ಬೆಳಗಾವಿ
ಆರೋಪ ತಳ್ಳಿ ಹಾಕಿದ ಪುರಸಭೆ ವಾರ್ಡ್ ೩ರ ಸದಸ್ಯ ರಾಜುಗೌಡ ನಾಯಿಕ ಹೇಳಿಕೆ
ಮುಗಳಖೋಡ ಪ್ರವಾಸಿ ಮಂದಿರದಲ್ಲಿ ದಿ: ೧೫ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ೨೦ ಸಾವಿರ ಲಂಚದ ಆರೋಪ ಶುದ್ಧ ಸುಳ್ಳು: ಪುರಸಭೆ ಸದಸ್ಯ ಮಹಾಂತೇಶ ಯಾರಡೆತ್ತಿ;
ಮುಗಳಖೋಡ ಪ್ರವಾಸಿ ಮಂದಿರದಲ್ಲಿ ದಿ.೧೫ ರಂದು ಸುದ್ದಿಗೋಷ್ಠಿಯಲ್ಲಿ ಮನೆ ಹಂಚಿಕೆಯಲ್ಲಿ ಪುರಸಭೆ ಸದಸ್ಯ ರಾಜುಗೌಡ ನಾಯಿಕ ೨೦ ರೂಪಾಯಿ ಲಂಚ ಕೇಳಿದ್ದರು…. ಎಂದು ನಾನು ಹೇಳಿದ್ದೆ ಸುಳ್ಳು: ಚಿದಾನಂದ ಕರಿಭಿಮಗೋಳ;
ಮುಗಳಖೋಡ: ಮುಗಳಖೋಡ ಪುರಸಭೆಯ ವಾರ್ಡ್ ನಂಬರ್ ೩ರ ಸದಸ್ಯ ರಾಜೂಗೌಡ ನಾಯಿಕ ಅವರು ನನ್ನಿಂದ ಯಾವುದೇ ರೀತಿಯ ಹಣ ತೆಗೆದುಕೊಂಡಿಲ್ಲ, ನಾನು ಅವರ ಮೇಲೆ ಸುಳ್ಳು ಆರೋಪ ಮಾಡಿದ್ದೇನೆ, ಅವರು ನಾವು ಅಣ್ಣ -ತಮ್ಮಂದಿರಾಗಿ ಇದ್ದೇವೆ. ಅವತ್ತು(೧೫ರಂದು) ನಮ್ಮ ಮನೆಯಲ್ಲಿ ವೈಯಕ್ತಿಕವಾಗಿ ಕಲಹ ಆದಕಾರಣ, ನಾನು ಮಾನಸಿಕವಾಗಿ ನೊಂದಿದ್ದೆ ಹಾಗೂ ಗೊಂದಲದಲ್ಲಿದ್ದೆ, ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿದ್ದ ಪತ್ರಿಕಾಗೋಷ್ಠಿಗೆ ನಾನು ಹೋದೆ, ಮನೆಗಳ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಅಕ್ರಮವಾಗಿದೆ ಎಂಬ ವಿಷಯ ಬರುತ್ತಿದ್ದಂತೆ ನನಗೆ ಅರಿವು ಇಲ್ಲದೇ ಪುರಸಭೆ ಸದಸ್ಯ ರಾಜುಗೌಡ ನಾಯಿಕ ಅವರ ಬಗ್ಗೆ ೨೦ ಸಾವಿರ ರೂಪಾಯಿ ಲಂಚದ ಆರೋಪ ಮಾಡಿದ್ದು ಬೇಸರ ತಂದಿದೆ, ಮನಸ್ಸಿಗೆ ನೋವುಂಟು ಮಾಡಿದೆ, ನನ್ನಿಂದ ತಪ್ಪಾಗಿದೆ, ನನ್ನನ್ನು ಕ್ಷಮಿಸಿ ಬಿಡಿ ಈ ಆರೋಪವನ್ನು ನಾನು ಹಿಂದಕ್ಕೆ ಪಡೆಯುತ್ತೇನೆ ಎಂದು ಚಿದಾನಂದ ಕರಿಭೀಮಗೋಳ ಸುದ್ದಿಗಾರರಿಗೆ ತಿಳಿಸಿದರು.
ಅವರು ಮುಗಳಖೋಡ ಪಟ್ಟಣದ ಕೆನಾಲ್ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ದಿ.೧೬ರಂದು ಸಾಯಂಕಾಲ ೫ಗಂಟೆಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ವಿವರವಾಗಿ ತಿಳಿಸಿ ಸ್ಪಷ್ಟೀಕರಣ ನೀಡಿದರು.
ಅವರು ನಿನ್ನೆ ಬುಧವಾರ ದಂದು
ಮುಗಳಖೋಡ ಪುರಸಭೆಯ ವಾರ್ಡ್ ನಂಬರ್ ೨೦ರಲ್ಲಿ ವಸತಿ ರಹಿತರಿಗೆ ನಿವೇಶನ ಹಂಚಿಕೆಯಾಗಿರುವ, ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ – ಅನ್ಯಾಯವಾಗಿದೆ ಎಂದು ಆರೋಪಿಸಿ ಕೆಲವು ದಲಿತಪರ ಸಂಘಟನೆಯ ಮುಖಂಡರು ಹಾಗೂ ಹಲವು ಪುರಸಭೆಯ ಸದಸ್ಯರು ಸೇರಿಕೊಂಡು ದಿ.೧೫ ರಂದು ಮುಗಳಖೋಡ ಪುರಸಭೆಯ ಪಿಡಬ್ಲ್ಯೂಡಿ ಪ್ರವಾಸಿ ಮಂದಿರದಲ್ಲಿ ಡಾಕ್ಟರ್ ಅಂಬೇಡ್ಕರ್ ಪೀಪಲ್ ಪಾರ್ಟಿ ಯುವ ಘಟಕದ ರಾಜ್ಯಾಧ್ಯಕ್ಷರು ಕೃಷ್ಣ ಸಿಎಂ ಮಂಡ್ಯ ಅವರ ನೇತೃತ್ವದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಚಿದಾನಂದ ಕರಿಭೀಮಗೋಳ ವಾರ್ಡ್ ನಂಬರ್ ೩ರ ಸದಸ್ಯ ರಾಜುಗೌಡ ನಾಯಿಕ ಅವರ ಬಗ್ಗೆ ವಸತಿ ರಹಿತ ಫಲಾನುಭಗಳಿಂದ ೨೦ ಸಾವಿರ ರೂಪಾಯಿ ಲಂಚ ಪಡೆದಿದ್ದರೂ ಎಂದು ಗಂಭಿರ ಆರೋಪ ಮಾಡಿದ್ದರು….
ಮುಗಳಖೋಡ ಪಿಡಬ್ಲ್ಯೂಡಿ ಪ್ರವಾಸಿ ಮಂದಿರದಲ್ಲಿ ದಿ: ೧೫ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ೩ನೇ ವಾರ್ಡಿನ ಪುರಸಭೆ ಸದಸ್ಯ ರಾಜೂಗೌಡ ನಾಯಿಕ ಅವರು ೨೦ ಸಾವಿರ ಲಂಚ ಪಡೆದ ಆರೋಪವು ಶುದ್ಧ ಸುಳ್ಳು, ಈ ರೀತಿ ಯಾರೂ ರಾಜಕೀಯ ಮಾಡಬಾರದು, ಪಟ್ಟಣವನ್ನು ಅಭಿವೃದ್ಧಿಪಡಿಸಲು ಎಲ್ಲರೂ ಕೈಜೋಡಿಸಬೇಕು, ಈ ಆರೋಪವು ಸತ್ಯಕ್ಕೆ ದೂರವಾದುದು ಎಂದು ಪುರಸಭೆ ಸದಸ್ಯ ಮಹಾಂತೇಶ ಯಾರಡೆತ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭೆ ಸದಸ್ಯ ರಾಜುಗೌಡ ನಾಯಿಕ ನಿವೇಶನ ಹಂಚಿಕೆಯಲ್ಲಿ ೨೦ ಸಾವಿರ ರೂಪಾಯಿ ಲಂಚ ಸ್ವೀಕಾರದ ಸುದ್ದಿ ಸುಳ್ಳು. ನಿನ್ನೆ ೨೦ ಸಾವಿರ ಲಂಚ್ ದ ಆರೋಪ ಮಾಡಿದ ವ್ಯಕ್ತಿ ಚಿದಾನಂದ ಕರಿಭೀಮಗೋಳ ಅವರು ಇವತ್ತು ನನ್ನ ಪಕ್ಕದಲ್ಲಿಯೇ ಇದ್ದಾನೆ, ತನಗೆ ಅರಿವಿಲ್ಲದಂತೆ ನನ್ನ ಬಗ್ಗೆ ಆರೋಪ ಮಾಡಿದ್ದಾನೆ ಎಂದು ಹೇಳುತ್ತಿದ್ದಾನೆ. ಈ ಆರೋಪವನ್ನು ನಾನು ಸಾರಸಗಟ್ಟಾಗಿ ತಳ್ಳಿಹಾಕುತ್ತೇನೆ. ಹಣವನ್ನು ಬಯಸಿ, ಕೀಳು ಮಟ್ಟದ ರಾಜಕೀಯ ಮಾಡುವುದಕ್ಕೆ ಬಂದಿಲ್ಲ. ಶಾಸಕ ಪಿ.ರಾಜೀವ್ ಅವರ ಬೆಂಬಲದಿಂದ ಜನಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇವೆ ಎಂದು ಪುರಸಭೆಯ ಸದಸ್ಯ ರಾಜೂಗೌಡ ನಾಯಿಕ ಸುದ್ದಿಗಾರರಿಗೆ ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ರಾಜುಗೌಡ ನಾಯಿಕ, ಮಹಾಂತೇಶ ಯರಡೆತ್ತಿ, ಮಾಜಿ ಪುರಸಭೆಯ ಪದನಿಮಿತ್ತ ಸದಸ್ಯ ರಾಮನಗೌಡ ಖೇತಗೌಡ, ರಾಜು ಗಸ್ತಿ, ಚಿದಾನಂದ ಕರಿಭೀಮಗೋಳ, ಪರಗೌಡ ಖೇತಗೌಡ, ರವಿ ಕೇತುಗೌಡ ಶಿವಾನಂದ ಕರಿಭೀಮಗೋಳ, ಸಿದ್ದರಾಮ ನಡುವಿನಕೇರಿ, ಅನಿಲ ಖೇತಗೌಡ, ಮಲ್ಲು ಯಡವಣ್ಣನವರ, ಪ್ರವೀಣ ಭಜಂತ್ರಿ, ಭೀಮು ಐಹೊಳೆ, ಯಲ್ಲಪ್ಪ ಹಾದಿಮನಿ ಇತರರು ಇದ್ದರು.
ವರದಿ: ಪ್ರಕಾಶ ಚ ಕಂಬಾರ





