ಬೆಳಗಾವಿ
ಹಾರೂಗೇರಿ : ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತು ರಾಯಬಾಗ ಹಾಗೂ ಬಿ.ಆ.ದರೂರ ಪದವಿ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಶಿವಸಂಚಾರ ನಾಟಕೋತ್ಸವ ಕಾರ್ಯಕ್ರಮದಲ್ಲಿ ಅಭಿಮತ ವ್ಯಕ್ತಪಡಿಸಿದ ದರೂರ ಶಿಕ್ಷಣ ಸಂಸ್ಥೆಯ ಆಡಳಿತಧಿಕಾರಿ, ಸಾಹಿತಿ ಡಾ. ವ್ಹಿ ಎಸ್ ಮಾಳಿ, ನಾಟಕಗಳು ಮನುಷ್ಯನ ಮನದ ಭಾವನೆಗಳ ನಾಡಿಮಿಡಿತಾಗಳಾಗಿವೆ. ಪ್ರತಿ ಸನ್ನಿವೇಶವನ್ನು ಸಂದರ್ಭಕ್ಕೆ ತಕ್ಕಂತೆ ಅಭಿವ್ಯಕ್ತಗೊಳಿಸಿ ಎದುರಿನ ಮನಸ್ಸಿಗೆ ಮನರಂಜನೆಯ ಜೊತೆಗೆ ನೈತಿಕತೆಯನ್ನು ತಿಳಿಹೇಳುವಲ್ಲಿ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ ಅಲ್ಲದೆ ಇಂದಿನ ಜಾಗತೀಕರಣ,ಆಧುನಿಕತೆ,ವ್ಯಾಪಾರಿಕರಣಗಳ ಮಧ್ಯದಲ್ಲಿ ನಾಟಕಗಳನ್ನು ಉಳಿಸಿ ಬೆಳೆಸುತ್ತಿರುವ ಶಿವಸಂಚಾರ ನಾಟಕ ತಂಡಕ್ಕೆ ನಾವು ಸದಾ ಬೆಂಬಲವಾಗಿರುತ್ತೇವೆ ಎಂದರು.ಈ ಸಂದರ್ಭದಲ್ಲಿ ಪಟ್ಟಣದ ಹಿರಿಯರಾದ ಡಿ.ಸಿ.ಸದಲಗಿ ಅಧ್ಯಕ್ಷತೆ ವಹಿಸಿದ್ದರು.ಚಿಂತಕ ಡಿ.ಎಸ್.ನಾಯಿಕ,ಜಾನಪದ ತಜ್ಞ ಬಿ ಎ ಜಂಬಗಿ,ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಎಮ್.ಗಸ್ತಿ ಎಮ್.ಬಿ.ಪಾಟೀಲ, ಬಾಬು ಹಳ್ಳೂರ, ಬಿ.ಬಿ.ಕರ್ಣವಾಡಿ, ಬಸನಗೌಡ ಆಸಂಗಿ, ಎಸ್.ಎ.ದಟವಾಡ, ಹಿರಿಯರಾದ ಆರ್.ಎಸ್.ಯಲಶೆಟ್ಟಿ, ಜೀವನಗೌಡ ಎನ್’ ಡಾ.ಪಿ.ಬಿ.ನರಗುಂದ, ಈರಣಗೌಡ ಪಾಟೀಲ, ಧನಪಾಲ ಶಿರಹಟ್ಟಿ,ತಿಮ್ಮಪ್ಪ ದಾಸಪ್ಪನವರ,
ಎಸ್.ಬಳವಾಡ,ಡಾ.ರತ್ನಾ ಬಾಳಪ್ಪನವರ, ಸಿದ್ದು ಅಥಣಿ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಮುಖಂಡರಾದ ಬಸವರಾಜ ಸನದಿಯವರು ಡಾ.ವಿ.ಎಸ್.ಮಾಳಿಯವರ ನ್ನು ಸನ್ಮಾನಿಸಿ ಗೌರವಿಸಿದರು. ಕಸಾಪ ತಾಲೂಕಾಧ್ಯಕ್ಷ ರವೀಂದ್ರ ಪಾಟೀಲ ಪ್ರಾಸ್ತಾವಿಕ ನುಡಿಗಳಾಡಿದರು. ಶಂಕರ ಕ್ಯಾಸ್ತಿ ಸ್ವಾಗತಿಸಿದರು. ಸುಖ ದೇವ ಕಾಂಬಳೆ ನಿರೂಪಿಸಿದರು. ಟಿ.ಎಸ್.ವಂಟಗೂಡಿ ವಂದಿಸಿದರು.
ವರದಿ : ಸುನೀಲ್ ಕಬ್ಬೂರ