ಬೆಳಗಾವಿ
ವರದಿ ಶ್ರೀ ಪ್ರಕಾಶ ಚ ಕಂಬಾರ ಮುಗಳಖೋಡ

ಮುಗಳಖೋಡ: ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಬ.ನೀ. ಕುಲಿಗೋಡ ಹೈಸ್ಕೂಲ್ ಆವರಣದಲ್ಲಿ 26 ಡಿಸೆಂಬರ್ 2022 ರಂದು ನಡೆದ ಅಖಿಲ ಕರ್ನಾಟಕ ಮಾಳಿ ಮಾಲಗಾರ ಸಮಾಜದ ರಾಜ್ಯ ಮಟ್ಟದ ದ್ವಿತೀಯ ಸಮಾವೇಶವನ್ನು ಪಕ್ಷಾತೀತವಾಗಿ ಮಾಡಲು ಮುಂದಾದಾಗ ಮುಖ್ಯಮಂತ್ರಿ ಅವರು ನಮ್ಮ ಮಾಳಿ ಮಾಲಗಾರ ಸಮಾಜದ ಗುರು ಹಿರಿಯರನ್ನು ಕರೆದು ಕೇವಲ ಬಿಜೆಪಿ ಪಕ್ಷದವರನ್ನು ಮಾತ್ರ ಸೇರಿಸಿ ಸಮಾವೇಶ ಮಾಡಿ ಹಾಗಾದರೆ ಮಾತ್ರ ನಿಮ್ಮೇಲ್ಲ ಬೇಡಿಕೆಯನ್ನು ಈಡೇರಿಸಲು ಸಾಧ್ಯ. ಇಲ್ಲವಾದಲ್ಲಿ ಈ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದಾಗ ನಾವೇಲ್ಲರೂ ಒಪ್ಪಿಕೊಂಡು ಬಿಜೆಪಿ ಪಕ್ಷದವರನ್ನು ಮಾತ್ರ ಸೇರಿಸಿ ಸಮಾವೇಶ ಮಾಡುಲು ಬದ್ದರಾದೇವು. ಅದರಂತೆ ಸಮಾವೇಶಕ್ಕೆ ರಾಜ್ಯದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಆಗಮಿಸಿ ಸಮಾಜದ ಎಲ್ಲ ಗುರು ಹಿರಿಯರು ಸಮ್ಮುಖದಲ್ಲಿ ಮಾತನಾಡಿದ ಮಾಳಿ ಮಾಲಗಾರ ಸಮಾಜ ಹಿಂದುಳಿದ ವರ್ಗಗಳಲ್ಲಿ ಒಂದಾಗಿದೆ ಹಾಗಾಗಿ ಈ ಸಮಾಜಕ್ಕೆ ಪ್ರತ್ಯೇಕ ನಿಗಮ ಘೋಷಣೆ ಮಾಡುವುದಾಗಿ ಹಾಗೂ ಪ್ರತ್ಯೇಕ ಹಣ ಮೀಸಲಿಡುವುದಾಗಿ ಭರವಸೆ ನೀಡಿ ಮುಂಬರುವ ಬಜೆಟ್ ನಲ್ಲಿ ನಿಗಮ ಘೋಷಣೆ ಮಾಡುತ್ತೆವೆ ಎಂದು ಹೇಳಿದರು.
ಆದರೆ ಇಂದು ಮಂಡಿಸಿದ ಬಜೆಟ್ ನಲ್ಲಿ ನಿಗಮವನ್ನು ಘೋಷಣೆ ಮಾಡಿದೆ ಮಾತು ತಪ್ಪಿದ್ದಾರೆ ಹಾಗೂ ಈ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ. ಇದರಿಂದ ಮಾಳಿ ಮಾಲಗಾರ ಸಮಾಜದ ಪ್ರತ್ಯೇಕ ನಿಗಮ ಸ್ಥಾಪನೆ ಕನಸಾಗಿಯೇ ಉಳಿದಿದೆ. ಇದರಿಂದಾಗಿ ಮಾಳಿ ಮಾಲಗಾರ ಸಮಾಜದ ಅಭಿವೃದ್ಧಿಗೆ ತನ್ನಿರೆರಚಿದಂತಾಗಿದೆ. ಹಾಗಾಗಿ ಮಾಳಿ ಮಾಲಗಾರ ಸಮಾಜದ ರಾಜ್ಯ ಎಲ್ಲ ಜನತೆ ಸನ್ಮಾನ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಅವರ ಮಂತ್ರಿಮಂಡಲದ ಮೇಲೆ ಅವರ ಮೇಲೆ ಸಿಟ್ಟಾಗಿದ್ದಾರೆ. ನಿಲ್ಲೂರು ನಿಂಬೆಕ್ಕ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡುವುದಾಗಿ ಹೇಳಿದ್ದರು ಹಾಗೂ ಜ್ಯೋತಿಬಾ ಫುಲೆ ಅವರ ಹೆಸರಲ್ಲಿ ರಾಜ್ಯ ಮಟ್ಟದ ಶಿಕ್ಷಕರ ಪ್ರಶಸ್ತಿ ನೀಡುವುದಾಗಿ ಭರವಸೆ ನೀಡಿದರು ಅದನ್ನು ಕೂಡಾ ಮಾಡಿಲ್ಲ. ಇದರೊಂದಿಗೆ ಮಾಳಿ ಮಾಲಗಾರ ಸಮಾಜದ ಯಾವುದೇ ರೀತಿಯ ಬೇಡಿಕೆಯನ್ನು ಪೊರೈಸಲು ಮುಖ್ಯಮಂತ್ರಿಯವರು ವಿಫಲವಾಗಿದ್ದಾರೆ. ಇದರಿಂದಾಗಿ ಈ ಸಮಾಜದಿಂದ ಮುಂಬರುವ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿ ಹಳ್ಳಿ ತಾಲೂಕು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಬೊಮ್ಮಾಯಿ ಅವರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷರಾದ ಡಾ ಸಿ ಬಿ ಕುಲಿಗೋಡ ಅವರು ಹಾಗೂ ಸಮಾಜದ ಎಲ್ಲ ಜನತೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.