ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಕರ್ನಾಟಕ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ೨೦೨೩-೨೦೨೪ ರ ಬಜೆಟ್ ಮಂಡನೆ ಮಾಡಿದ್ದಾರೆ, ಆದರೆ ಈ ಬಜೆಟ್ ದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ, ಏಕೆಂದರೆ ಬರುವ ಎರಡ್ಮೂರು ತಿಂಗಳಲ್ಲಿ ರಾಜ್ಯದ ಚುನಾವಣೆ ಬರಲಿದೆ, ಇವರ ಬಜೆಟ್ ಜಾರಿಯಾಗುವಷ್ಟರಲ್ಲಿ ನೀತಿ ಸಂಹಿತೆ ಬರಲಿದೆ, ಡಬಲ್ ಇಂಜಿನ ಸರಕಾರ ಇರುವ ಇವರು, ಜನಸಾಮಾನ್ಯರಿಗೆ ಮಾಡಿದ್ದಾದರೂ ಏನು ?, ರಾಜ್ಯದ ಜನತೆ ಬೆಲೆ ಏರಿಕೆ, ನಿರುದ್ಯೋಗ, ರೈತರ ನೂರಾರು ಸಮಸ್ಯೆ, ರಾಜ್ಯ ನೂರಾರು ಸಮಸ್ಸೆಗಳಿಂದ ಕೂಡಿದೆ, ಯಾವುದಕ್ಕೂ ಪರಿಹಾರ ಇಲ್ಲಿ ಇರುವುದಿಲ್ಲ, ಕೇವಲ ಸಾಂಪ್ರದಾಯಿಕವಾಗಿ ಮಂಡಿಸಿದ ಬಜೆಟ್ ಇದಾಗಿದೆ. ಎಂದು ಸಮಾಜ ಸೇವಕರಾದ ಚಂದ್ರಕಾಂತ ಹುಕ್ಕೇರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.