರೀಮಂತ ಘಟನಟ್ಟಿ, ಕುಮಾರ ಸುತಾರ, ಸಂತೋಷ ಮುಗಳಿ, ಅಜಯ ತೇರದಾಳ, ಸಂಗಮೇಶ ಹಿರೇಮಠ, ಶಿವಾನಂದ ಠಕ್ಕಣ್ಣವರ, ಆಕಾಶ ತೆಳಗಡೆ, ಯಲ್ಲಪ್ಪ ಮಬನೂರ, ತುಕಾರಾಮ ಮದಲೆ, ರಂಜಾನ ಮುಲ್ಲಾ, ಖಲೀದ ಪೀರಜಾದೆ ಮೊದಲಾದವರು ಉಪಸ್ಥಿತರಿದ್ದರು.
ಸುನೀಲ ಕಬ್ಬೂರ ಕಾರ್ಯಕ್ರಮ ನಿರೂಪಿಸಿದರು.


Leave a Comment

Your email address will not be published. Required fields are marked *

error: Content is protected !!