ವರದಿ :ಸಚಿನ್ ಕಾಂಬ್ಳೆ
ಅಥಣಿ: ಪಟ್ಟಣದ ಹಲ್ಯಾಳ ರಸ್ತೆಯ ಮಂಜುಶ್ರಿ ಹೊಟೆಲ್ ಎದುರಿಗೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ.
ಶುಕ್ರವಾರ ಮಧ್ಯಾಹ್ನ ಅಥಣಿ ಹಾರೂಗೇರಿ ರಸ್ತೆಯಲ್ಲಿ ಕಬ್ಬು ತುಂಬಿಕೊಂಡು ಕಾರ್ಖಾನೆಗೆ ಹೊರಟಿದ್ದ ಟ್ರ್ಯಾಕ್ಟರ್ ಡಬ್ಬಿ ಪಲ್ಟಿ ಆಗಿದ್ದು, ಕಬ್ಬಿನ ನಡುವೆ ಸಿಲುಕಿದ್ದ ಇಬ್ಬರ ಸ್ಥಿತಿ ಗಂಭೀರ ಎಂದು ಹೇಳಲಾಗುತ್ತಿದೆ.
ಗಾಯಗೊಂಡವರು ಬಣಜವಾಡ ಗ್ರಾಮದವರು ಎಂದು ತಿಳಿದು ಬಂದಿದೆ.
ಕಲ್ಪನಾ ಚಂದ್ರಪ್ಪ ಮಾದರ(೨೨)
ಶ್ರೀದೇವಿ ಪರಶುರಾಮ ಅವಳೆ(೨೩)
ಸೂರಪ್ಪ ಕುಂಬೋಜ ಬೈಕ್ ಸವಾರ ಪ್ರಾಣಾಪಾಯದಿಂದ ಪಾರು
ಕಲ್ಪನಾ ಚಂದ್ರಪ್ಪ ಮಾದರ ಸ್ಥಿತಿ ಗಂಭೀರವಾಗಿದೆ
ಬಣಜವಾದಿಂದ ಅಥಣಿಯ ಖಾಸಗಿ ಗುಳ್ಳ ಆಸ್ಪತ್ರೆಗೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಚಿಕಿತ್ಸೆಗೆ ಮೀರಜ್ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ
ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.
ಯಾವುದೇ ಸಾವು ಇನ್ನೂ ವರದಿಯಾಗಿಲ್ಲ